Saturday, July 27, 2024

Latest Posts

ಪ್ರಲ್ಹಾದ್ ಜೋಶಿ ಅವರಿಂದ ಅನೇಕ ವೀರಶೈವ-ಲಿಂಗಾಯಿತರು ತುಳಿತಕ್ಕೊಳಗಾಗಿದ್ದಾರೆ: ಸ್ವಾಮೀಜಿ

- Advertisement -

Hubli News: ಹುಬ್ಬಳ್ಳಿ: ಕ್ಷಿಪ್ರ ಬೆಳವಣಿಗೆಯಲ್ಲಿ ಕೇಂದ್ರ ಸಚಿವ ಹಾಗೂ ಧಾರವಾಡ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಲ್ಹಾದ ಜೋಶಿ ಅವರ ವಿರುದ್ದ ತಿರುಗಿ ಬಿದ್ದಿರುವ 40ಕ್ಕೂ ಅಧಿಕ ವೀರಶೈವ-ಲಿಂಗಾಯತ ಮಠಾಧೀಶರಗಳು ಇದೇ ತಿಂಗಳು ದಿ.31ರೊಳಗೆ ಧಾರವಾಡ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯನ್ನು ಬದಲಿಸಿ ಎಲ್ಲ ಸಮುದಾಯದವರಿಗೂ ಸಲ್ಲುವ ಸೂಕ್ತ ಅಭ್ಯರ್ಥಿಯನ್ನು ಕಣಕ್ಕಿಳಿಸಬೇಕೆಂದು ಬಿಜೆಪಿಯ ದೆಹಲಿ ಹೈಕಮಾಂಡ್‍ಗೆ ಗಡುವು ನೀಡಿದ್ದಾರೆ.

ಇಲ್ಲಿನ ಮೂರುಸಾವಿರಮಠದಲ್ಲಿಂದು ಮೂರುಸಾವಿರಮಠದ ಜಗದ್ಗುರು ಡಾ.ಗುರುಸಿದ್ದ ರಾಜಯೋಗಿಂದ್ರ ಸ್ವಾಮೀಜಿ, ಶಿರಹಟ್ಟಿ ಶ್ರೀ ಫಕೀರ ಸಂಸ್ಥಾನಮಠದ ಜಗದ್ಗುರು ಶ್ರಿ ಫಕೀರ ದಿಂಗಾಲೇಶ್ವರ ಸ್ವಾಮೀಜಿ, ಧಾರವಾಡ ಮುರುಘಾಮಠದ ಪೀಠಾಧಿಪತಿಗಳು ಸಹಿತ 40ಕ್ಕೂ ಅಧಿಕ ಸ್ವಾಮೀಜಿಗಳು ಮಹತ್ವದ ಚಿಂತನ-ಮಂಥನ ಸಭೆ ನಡೆಸಿ ಈ ತೀರ್ಮಾನ ಪ್ರಕಟಿಸಿದ್ದಾರೆ. ಪ್ರಲ್ಹಾದ್ ಜೋಶಿ ಅವರಿಗೆ ಅಧಿಕಾರ ಮತ್ತು ಸಂಪತ್ತಿನ ಮದವೇರಿದ್ದು, ಲಿಂಗಾಯತ, ಕುರುಬ ಸೇರಿದಂತೆ ಎಲ್ಲ ಸಮುದಾಯವನ್ನು ತುಳಿದಿದ್ದಾರೆ. ಸ್ವಾಮೀಜಿಗಳನ್ನು ಅವಮಾನಿಸಿದ್ದಾರೆ. ನಮ್ಮ ವಿರೋಧ ಅವರ ವ್ಯಕ್ತಿತ್ವಕ್ಕೇ ಹೊರತು ಪಕ್ಷ ಅಥವಾ ಸಮಾಜಕ್ಕೆ ಅಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಇದೇ ಮಾರ್ಚ 31ರೊಳಗೆ ಪ್ರಲ್ಹಾದ ಜೋಶಿಯವರನ್ನು ಧಾರವಾಡ ಕ್ಷೇತ್ರದಿಂದ ಬದಲಿಸಬೇಕು, ಇಲ್ಲದೆ ಹೋದರೆ ಏ.2ರಂದು ಮತ್ತೆ ಎಲ್ಲ ಸ್ವಾಮೀಜಿಗಳು ಸಭೆ ನಡೆಸಿ ಮುಂದಿನ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದಿದ್ದು, ಚುನಾವಣಾ ಬಂದಾಗ ಮಾತ್ರ ಕೇಂದ್ರ ಸಚಿವರಾಗಿರುವ ಪ್ರಲ್ಹಾದ ಜೋಶಿ ಅವರಿಗೆ ವೀರಶೈವ ಲಿಂಗಾಯತ ಸ್ವಾಮೀಜಿಗಳು ನೆನಪಾಗುತ್ತಾರೆ, ರಾಜಕಾರಣಿಗಳು ತಿಳಿದು ರಾಜಕಾರಣ ಮಾಡಬೇಕೇ ಇತರರನ್ನು ತುಳಿದು ರಾಜಕಾರಣ ಮಾಡಬಾರದು, ಇಲ್ಲಿಯ ಮಾಜಿ ಸಿಎಂ ಜಗದೀಶ ಶೆಟ್ಟರ್‍ಗೆ ಬೇರೆ ಕ್ಷೇತ್ರ ಕೊಟ್ಟಂತೆ ಲಿಂಗಾಯತರ ಪ್ರಾಬಲ್ಯವಿರುವ ಧಾರವಾಡ ಕ್ಷೇತ್ರದಲ್ಲಿ ಬ್ರಾಹ್ಮಣರು ಅನಿವಾರ್ಯವೇ ಆದರೆ ಬ್ರಾಹ್ಮಣರ ಪ್ರಾಬಲ್ಯವಿರುವ ಕ್ಷೇತ್ರದಲ್ಲಿ ಬಿಜೆಪಿ ಅವರು ಲಿಂಗಾಯತರನ್ನು ನಿಲ್ಲಿಸಿ ಆರಿಸಿ ತರಲಿ ಎಂಬ ಸವಾಲು ಹಾಕಿದ್ದಾರೆ.

ಪ್ರಲ್ಹಾದ ಜೋಶಿ ಅವರಿಂದ ಈಗಾಗಲೇ ಬಹುಸಂಖ್ಯಾತ ಲಿಂಗಾಯತರು, ಇತರ ಸಮಾಜದ ನಾಯಕರು, ನೌಕರರ ವ್ಯಾಪಾರಿಗಳು ಹಾಗೂ ಸ್ವಾಮೀಜಿಗಳು ತುಳಿತಕ್ಕೊಳಗಾಗಿದ್ದಾರೆ. ಇವರ ಸೇಡಿನ ರಾಜಕಾರಣಕ್ಕೆ ನಮ್ಮ ವೀರಶೈವ, ಲಿಂಗಾಯತ ಸಮಾಜದ ಬಹುತೇಕ ನಾಯಕರು ತುಳಿತಕ್ಕೊಳಗಾಗಿ ದುರ್ಬಲರಾಗಿದ್ದಾರೆ, ಮಾನಸಿಕ, ದೈಹಿಕ, ಆರ್ಥಿಕ ಹಾಗೂ ರಾಜಕಿವಾಗಿ ಕುಸಿದು ಬಿಟ್ಟಿದ್ದು ಮಹಿಳಾ ಪ್ರತಿನಿಧಿಗಳಿಗೆ ಅವಮಾನ ಮಾಡಿದ್ದಾರೆ ಎಂದು ಸ್ವಾಮೀಜಿಗಳು ದೂರಿದ್ದಾರೆ.

ನಮ್ಮಂತಹ ಸ್ವಾಮೀಜಿಗಳು ಕೆಲಸದ ನಿಮಿತ್ತ ಪೋನ್ ಮಾಡಿದಾಗ ಸಚಿವ ಪ್ರಲ್ಹಾದ ಜೋಶಿ ಅವರು ನಿಮ್ಮ ಸಮಾಜದ ನಾಯಕರಿಲ್ಲವೆ ಎಂದು ಕೇಳಿದ್ದಾರೆ, ನಮ್ಮ ಭೇಟಿಗೆ ಅವಕಾಶ ನೀಡಿಲ್ಲ, ಸಭೆಗಳಲ್ಲಿ ಮಾತಾಡಿಸಿಲ್ಲ, ಸ್ವಾಮೀಜಿಗಳ ವಿರೋಧ ಬೇಡ ಎಂದು ಅವರ ಸಹೋದರ ಸಲಹೆ ಕೊಟ್ಟರೆ ಅಂತಹ ಸ್ವಾಮಿಗಳು ನಮ್ಮ ಮನೆ ಮುಂದೆ ಪ್ರತಿದಿನವೂ ನೂರು ಜನ ತಿರುಗಾಡುತ್ತಾರೆ ಎಂದು ಅವಮಾನಿಸಿದ್ದಾರೆ ಎಂದು ದಿಂಗಾಲೇಶ್ವರ ಸ್ವಾಮೀಜಿ ತಮ್ಮ ಆಕ್ರೋಶ ಹೊರಹಾಕಿದ್ದಾರೆ.

ನಾವು ಸ್ವಾಮೀಜಿಗಳಾದ ನಾವು ಪಕ್ಷ ವಿರೋಧಿಗಳಲ್ಲ, ವ್ಯಕ್ತಿಯ ವ್ಯಕ್ತಿತ್ವದ ವಿರೋಧಿಗಳು, ಅದಕ್ಕೆ ಕಾರಣ ಪ್ರಲ್ಹಾದ ಜೋಶಿ ಅವರ ನಡೆ, ನುಡಿಗಳು, ವ್ಯಕ್ತಿ ಪ್ರಜ್ಞೆಗಿಂತ ಸಮಷ್ಠಿಪ್ರಜ್ಞೆ ನಮಗಿದೆ ಎಂದು ಸ್ವಾಮೀಜಿಗಳ ತಿಳಿಸಿದ್ದಾರೆ.

ಹುಟ್ಟುಹಬ್ಬದ ದಿನ ಪತ್ನಿ, ಮಗುವಿನೊಂದಿಗೆ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿದ ನಟ ರಾಮ್‌ ಚರಣ್

ಈ ಸವಾಲು ಸ್ವೀಕರಿಸುವ ದಮ್ಮು ತಾಕತ್ತು ನಿಮಗಿದೆಯಾ?: ಬಿಜೆಪಿಗೆ ಸಿಎಂ ಸಿದ್ದರಾಮಯ್ಯ ಪ್ರಶ್ನೆ

ಬೆಳಗಾವಿಯಲ್ಲಿ ಶೆಟ್ಟರ್ ಪರ ಮಾಜಿ ಸಿಎಂ ಯಡಿಯೂರಪ್ಪ ಭರ್ಜರಿ ಕ್ಯಾಂಪೇನ್

- Advertisement -

Latest Posts

Don't Miss