Mangaluru: 29 ವರ್ಷಗಳ ಹಿಂದೆ ಮಂಗಳೂರಿನಲ್ಲಿ ನಡೆದಿದ್ದ ಹತ್ಯೆ ಪ್ರಕರಣದ ಆರೋಪಿ ಈಗ ಪತ್ತೆ
ಆಂಧ್ರಪ್ರದೇಶದಲ್ಲಿ ಸಿಕ್ಕಿಬಿದ್ದ ದಂಡುಪಾಳ್ಯ ಗ್ಯಾಂಗ್ ಸದಸ್ಯ
ಹೆಸರು, ರಾಜ್ಯ ಬದಲಾಯಿಸಿದರೂ ಸಿಕ್ಕಿಬಿದ್ದಿದ್ದು ಹೇಗೆ ಡಬಲ್ ಮ*ರ್ ಅಪರಾಧಿ..?
29 ವರ್ಷಗಳ ಹಿಂದೆ ಮಂಗಳೂರಿನ ಊರ್ವದಲ್ಲಿ ನಡೆದಿದ್ದ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಇದೀಗ ಪೋಲೀಸರು ದಂಡುಪಾಳ್ಯ ಗ್ಯಾಂಗ್‌ನ ಸದಸ್ಯನನ್ನು ಬಂಧಿಸಿದ್ದಾರೆ. 55 ವರ್ಷದ ಚಿಕ್ಕಹನುಮ ಅಲಿಯಾಸ್ ಕೃಷ್ಣಪ್ಪ ಬಂಧಿತ ಅಪರಾಧಿಯಾಗಿದ್ದು, ಆಂಧ್ರಪ್ರದೇಶದಲ್ಲಿ ಈತನನ್ನು ಬಂಧಿಸಲಾಗಿದೆ.
1997ರ ಅ.11ರಂದು ಮಧ್ಯರಾತ್ರಿ ಊರ್ವದ ಮಾರಿಗುಡಿ ಕ್ರಾಸ್ ಬಳಿ ಮನೆಗೆ ನುಗ್ಗಿದ್ದ ದಂಡುಪಾಳ್ಯ ಗ್ಯಾಂಗ್, 80 ವರ್ಷ ವಯಸ್ಸಿನ ಲೂವಿಸ್ ಡಿಮೆಲ್ಲೋ ಮತ್ತು 19 ವರ್ಷದ ರಂಜಿತ್ ವೇಗಸ್‌ನನ್ನು ಹತ್ಯೆ ಮಾಡಿ, ಮನೆಯಲ್ಲಿದ್ದ ಹಣ, ಬಂಗಾರ ಎಲ್ಲವನ್ನೂ ಕದ್ದು ಪರಾರಿಯಾಗಿತ್ತು.
ಈ ಕೆಲಸದಲ್ಲಿ ಚಿಕ್ಕ ಹನುಮ ಕೂಡ ಭಾಗಿಯಾಗಿದ್ದ. ಈ ಘಟನೆ ಬಳಿಕ ಆತ ಕೃಷ್ಣಪ್ಪ ಎಂದು ಹೆಸರು ಬದಲಿಸಿದ್ದ. ಬಳಿಕ ಆಂಧ್ರಪ್ರದೇಶಕ್ಕೆ ಹೋಗಿ ನೆಲೆಸಿದ್ದ. ಅಷ್ಟು ವರ್ಷಗಳಿಂದ ಈತನ ೃಹುಡುಕಾಟದಲ್ಲಿದ್ದ ಪೋಲೀಸರು, ಇದೀಗ ಆಂಧ್ರದ ಅನ್ನಮಯ್ಯ ಜಿಲ್ಲೆಯ, ಮದನಪಳ್ಳೆ ಎಂಬಲ್ಲಿಗೆ ಹೋಗಿ ಅಪರಾಧಿಯನ್ನು ಬಂಧಿಸಿದ್ದಾರೆ. ಈ ಮೂಲಕ ಪೋಲೀಸ್ ಅಧಿಕಾರಿಯಾಗಿರುವ ಶ್ಯಾಮ್ ಸುಂದರ್ ಎಚ್.ಎಂ ನೇತೃತ್ವದ ತಂಡ ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದೆ. ಇನ್ನು ಬಂಧಿತ ಕೃಷ್ಣಪ್ಪ ವಿರುದ್ಧ ವಿವಿಧ ಠಾಣೆಯಲ್ಲಿ 13ಕ್ಕೂ ಹೆಚ್ಚು ಕೇಸ್‌ಗಳು ದಾಖಲಾಗಿದೆ.
ಪಿಎಸ್‌ಐ ಗುರಪ್ಪ ಕಾಂತಿ, ಪಿಎಸ್‌ಐ ಎಲ್.ಮಂಜುಳಾ, ಎಎಸ್ಐ ವಿನಯ್ ಕುಮಾರ್, ಸಿಬ್ಬಂದಿಗಳಾದ ಲಲಿತಾ ಲಕ್ಷ್ಮೀ, ಅನಿಲ್, ಪ್ರಮೋದ್, ಅತಾನಂದ್, ಹರೀಶ್ ಇವರೆಲ್ಲ ಈ ಅಪರಾಧಿಯನ್ನು ಬಂಧಿಸುವ ಕಾರ್ಯದಲ್ಲಿ ಯಶಸ್ವಿಯಾದವರು. ಶ್ಯಾಮ್ ಕುಮಾರ್ ಸೇರಿ ಇವರಿಗೆಲ್ಲ ಮಂಗಳೂರು ನಗರ ಪೋಲೀಸ್ ಆಯುಕ್ತರು ಶ್ಲಾಘಿಸಿದ್ದು, ಅತ್ಯುನ್ನತ ಬಹುಮಾನ ನೀಡಲು ಡಿಜಿಪಿಗೆ ಶಿಫಾರಸು ಮಾಡಿದ್ದಾರೆ.




