ಜೆಡಿಎಸ್ ಟಿಕೇಟ್ ಕೈ ತಪ್ಪಿದ್ದಕ್ಕೆ ಭಾವುಕರಾದ ವಿಜಯಾನಂದ..

ಮಂಡ್ಯ: ಜೆಡಿಎಸ್ ಟಿಕೇಟ್ ತಪ್ಪಿದ ಹಿನ್ನೆಲೆ, ವಿಜಯಾನಂದ ಭಾವುಕರಾಗಿದ್ದಾರೆ.  ಮಂಡ್ಯದಲ್ಲಿ ಜೆಡಿಎಸ್ ಟಿಕೇಟ್ ಆಕಾಂಕ್ಷಿಯಾಗಿದ್ದ ವಿಜಯಾನಂದಗೆ ಟಿಕೇಟ್ ಕೊಡುವ ಬದಲಾಗಿ, ಬಿ.ಆರ್.ರಾಮಚಂದ್ರುಗೆ ಟಿಕೇಟ್ ಕೊಡಲಾಗಿದೆ.

ಪಕ್ಷದ ವರಿಷ್ಠರ ವಿರುದ್ಧ ವಿಜಯಾನಂದ ಅಸಮಾಧಾನ ವ್ಯಕ್ತಪಡಿಸಿದ್ದು, ನಿನ್ನೆಯಷ್ಟೇ ಸ್ವಾಭಿಮಾನ ಪಡೆ ಹೆಸರಿನಲ್ಲಿ ವಿಜಯಾನಂದ ನಾಮಪತ್ರ ಸಲ್ಲಿಸಿದ್ದಾರೆ. ಈ ಮೂಲಕ ಪಕ್ಷೇತ್ರವಾಗಿ ನಿಂತು, ಜೆಡಿಎಸ್ ಸೋಲಿಸಲು ರಣತಂತ್ರ ಹೆಣೆದಿದ್ದಾರೆ. ಆದರೆ ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಜೆಡಿಎಸ್ ಮುಖಂಡರು, ವಿಜಯಾನಂದ ಮನೆಗೆ ಬಂದು, ಅವರನ್ನು ಒಲಿಸುವ ಪ್ರಯತ್ನ ಮಾಡಿದ್ದಾರೆ.

ಆದರೆ ನನಗೆ ಯಾರೇ ಕೈ ಕೊಟ್ಟರು ನನ್ನ ಸ್ಪರ್ಧೆ ಖಚಿತ. ಇಂದು ಅಂತಿಮವಾಗಿ ಅಭ್ಯರ್ಥಿ ಆಯ್ಕೆ ಸಭೆ ಮೂಲಕ ಆಯ್ಕೆ ಸ್ಪರ್ಧೆಯಿಂದ ಸರಿಯುವ ಮಾತೇ ಇಲ್ಲ. ಕುಮಾರಸ್ವಾಮಿ ಕರೆ ಮಾಡಿ ಮನಹೋಲಿಸುವ ಕೆಲಸ ಮಾಡಿದ್ರು‌ ಅವರಿಗೇ ಏನು ಹೇಳಬೇಕೋ ಹೇಳಿದ್ದೇನೆ.

ಈ ಬಾರಿ ಜನರೇ ತೀರ್ಮಾನ ಮಾಡ್ತಾರೆ ನಾನು ಬಾಡಿಗೆ ಮನೆಯಲ್ಲಿ ವಾಸ ಮಾಡ್ತಿದ್ದೇನೆ. ನೋಡಿದ್ದೆಲ್ಲ ಹಾಲು ಅನ್ಕೊಂಡು ಬಂದೆವು. ಜೆಡಿಎಸ್ ಆಟಕ್ಕೆ ಬಲಿಪಶು ಆಗ್ಬಿಟ್ಟೆ. ಗೆಲುವು ಸೋಲು ಏನೇ ಆದರು ಹಿಂದೆ ಸರಿಯುವ ಕೆಲಸ ಆಗಲ್ಲ. ಕಡೆಯವರೆಗೂ ನನ್ನ ಹೆಸರು ಇತ್ತು. ಈಗ ಬದಲಾವಣೆ ಆಗಿದೆ. ನಾನು ವೈಯುಕ್ತಿಕವಾಗಿ ಯಾರ ಬಗ್ಗೆ ಮಾತನಾಡಲ್ಲ‌. ಮತದಾರರು ನನ್ನ ಕೈ ಹಿಡಿಯಬೇಕು. ಯಾರೇ ಕೈ ಕೊಟ್ಟರು ನನ್ನ ಸ್ಪರ್ಧೆ ಖಚಿತ. ಭಗವಂತನೆ ನಮಗೆ ಶ್ರೀ ರಕ್ಷೆ ತೀವ್ರ ನೋವಾಗಿದೆ ಎಂದು ವಿಜಯಾನಂದ ಭಾವುಕರಾಗಿದ್ದಾರೆ.

ರವಿಕುಮಾರ್ ಪರ ಡಿಕೆಶಿ ಪ್ರಚಾರ: ಜನಪರ ಆಡಳಿತದ ಭರವಸೆ

40 ಸ್ಟಾರ್ ಪ್ರಚಾರಕರ ಲೀಸ್ಟ್ ಬಿಡುಗಡೆ ಮಾಡಿದ ಬಿಜೆಪಿ

‘ಹಾಸನದ 7 ವಿಧಾನಸಭೆ ಕ್ಷೇತ್ರದಲ್ಲಿ ಜಯಗಳಿಸಿ ದೇವೇಗೌಡರ ಹುಟ್ಟುಹಬ್ಬದ ಕೊಡುಗೆ ಕೊಡುತ್ತೆವೆ’

About The Author