Sunday, September 8, 2024

Latest Posts

ಮರೆಯಾದ ಸಾಮರಸ್ಯದ ಮಹಾನ್ ಸಂತ ಇಬ್ರಾಹಿಂ ಸುತಾರ

- Advertisement -

ಮರೆಯಾದ ಸಾಮರಸ್ಯದ ಮಹಾನ್ ಸಂತ ಇಬ್ರಾಹಿಂ ಸುತಾರ
ರಾಜ್ಯಾದ್ಯಂತ ಹಿಜಾಬ್ ವಿವಾದ ಭುಗಿಲೆದ್ದಿದೆ. ಈ ವಿವಾದ ಹೆಚ್ಚುತ್ತಿರುವ ನಡುವೆ ಹಿಂದೂ ಮುಸ್ಲಿಂ ಸಾಮರ‍್ಯದ ಕೇಂದ್ರವಾಗಿದ್ದ ವಿಶೇಷ ವ್ಯಕ್ತಿಯೊಬ್ಬರು ನಮ್ಮನ್ನಗಲಿದ್ದಾರೆ. ಹಿಜಾಬ್ ಬೇಕೇ ಬೇಕು ಅಂತ ಮುಸ್ಲಿಂ ಒಂದಷ್ಟು ಜನರಿದ್ದರೆ ಅವರು ಹಿಜಾಬ್ ಧರಿಸಿದರೆ ನಾವು ಕೇಸರಿ ಶಾಲು ಧರಿಸಿ ಬರುತ್ತೇವೆ ಅಂತ ಸಿಡಿದೆದ್ದಿರೋ ಮತ್ತೊಂದಷ್ಟು ಹಿಂದೂ ಜನರು. ಆದರೆ ಇವರಿಬ್ಬರಿಗೂ ಸಾಮರಸ್ಯದ ಕೊಂಡಿಯಾಗಿದ್ದ ಸಂತ ಇಬ್ರಾಹಿಂ ಸುತಾರ ಇಂದು ನಮ್ಮನ್ನಗಲಿದ್ದಾರೆ. ಬಾಗಲಕೋಟೆಯ ಮಹಾಲಿಂಗಪುರದ ಈ ಸಂತ ಕುರಾನ್ ಅಭ್ಯಾಸದ ಜೊತೆಗೆ ಹಿಂದೂ ಮಹಕಾವ್ಯಗಳನ್ನೂ ಅಭ್ಯಾಸ ಮಾಡಿ ಸಂಘರ್ಷಕ್ಕಿಂತ ಸಾಮರ‍್ಯವೇ ಶ್ರೇಷ್ಠ ಎಂದು ನಾಡಿಗೆ ಸಾರುವ ಮೂಲಕ ಪದ್ಮಶ್ರೀಗೂ ಭಾಜನರಾಗಿದ್ದರು.
ತಂದೆ ನಬೀಸಾಬ್ ತಾಯಿ ಅಮೀನಾಬಿ, ತಂದೆ ಬಡಗಿ ವೃತ್ತಿಯನ್ನು ಮಾಡಿಕೊಂಡಿದ್ದರು, ಬಡತನ ಇದ್ದಿದ್ದರಿಂದ ಓದಲೂ ಕೂಡ ಸಾಧ್ಯವಾಗಿರಲಿಲ್ಲ ಇಬ್ರಾಹಿಂ ಸುತಾರರಿಗೆ. ಮೂರನೇ ತರಗತಿಯವರೆಗೂ ಓದಿದ್ದ ಒಬ್ರಾಹಿಂರು ನೇಕಾರಿಕೆಯನ್ನು ಕಲಿತುಕೊಂಡು ಅದನ್ನೇ ಜೀವನಾಧರಾವಾಗಿಸಿಕೊಂಡಿದ್ದರು. ಕುರಾನ್ ಜೊತೆಗೆ ಭಜನಾಮಂಡಳಿಯ ಮೂಲಕ ಹಿಂದೂ ಧರ್ಮಗ್ರಂಥಗಳಾದ ಭಗವದ್ಗೀತೆ ಮತ್ತು ರಾಮಾಯಣ ಮಹಾಭಾರತ ಸೇರಿ ಉಪನಿಷತ್ತಿನ ಸಾರವನ್ನೂ ಅರಿತಿದ್ದ ಸುತಾರರು ಪ್ರವಚನಗಳ ಮೂಲಕ ಅರಿವಿನ ಆಂದೋಲನದ ಮೂಲಕ ಸಮಾಜದ ಸಾಮರಸ್ಯದ ಕೊಂಡಿಯಾಗಿದ್ದರು.
ಸೂಫಿಸಂತರಾಗಿಗ ನಾಡಿನಲ್ಲಿ ಕನ್ನಡದ ಕಬೀರ ಎಂದೇ ಮನೆಮಾತಾಗಿದ್ದ ಇಬ್ರಾಹಿಂ ಸುತಾರರನ್ನು ಅರಸಿ ಹಲವು ಪುರಸ್ಕಾರಗಳು ಪ್ರಾಪಗ್ತವಾಗಿದ್ದವು. ಈ ಶ್ರೇಷ್ಠ ಸಂತನ ನಿಧನಕ್ಕ ಮುಖ್ಯಮಂತ್ರಿಗಳೂ ಸೇರಿದಂತೆ ರಾಜ್ಯದ ಪ್ರಮುಖ ಮಂತ್ರಿಗಳು ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಜೊತೆಗೆ ಸಾಮರಸ್ಯದ ಸಂತನಿಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ಅಂತೀಮಸಂಸ್ಕಾರ ನಡೆಸಲು ತೀರ್ಮಾನಿಸಲಾಗಿದೆ.

- Advertisement -

Latest Posts

Don't Miss