- Advertisement -
ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ ಸುಮಲತಾ ಅಂಬರೀಶ್, ಸಂಸದೆಯಾಗಿ ಪ್ರಮೋಟ್ ಆಗಿದ್ದಾರೆ. ತಮ್ಮ ಗೆಲುವನ್ನೇ ಅರಗಿಸಿಕೊಳ್ಳೋದಕ್ಕೆ ಆಗ್ತಿಲ್ಲ ಅಂತ ಸುಮಲತಾ ಹೇಳಿದ್ದಾರೆ. ಅಲ್ಲದೆ ಈ ಗೆಲುವು ಮಂಡ್ಯದ ಸ್ವಾಭಿಮಾನ , ಅಂಬಿ ಮೇಲಿನ ಅಭಿಮಾನ ಮತ್ತು ಮಂಡ್ಯ ಮಹಿಳೆಯರ ಗೆಲುವು ಅಂತ ಹೇಳಿದ್ರು. ತಮ್ಮ ಮುಂದಿನ ನಿರ್ಧಾರವೇನು ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸುಮಲತಾ ಅಂಬರೀಶ್, ಮೊದಲು ನಾನು ನನ್ನ ಗೆಲುವನ್ನು ಎಂಜಾಯ್ ಮಾಡಬೇಕು, ನಂತರ ಮುಂದಿನ ನಿರ್ಧಾರದ ಬಗ್ಗೆ ಯೋಚಿಸುವೆ ಎಂದಿದ್ದಾರೆ. ಹಾಗೇ ಈ ಗೆಲುವು ಹಿಂದಿ ಚಿತ್ರ ‘ಲಗಾನ್’ ನಂತೆಯೇ ಸುಖಾಂತ್ಯ ಕಂಡಿದೆ ಅಂತ ಸುಮಲತಾ ಸಂತೋಷ ವ್ಯಕ್ತಪಡಿಸಿದ್ದಾರೆ.
- Advertisement -