Bengaluru News: ಬೆಂಗಳೂರು: ಇತ್ತೀಚೆಗೆ ಬೆಂಗಳೂರಿನಲ್ಲಿ ಮಂಗಳಮುಖಿಯರ ಕಾಟ ಹೆಚ್ಚಾಗಿದೆ. ಶುಭ ಸಮಾರಂಭಗಳು ನಡೆಯುವ ಜಾಗದ ಬಗ್ಗೆ ತಿಳಿದುಕೊಳ್ಳುವ ಇವರು, ಗುಂಪು ಗುಂಪಾಗಿ ಆ ಮನೆ ಒಳಗೆ ನುಗ್ಗಿ ದಾಂಧಲೆ ಎಬ್ಬಿಸುತ್ತಾರೆ. ಮನೆಯವರ ಬಳಿ ಹಣ ಕೇಳುತ್ತಾರೆ. ಅವರೇನಾದರೂ ಬೈದರೆ, ಅಥವಾ ದುಡ್ಡು ಕೊಡುವುದಿಲ್ಲ ಹೋಗಿ ಎಂದರೆ, ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸುತ್ತಾರೆ. ಇದೇ ರೀತಿ ಒಂದು ಘಟನೆ ನಡೆದಿದ್ದು, ಅಸಭ್ಯ ವರ್ತನೆ ತೋರಿದ ಮಂಗಳಮುಖಿಯರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ವೈಯಾಲಿಕಾವಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ರಾಜೇಶ್ ಮತ್ತು ದೀಪಾ ದಂಪತಿಯ ಮನೆಯ ಗೃಹ ಪ್ರವೇಶವಿತ್ತು. ಈ ವೇಳೆ ಮನೆಗೆ ನುಗ್ಗಿದ ಮೂವರು ಮಂಗಳಮುಖಿಯರು, ದುಡ್ಡು ಕೊಡಿ ಎಂದು ಬೇಡಿಕೆ ಇಟ್ಟಿದ್ದಾರೆ. ಮನೆಯವರು 200 ರೂಪಾಯಿ ಕೊಟ್ಟಿದ್ದಾರೆ. ಇದೆಲ್ಲ ಸಾಕಾಗುವುದಿಲ್ಲ. ನಾವು ಮೂರು ಜನ ಇದ್ದೇವೆ ಎಂದು ಗಲಾಟೆ ಮಾಡಿದ್ದಾರೆ. ಈ ಕಾರಣಕ್ಕೆ ದಂಪತಿ 5 ಸಾವಿರ ರೂಪಾಯಿ ಕೊಟ್ಟಿದ್ದಾರೆ. ಇದಕ್ಕೂ ಸುಮ್ಮನಿರದ ಮಂಗಳಮುಖಿ ಒಬ್ಬರಿಗೆ 5 ಸಾವಿರದಂತೆ, ಒಟ್ಟು 15 ಸಾವಿರ ರೂಪಾಯಿ ಕೊಡಿ ಎಂದು ಗಲಾಟೆ ಮಾಡಿದ್ದಾರೆ.
ಅಷ್ಟು ದುಡ್ಡು ಕೊಡಲಾಗುವುದಿಲ್ಲ ಎಂದು ಹೇಳಿದ್ದಕ್ಕೆ, ಬಟ್ಟೆ ಬಿಚ್ಚಿ ಅಸಭ್ಯವಾಗಿ ವರ್ತಿಸಿದ್ದಾರೆ. ಈ ವೇಳೆ ಮನೆಜನ ವೈಯಾಲಿಕಾವಲ್ ಪೊಲೀಸ್ ಠಾಣೆ ಪೊಲೀಸರಿಗೆ ವಿಷ್ಯ ತಿಳಿಸಿದ್ದು, ಮನೆಗೆ ಬಂದ ಪೊಲೀಸರು, ಕೃತಿಕಾ, ಪ್ರಶಾಂತ್ ಅಲಿಯಾಸ್ ಪ್ರೀತಿ, ಮಣಿಕಂಠನ್ ಅಲಿಯಾಸ್ ಪೂಜಾ ಎಂಬ ಮಂಗಳಮುಖಿಯರನ್ನು ಬಂಧಿಸಿದ್ದಾರೆ. ಇವರೆಲ್ಲ ಶ್ರೀರಾಂಪುರದಲ್ಲಿ ವಾಸಿಸುತ್ತಿದ್ದರು.
ಈ ಬಗ್ಗೆ ಮಾತನಾಡಿರುವ ಮನೆ ಒಡೆಯ ದೀಪಕ್, ಒಂದು ವರ್ಷದಿಂದ ಲೋನ್ ಮಾಡಿ, ಮನೆ ಕಟ್ಟಿದ್ದೇವೆ. ಈಗ ಹೀಗೆ ಮಾಡಿ ಸಂಬಂಧಿಕರ ಮುಂದೆ ನಾವು ತಲೆ ತಗ್ಗಿಸುವಂತೆ ಮಾಡಿದ್ದಾರೆ. ನಮ್ಮ ಮನೆಗೆ ಬಂದ ನೆಂಟರು ಅವರಿಗೆ 5 ಸಾವಿರ ರೂಪಾಯಿ ಕೊಟ್ಟು ಕಳಿಸಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಒಡಹುಟ್ಟಿದ ತಮ್ಮನನ್ನೇ ಕೊಚ್ಚಿ ಕೊಲೆಗೈದ ಅಣ್ಣ: ಕೊಡಲಿ ಸಮೇತ ಠಾಣೆಗೆ ಬಂದು ಶರಣಾಗತಿ
ಸದ್ದಿಲ್ಲದೆ ಶುರುವಾಗಿದೆ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ “ಕೃಷ್ಣಂ ಪ್ರಣಯ ಸಖಿ” ಶೂಟಿಂಗ್