Mandya: ಮಂಡ್ಯ: ಸದ್ಯ ಕರ್ನಾಟಕದಲ್ಲಿ ಟ್ರೆಂಡ್ ಅಲ್ಲಿ ಇರುವ ವಿಷಯ ಅಂದ್ರೆ ಅದು ಬಿಗ್ಬಾಸ್ ಫಿನಾಲೆ ಗೆಲ್ಲೋದ್ಯಾರು ಅನ್ನೋ ವಿಷಯ. ಅದರಲ್ಲೂ ಗಿಲ್ಲಿನೇ ಗೆಲ್ಲೋದು, ಗಿಲ್ಲಿನೇ ಗೆಲ್ಲಲಿ ಅನ್ನೋ ಮಾತೇ ಹಲವರು ಹೇಳ್ತಾ ಇದ್ದಾರೆ. ಪ್ರಸಿದ್ಧರು ಕೂಡ ಗಿಲ್ಲಿ ಪರವಾಗಿಯೇ ಮಾತನಾಡುತ್ತಿದ್ದಾರೆ.
ನಿಂತಲ್ಲೇ ಪಂಚಿಂಗ್ ಡೈಲಾಗ್ ಹೇಳಿ, ಹಲವರ ನೆಚ್ಚಿನ ಸ್ಪರ್ಧಿಯಾಗಿರುವ ಗಿಲ್ಲಿಗೆ ಮಂಡ್ಯದಲ್ಲಂತೂ ಫುಲ್ ಸಪೋರ್ಟ್ ಸಿಗುತ್ತಿದೆ. ಇನ್ನು ವಿಶೇಷ ಅಂದ್ರೆ, ಎಂದಿಗೂ ಬಿಗ್ಬಾಸ್ ಸ್ಪರ್ಧಿಗಳ ಪರವಾಗಿ ಮತ ಕೇಳದ ಶಾಸಕರು ಕೂಡ ಇದೀಗ ಗಿಲ್ಲಿಗೆ ವೋಟ್ ಮಾಡಿ ಗೆಲ್ಲಿಸಿ ಅಂತಾ ಕೇಳಿದ್ದಾರೆ.
ಮಳವಳ್ಳಿ ಕ್ಷೇತ್ರದ ಹಾಲಿ ಶಾಸಕ ನರೇಂದ್ರಸ್ವಾಮಿ ಹಾಗು ಮಾಜಿ ಶಾಸಕ ಅನ್ನದಾನಿ ಮತ ಕೇಳಿ ಗಿಲ್ಲಿನಟ ನ್ನು ಗೆಲ್ಲಿಸುವಂತೆ ಮನವಿ ಮಾಡಿದ್ದಾರೆ. ಇನ್ನು ಗಿಲ್ಲಿ ಅಭಿಮಾನಿಗಳು ಸಹ ಸೋಶಿಯಲ್ ಮೀಡಿಯಾದಲ್ಲಿ ಗಿಲ್ಲಿಗಾಗಿ ಮತ ಕೇಳುವ ಪ್ರಯತ್ನ, ಅಭಿಯಾನ ಎಲ್ಲವೂ ಮಾಡ್ತಿದ್ದಾರೆ. ಬೈಕ್ ರ್ಯಾಲಿ ಮಾಡಿ, ಗಿಲ್ಲಿಯನ್ನು ಗೆಲ್ಲಿಸಿ ಅಂತಾ ಅವರ ಅಭಿಮಾನಿಗಳು ಮಂಡ್ಯದಲ್ಲಿ ಅಭಿಯಾನ ಮಾಡಿದ್ದಾರೆ.
ಗಿಲ್ಲಿ ಪೋಷಕರು ಕೂಡ, ಚುನಾವಣೆಯಲ್ಲಿ ಮತ ಕೇಳುವಂತೆ, ಜನರ ಬಳಿ ಮಗನನ್ನು ಗೆಲ್ಲಿಸಲು ಮನವಿ ಮಾಡಿದ್ದಾರೆ. ಏನೇ ಆಗಲಿ ಗಿಲ್ಲಿಗೆ ಜನರ ಬೆಂಬಲವಂತೂ ಸಖತ್ ಆಗೇ ಸಿಕ್ತಾ ಇದೆ. ಆದರೆ ಫಿನಾಲೆ ಗೆಲ್ಲೋದ್ಯಾರು ಅಂತಾ ಕಾದು ನೋಡಬೇಕಿದೆ.




