Saturday, January 25, 2025

Latest Posts

ನಮ್ಮಲ್ಲಿ ಸಂಸ್ಕಾರ ಮರೆಯೋರು ಹೆಚ್ಚು! ಆದರೆ ನಾನು ಮರೆತಿಲ್ಲ: ಜರ್ಮನ್ ಕನ್ನಡತಿ ರಶ್ಮಿ ನಾಗರಾಜ್

- Advertisement -

Web News: ಎಷ್ಟೋ ಜನ ಭಾರತೀಯರು ವಿದೇಶಕ್ಕೆ ಹೋದ ಬಳಿಕ, ತಮ್ಮನ್ನು ತಾವು ಉನ್ನತರೆಂದು ತಿಳಿದು ಭಾರತೀಯ ಸಂಸ್ಕಾರವನ್ನು ಮರೆತು, ಅಲ್ಲಿನವರ ಹಾಗೆ ಇರಲು ಬಯಸುತ್ತಾರೆ. ಭಾರತಕ್ಕೆ ಬಂದಾಗ, ಅವರು ಅವರ ಮಾತೃಭಾಷೆ ಮಾತನಾಡೋದು ಅಪರೂಪ. ಭಾಷೆ, ಮಾತಿನ ಧಾಟಿ, ಉಡುಪು ಧರಿಸುವ ಶೈಲಿ, ಇರುವ ರೀತಿ ಎಲ್ಲವೂ ವಿದೇಶಿಗರ ರೀತಿಯೇ ಆಗಿ ಹೋಗುತ್ತದೆ. ಆದರೆ ನಾನು ಆ ರೀತಿಯಾಗಲಿಲ್ಲ. ನಮ್ಮ ಸಂಸ್ಕೃತಿ ಮರೆಯಲಿಲ್ಲ ಅಂತಾರೆ ರಶ್ಮಿ ನಾಗರಾಜ್.

ರಶ್ಮಿ ನಾಗರಾಜ್ ಯಾರು ಅಂತಾ ನಾವು ನಿಮಗೆ ಈಗಾಗಲೇ ಹೇಳಿದ್ದೇವೆ. ಜರ್ಮನಿಯಲ್ಲಿ ಕನ್ನಡ ಶಾಲೆ ತೆರೆದು, ಕನ್ನಡ ಕಲಿಯಲು ಆಸಕ್ತಿ ಇರುವವರಿಗೆ ಕನ್ನಡ ಕಲಿಸಿದ ಶಿಕ್ಷಕಿ ರಶ್ಮಿ ನಾಗರಾಜ್‌. ಇವರು ಹೇಳುವ ಪ್ರಕಾರ, ನಾವು ವಿದೇಶಕ್ಕೆ ಹೇಗೆ 23 ಕೆಜಿ ಲಗೇಜ್ ತೆಗೆದುಕೊಂಡು ಹೋಗುತ್ತೇವೋ, ಅದೇ ರೀತಿ ನಮ್ಮ ಅಪ್ಪ ಅಮ್ಮ ಕೊಟ್ಟ ಸಂಸ್ಕಾರವನ್ನು ಕೂಡ ನಾವು ವಿದೇಶಕ್ಕೆ ತೆಗೆದುಕೊಂಡು ಹೋಗಲೇಬೇಕು.

ನಾವು ವಿದೇಶಕ್ಕೆ ಹೋಗಿ, ಎಷ್ಟೇ ವಿದೇಶಿ ಮಾರುಕಟ್ಟೆ ಸುತ್ತಿ ಏನೇ ತೆಗೆದುಕೊಂಡರೂ, ಕೊನೆಗೆ ಭಾರತಕ್ಕೆ ಸೇರಿದ ಮಾರ್ಟ್‌ಗೆ ಹೋಗಿ ಅಕ್ಕಿಯನ್ನು ಖರೀದಿ ಮಾಡಲೇಬೇಕು. ಏಕೆಂದರೆ, ಅನ್ನ ಉಣ್ಣದೇ ಜೀವನ ಸಾಗುವುದಿಲ್ಲ. ಅದೇ ರೀತಿ ನಮ್ಮ ತಂದೆ ತಾಯಿ ಕೊಟ್ಟ ಸಂಸ್ಕಾರ ಮರೆತರೆ ನಾವು ಅನ್ನ ಮರೆತಂತೆ ಅಂತಾರೆ ರಾಶ್ಮಿ ನಾಗರಾಜ್.

ಭಾರತದ ಬಗ್ಗೆ ಮಾತನಾಡುವ ರಶ್ಮಿ ಅವರು, ಭಾರತದ ಬೀದಿಗಳಲ್ಲಿ ಮದ್ಯಪಾನ ಮಾಡಿ, ಯಾವ ರೀತಿ ಇರುತ್ತಾರೋ, ಆ ರೀತಿ ಜರ್ಮನಿಯಲ್ಲಿ ಇಲ್ಲ ಎಂದಿದ್ದಾರೆ. ಈ ರೀತಿ ಮಾತನಾಡಲು ಬೇಸರವಾದರೂ ಕೂಡ, ರಶ್ಮಿಯವರು ಹೇಳಿದ್ದು ಸತ್ಯವಾದ ಮಾತು. ಹೊಸ ವರ್ಷಾಚರಣೆಯ ನೆಪದಲ್ಲಿ ಎಷ್ಟೋ ಯುವಕ, ಯುವತಿಯರು ಕಂಠಪೂರ್ತಿ ಕುಡಿದು, ರಸ್ತೆಯಲ್ಲಿ ಮಾಡಬಾರದ್ದೆಲ್ಲ ಮಾಡುತ್ತಾರೆ. ಆದರೆ ಜರ್ಮನಿಯಲ್ಲಿ ಆ ರೀತಿ ಕಂಠಪೂರ್ತಿ ಕುಡಿದು ಮೈಮೇಲೆ ಪ್ರಜ್ಞೆ ಇಲ್ಲದವರಂತೆ ವರ್ತಿಸುವ ಒಬ್ಬರೂ ಸಿಗೋದಿಲ್ಲ ಅಂತಾರೆ ರಶ್ಮಿ.

ಈ ಮಾತು ಯಾಕೆ ಹೇಳಿದ್ದು ಎಂದರೆ, ಭಾರತಕ್ಕೆ ಹೋಲಿಸಿದರೆ, ಜರ್ಮನಿಯಲ್ಲಿ ಮದ್ಯಪಾನದ ಬೆಲೆ ಅತೀ ಕಡಿಮೆ. ಅಲ್ಲದೇ, ನೀರಿನ ಬಾಟಲಿ ಬೆಲೆಗಿಂತ, ಬೀಯರ್ ಬಾಟಲಿ ಬೆಲೆ ಕಡಿಮೆಯಂತೆ. ಆದರೂ, ಅಲ್ಲಿನ ಜನ ಕುಡಿದು ತೂರಾಡುವುದಿಲ್ಲ.

ಇನ್ನು ಭಾರತದ ಬಗ್ಗೆ ಮಾತನಾಡಿರುವ ರಶ್ಮಿ, ನಮ್ಮ ದೇಶ ಕೂಡ ಬೇರೆ ದೇಶಕ್ಕೆ ಹೋಲಿಸಿದರೆ, ಎಷ್ಟೋ ಮೇಲೂ. ಯುಪಿಐ ಪೇಮೆಂಟ್ ಆಗಲಿ, ಆರ್ಡರ್ ಮಾಡಿದರೆ, ಥಟ್ ಅಂತ ಬರುವ ಆಹಾರ, ಬಟ್ಟೆ, ದಿನಸಿ ಇವೆಲ್ಲವೂ ಜರ್ಮನಿಯಲ್ಲಿ ಕನಸು ಅಂತಾರೆ ರಶ್ಮಿ. ಇಲ್ಲಿ ಆರ್ಡರ್ ಮಾಡಿದರೆ, ಆಹಾರವಾಗಲಿ, ದಿನಸಿಯಾಗಲಿ 10 ನಿಮಿಷದಲ್ಲಿ ಮನೆ ಬಾಗಿಲಿಗೆ ಬರುತ್ತದೆ. ಆದರೆ ಜರ್ಮನಿಯಲ್ಲಿ ಎಂಥ ದೊಡ್ಡ ಸಿಟಿಯಲ್ಲಾದರೂ ಇಷ್ಟು ಫಾಸ್ಟ್ ಆಗಿ ದಿನಸಿ, ಆಹಾರ ಮನೆಗೆ ಬರಲು ಸಾಧ್ಯವೇ ಇಲ್ಲ ಅಂತಾರೆ ರಶ್ಮಿ. ಜರ್ಮನಿ ಜರ್ನಿ ಬಗ್ಗೆ ಅವರಿಂದಲೇ ತಿಳಿಯಲು ಈ ವೀಡಿಯೋ ನೋಡಿ.

- Advertisement -

Latest Posts

Don't Miss