Mandya: ಮಂಡ್ಯ: ಮಂಡ್ಯದ ಕೆ.ಆರ್.ಪೇಟೆ ತಾಲೂಕಿನ ಪುರಾಣ ಪ್ರಸಿದ್ಧ ಹೇಮಗಿರಿ ದನಗಳ ಜಾತ್ರೆ ಶುರುವಾಗಿದ್ದು, ರಾಜ್ಯದ ಬೇರೆ ಬೇರೆ ಸ್ಥಳಗಳಿಂದ ರೈತರು ತಮ್ಮ ಹಸುಗಳನ್ನು ಜಾತ್ರೆಗೆ ತಂದಿದ್ದಾರೆ.
ಅದರಲ್ಲೂ ಈ ಜಾತ್ರೆಯ ಸೆಂಟರ್ ಆಫ್ ಅಟ್ರ್ಯಾಕ್ಷನ್ ಅಂದ್ರೆ ಅದು ಹಳ್ಳಿಕಾರ್ ಹಸು. ಹಳ್ಳಿಕಾರ್ ಹಸುಗಳನ್ನು ಶೃಂಗಾರ ಮಾಡಿ, ಈ ಜಾತ್ರೆಗೆ ಕರೆತರಲಾಗತ್ತೆ. ಈ ಬಾರಿ ಈ ರಮಣೀಯ ದೃಶ್ಯವನ್ನು ಡ್ರೋನ್‌ನಲ್ಲಿ ಸೆರೆಹಿಡಿಯಲಾಗಿದೆ.
ಈ ಜಾತ್ರೆಯಲ್ಲಿ ಹಸುಗಳ ಸ್ವಾಗತಕ್ಕಾಗಿ ಡಿ.ಜೆ ಸೇರಿ ಹಲವು ಜಾನಪದ ಕಲಾ ತಂಡಗಳು ಸಹ ತನ್ನ ಕಾರ್ಯಕ್ರಮ ನೀಡಿದೆ. ಇನ್ನು ಈ ರಾಸುಗಳ ಬೆಲೆ ಕೇಳಿದ್ರೆ, ನೀವು ದಂಗಾಗಿ ಹೋಗ್ತೀರಾ. ಈ ಜಾತ್ರೆಯಲ್ಲಿ ನಿಮಗೆ 50 ಸಾವಿರದಿಂದ 12 ಲಕ್ಷ ಬೆಲೆ ಬಾಳುವ ರಾಸುಗಳು ಭಾಗಿಯಾಗಿದೆ. ಇನ್ನು ದುಬಾರಿ ಹಳ್ಳಿಕಾರ್ ಹಸುಗಳನ್ನು ಬೆಚ್ಚನೆಯ ಹುಲ್ಲಿನ ಹಾಸಿಗೆಯ ಮೇಲೆ ಕೂರಿಸಿ, ನಾಣ್ಯದ ಹಾರಗಳನ್ನು ಹಾಕಿ, ಶೃಂಗಾರ ಮಾಡಿ ಕರೆತರಲಾಗಿದೆ. ಹೆಚ್ಚಿನ ಸಂಖ್ಯೆಲ್ಲಿ ರಾಸುಗಳ ಪ್ರಿಯರು ಈ ಜಾತ್ರೆಗೆ ಆಗಮಿಸಿ, ಹಳ್ಳಿಕಾರ ತಳಿಯ ಕಲರವ ಕಣ್ತುಂಬಿಕ“ಳ್ಳುತ್ತಿದ್ದಾರೆ.




