Mandya: ರಸ್ತೆ ಅಗಲೀಕರಣ ನೆಪದಲ್ಲಿ ಬಡವರ ಮನೆ ಕೆಡವುತ್ತಿರುವ ಅಧಿಕಾರಿಗಳು..?

Mandya: ಮಂಡ್ಯದ ಮದ್ದೂರು ಪುರಸಭೆ ನಗರಸಭೆಯಾಗಿ ಮೇಲ್ದರ್ಜೆ ಸೇರಿಸುತ್ತಿದ್ದಂತೆ, ಅಲ್ಲಿನ ಅಧಿಕಾರಿಗಳು ರಸ್ತೆ ಅಗಲೀಕರಣದ ನೆಪದಲ್ಲಿ ರಸ್ತೆ ಬದಿ ವಾಸವಿದ್ದ ಬಡವರ ಮನೆಗಳನ್ನು ಕೆಡವಲು ಶುರು ಮಾಡಿದ್ದಾರೆ.

60 ವರ್ಷದಿಂದ ಈ ಬಡ ಜನಗಳು ಇಲ್ಲೇ ಗುಡಿಸಲು ಹಾಕಿ, ವಾಸವಿದ್ದರು. ಆದರೆ ಮದ್ದೂರು ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೆ ಸೇರಿಸುತ್ತಿದ್ದಂತೆ, ಇದೀಗ ರಸ್ತೆ ಅಗಲೀಕರಣ ಮಾಡಬೇಕೆಂಬ ನಿರ್ಧಾರ ಮಾಡಲಾಗಿದೆ. ಈ ಕಾರಣಕ್ಕೆ ಅಲ್ಲಿದ್ದ ಮನೆಗಳನ್ನು ಕೆಡವಿ, ಅಲ್ಲಿದ್ದವರನ್ನೆಲ್ಲ ತೆರವುಗ“ಳಿಸುವ ಕಾರ್ಯ ನಡೆಸಲಾಗಿದೆ.

ಮನೆ ಕೆಡವಿದ ಕಾರಣಕ್ಕೆ, ನಮಗೆ ಇನ್ಯಾರು ಗತಿ ಎಂದು, ವಿಕಲಚೇತನ ಮಗಳ ಜತೆಗೆ ತಾಯಿ ಕಣ್ಣೀರು ಹಾಕಿದ್ದು, ಬೇರೆ ನೆರವು ನೀಡಿ ಎಂದು ಕಣ್ಣೀರು ಹಾಕಿದ್ದಾರೆ. ಇನ್ನು ಕೋಗಿಲು ಬಡಾವಣೆಯಲ್ಲಿ ವಾಸವಾಗಿರುವ ಅಕ್ರಮ ವಲಸಿಗರ ಮೇಲೆ ಇರುವ ಕರುಣೆಯನ್ನು 60 ವರ್ಷದಿಂದ ಇಲ್ಲೇ ಇರುವ ನಮ್ಮ ಮೇಲೆ ಸರ್ಕಾರ ತೋರುತ್ತಿಲ್ಲ. ಮದ್ದೂರಿನಲ್ಲಿ ಕೊಡುಗೈ ದಾನಿ ಎನಿಸಿಕೊಳ್ಳುವ ಕೈ ಶಾಸಕ ಉದಯ್ ಇದ್ದರೂ ನಮಗೆ ಏನು ನೆರವು ಸಿಕ್ಕಿಲ್ಲವೆಂದು ಸರ್ಕಾರದ ಈ ನಡೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿ, ನೆರವು ನೀಡುವಂತೆ ಮನವಿ ಮಾಡಿದ್ದಾರೆ.

About The Author