Saturday, July 5, 2025

Latest Posts

Mandya News: ಭ್ರೂಣಹತ್ಯೆ ಸುಳಿವು ಕೊಟ್ಟ ಪತ್ರಕರ್ತನಿಗೆ ಲಕ್ಷ ರೂ. ಬಹುಮಾನ

- Advertisement -

Mandya News: ಮಂಡ್ಯ: ಜಿಲ್ಲೆಯಲ್ಲಿ ಭ್ರೂಣಲಿಂಗ ಪತ್ತೆ ಮತ್ತು ಹೆಣ್ಣು ಭ್ರೂಣಹತ್ಯೆ ನಡೆಯುತ್ತಿದ್ದ ಬಗ್ಗೆ ಮಂಡ್ಯ ಜಿಲ್ಲೆಗೆ ಅಂಟಿದ್ದ ಕಳಂಕ ಅಳಿಸುವ ನಿಟ್ಟಿನಲ್ಲಿ ಕಾರ್ಯೋನ್ಮುಖವಾಗಿರುವ ಆರೋಗ್ಯ ಇಲಾಖೆಯು ನಾಗರೀಕರು ಜಾಗೃತರಾದಲ್ಲಿ ಈ ಅಪವಾದದ ಮಸಿಯನ್ನು ತೊಳೆಯಲು ಸಾಧ್ಯ ಎಂಬ ನಿಟ್ಟಿನಲ್ಲಿ ರಹಸ್ಯ ಕೃತ್ಯ ಬಯಲಿಗೆಳೆಯುವವರಿಗೆ ಪ್ರೋತ್ಸಾಹ ನೀಡಲು ಮುಂದಾಗಿದೆ.

ಕಳೆದ ವರ್ಷ ಪಾಂಡವಪುರದ ಆರೋಗ್ಯ ಇಲಾಖೆ ವಸತಿ ನಿಲಯದಲ್ಲಿ ನಡೆದಿದ್ದ ಭ್ರೂಣ ಹತ್ಯೆ ಪ್ರಕರಣದ ಸುಳಿವು ನೀಡಿದ ಪತ್ರಕರ್ತ ಕೆ.ಎನ್.ನಾಗೇಗೌಡ, ಈ ಪಾಪ ಕೃತ್ಯದಲ್ಲಿ ಪಾಲ್ಗೊಂಡಿದ್ದ 38 ಮಂದಿಯನ್ನು ಜೈಲಿಗೆ ಕಳಿಸುವಲ್ಲಿ ಪೊಲೀಸರಿಗೆ ನೆರವಾಗಿದ್ದರು. ಇವರಿಗೆ ಇಲಾಖೆ ವತಿಯಿಂದ ಒಂದು ಲಕ್ಷ ರೂ. ಬಹುಮಾನ ನೀಡಿ ಬೆನ್ನುತಟ್ಟಿದೆ.

ಇದೇ ರೀತಿ ಸಾರ್ವಜನಿಕರೂ ಕೂಡ ತಮ್ಮ ಸುತ್ತಮುತ್ತ ನಡೆಯುವ ಸಮಾಜಘಾತುಕ ಕೃತ್ಯಗಳ ಬಗ್ಗೆ ಪೊಲೀಸರಿಗೆ ಸುಳಿವು ನೀಡುವುದರಿಂದ ಸಮಾಜದ ಸ್ವಾಸ್ತ್ಯ ಕಾಪಾಡಬಹುದು. ಬೇರೆಯವರ ಗೊಡವೆ ನಮಗೇಕೆ ಎಂಬ ಮನೋಭಾವ ಹಲವರಲ್ಲಿದೆ. ಆದ್ದರಿಂದ ಪೊಲೀಸರಿಗೆ ಸಹಕರಿಸುವವರಿಗೆ ಬಹುಮಾನ ನೀಡುವ ಮೂಲಕ ಇತರರನ್ನೂ ಈ ಕೃತ್ಯದ ನಿರ್ಮೂಲನೆಗೆ ತೊಡಗಿಸಿಕೊಳ್ಳಲು ಮುಂದಾಗಿರುವುದು ಮಾದರಿಯಾಗಿದೆ.

ಪತ್ರಕರ್ತ ಕೆ.ಎನ್.ನಾಗೇಗೌಡರಿಗೆ ಸರ್ಕಾರದಿಂದ ೫೦ ಸಾವಿರ ರೂ.ಹಾಗೂ ಮಂಡ್ಯ ಡಿಎಚ್‌ಒ ಕಚೇರಿ ವತಿಯಿಂದ ೫೦ ಸಾವಿರ ರೂ. ಸೇರಿ ಒಟ್ಟು ೧ ಲಕ್ಷ ರೂ ಚೆಕ್ ನ್ನು ಇಂದು ಮಂಡ್ಯದ ಮಿಮ್ಸ್ ಆವರಣದಲ್ಲಿ ಕೃಷಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ ನೇತೃತ್ವದಲ್ಲಿ ನಡೆದ ಕಾರ್ಯಕ್ರಮ ದಲ್ಲಿ 1ಲಕ್ಷ ಚೆಕ್ ವಿತರಿಸಿ ಅಭಿನಂದಿಸಲು ಅಭಿನಂದಿಸಿದರು.

ಅಂದು ನಡೆದಿದ್ದೇನು?
೨೦೨೪ರ ಏಪ್ರಿಲ್-ಮೇ ತಿಂಗಳಲ್ಲಿ ಮಂಡ್ಯ ಜಿಲ್ಲೆಯಲ್ಲಿ ಹೆಣ್ಣು ಭ್ರೂಣಹತ್ಯೆ ಹೆಚ್ಚು ನಡೆಯುತ್ತಿರುವ ಬಗ್ಗೆ ರಾಜ್ಯದಲ್ಲಿ ದೊಡ್ಡ ಮಟ್ಟದ ಸುದ್ದಿಯಾಗಿತ್ತು. ಮಂಡ್ಯ ತಾಲ್ಲೂಕಿನ ಹಾಡ್ಯ ಬಳಿಯ ಆಲೆಮನೆಯೊಂದರಲ್ಲಿ ಭ್ರೂಣಲಿಂಗ ಪತ್ತೆ ನಡೆಯುತ್ತಿದೆ ಎಂಬ ಸುಳಿವಿನ ಮೇಲೆ ದಾಳಿ ನಡೆಸಲಾಗಿ, ಲ್ಯಾಪ್‌ಟಾಪ್ ಮತ್ತಿತರ ಉಪಕರಣಗಳು ಲಭ್ಯವಾಗಿದ್ದು ಅಚ್ಚರಿ ಮೂಡಿಸಿತ್ತು. ಬಳಿಕ ಪಾಂಡವಪುರ ಸರ್ಕಾರಿ ಆಸ್ಪತ್ರೆಯ ಹಿಂಭಾಗದ ವಸತಿ ನಿಲಯದಲ್ಲಿ ಹೆಣ್ಣು ಭ್ರೂಣಹತ್ಯೆ ಘಟನೆ ರಾಜ್ಯವನ್ನೇ ಬೆಚ್ಚಿ ಬೀಳಿಸಿತ್ತು. ಇಲ್ಲಿ ನಡೆಯುತ್ತಿದ್ದ ರಹಸ್ಯ ಕಾರ್ಯಾಚರಣೆಯನ್ನು ಪತ್ತೆಹಚ್ಚಿದ ಪತ್ರಕರ್ತ ಕೆ.ಎನ್.ನಾಗೇಗೌಡರು ಅಂದಿನ ಪೊಲೀಸ್ ಅಧೀಕ್ಷಕ ಎನ್.ಯತೀಶ್ ಅವರಿಗೆ ಮಾಹಿತಿ ನೀಡಿದ್ದರು.

ಗರ್ಭಿಣಿಯೊಬ್ಬರಿಗೆ ಅಬಾರ್ಷನ್ ಮಾಡಿಸುತ್ತಿದ್ದ ದೃಶ್ಯ. ರಕ್ತಸಿಕ್ತ ಬಟ್ಟೆಗಳು, ದುಷ್ಕರ್ಮಿಗಳ ವ್ಯವಸ್ಥಿತ ರಕ್ತರಾತ್ರಿಯನ್ನು ಬಯಲುಗೊಳಿಸಿತ್ತು. ಹೀಗೆ ಪ್ರಕರಣವನ್ನು ಬಯಲಿಗೆಳೆದ ಹಿನ್ನೆಲೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಕಚೇರಿಯಲ್ಲಿ ಇಲಾಖೆ ಅಧಿಕಾರಿಗಳು ಕೆ.ಎನ್.ನಾಗೇಗೌಡರನ್ನು ಅಭಿನಂದಿಸಿದ್ದರು. ಆ ಮೂಲಕ ಇತರರೂ ಕೂಡ ಇಂತಹ ಕೃತ್ಯ ನಡೆಯುತ್ತಿದ್ದರೆ ಸುಳಿವು ನೀಡಿ ಸಾಮಾಜಿಕ ಹೊಣೆಗಾರಿಕೆ ಮೆರೆಯಿರಿ ಎಂಬ ಸಂದೇಶ ರವಾನಿಸಿದ್ದರು. ಇದೀಗ ಪ್ರೋತ್ಸಾಹಕರ ಬಹುಮಾನ ನೀಡಿ ಸನ್ಮಾನಿಸಿರುವುದು ಮಾದರಿಯಾಗಿದೆ.

- Advertisement -

Latest Posts

Don't Miss