ಛತ್ತೀಸ್ ಘಡ:
ಮದುವೆ ಸಮಾರಂಭ ಎಂದರೆ ಅದು ಹಬ್ಬದ ವಾತಾವರಣ ಸ್ನೆಹಿತರು ಸಂಬಂಧಿಗಳು ಹಿತೈಷಿಗಳು ಎಲ್ಲರೂ ಬಂದಿರುತ್ತಾರೆ. ಹಬ್ಬದ ವಾತಾವರಣ ಸೂತಕದ ವಾತಾವರಣವಾದರೆ ಹೇಗೆ ಇದೇ ರೀತಿ ಒಂದು ಘಟನೆ ಛತಿಸ್ ಘಡದ ಕಬೀರಧಾಮ ಜಿಲ್ಲೆಯಲ್ಲಿ ನಡೆದಿದೆ.
ಮದುವೆಗೆ ಸ್ನೇಹಿತರು ಹಲವಾರು ರೀತಿಯ ಉಡುಗೊರೆಗಳನ್ನು ನೀಡುತ್ತಾರೆ ವಿಗ್ರಹಗಳು. ಬಟ್ಟೆಗಳು , ಪೋಟೋಗಳು ಹೀಗೆ ನಾನಾ ರೀತಿಯ ವಸ್ತುಗಳನ್ನು ನೀಡುತ್ತಾರೆ . ಅದೇ ರೀತಿ ನವದಂಪತಿಗಳ ಮದುವೆಯಲ್ಲಿ ಹೋಮ್ ತಿಯೇಟರ್ ಸೌಂಡ್ ಸಿಸ್ಟಮ್ ಸಹ ಸ್ನೇಹಿತ ಬಳಗದವರು ಮದುವೆ ಉಡುಗೊರೆಯಾಗಿ ನೀಡಿರುತ್ತಾರೆ ಆದರೆ ಅದರಲ್ಲಿ ಬಾಂಬ್ ಇಟ್ಟು ಕೊಟ್ಟ ಇಬ್ಬರ ಜೀವವನ್ನೇ ಬಲಿತೆಗೆದುಕೊಂಡಿದ್ದಾರೆ ಒಬ್ಬ ಮದುಮಗ ಇನ್ನೊಬ್ಬ ಅವನ ಸಹೋದರ
ನಡೆದ ಘಟನೆ :
ಪ್ರಾಥಮಿಕ ಮಾಹಿತಿಯ ಪ್ರಕಾರ ಹೇಮೇಂದ್ರ ಮೆರಾವಿ ( 22 )ಏಪ್ರಿಲ್ 1 ರಂದು ಮದುವೆಯಾಗಿದ್ದರು ಸೋಮವಾರ, ಮದುಮಗ ಮತ್ತವ ಕುಟುಂಬಸ್ಥರು ಕುಟುಂಬ ಮದುವೆಗೆ ನೀಡಿದ ಉಡುಗೊರೆಗಳನ್ನು ಮನೆಗೆ ತಂದು ಕೋಣೆಯೊಳಗೆ ತೆಗೆಯುತ್ತಿರುವ ವೇಳೆ ಹೋಮ್ ಥಿಯೇಟರ್ ಮ್ಯೂಸಿಕ್ ಸಿಸ್ಟಮ್ ತೆಗೆದು ಸ್ವಿಚ್ ಬೋರ್ಡ್‌ಗೆ ಕನೆಕ್ಟ್ ಮಾಡಿ ಆನ್ ಮಾಡಿದ ಬಳಿಕ ದೊಡ್ಡ ಪ್ರಮಾಣದ ಸ್ಫೋಟ ಸಂಭವಿಸಿದೆ ಇನ್ನು, ಸ್ಫೋಟದ ತೀವ್ರತೆ ಎಷ್ಟಿತ್ತೆಂದರೆ, ಹೋಮ್ ಥಿಯೇಟರ್ ವ್ಯವಸ್ಥೆ ಇರಿಸಲಾಗಿದ್ದ ಕೊಠಡಿಯ ಗೋಡೆಗಳು ಮತ್ತು ಛಾವಣಿಯೂ ಕುಸಿದು ಬಿದ್ದಿದೆ. ಎಂದು ಕಬೀರ್‌ಧಾಮ್ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಮನೀಶಾ ಠಾಕೂರ್ ಮಾಹಿತಿ ನೀಡಿದ್ದಾರೆ.
ಈ ಘಟನೆಯಲ್ಲಿ, ನವ ವಿವಾಹಿತ ಹೇಮೇಂದ್ರ ಮೆರಾವಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಾಗೂ, ಅವರ ಸಹೋದರ ರಾಜ್‌ಕುಮಾರ್ (30) ಮತ್ತು ಒಂದೂವರೆ ವರ್ಷದ ಬಾಲಕ ಸೇರಿದಂತೆ ಇತರ ನಾಲ್ವರಿಗೆ ಸುಟ್ಟ ಗಾಯಗಳಾಗಿದ್ದು, ಅವರನ್ನು ಕೌರಾದದ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು ಚಿಕಿತ್ಸೆ ವೇಳೆ ಮೆರಾವಿ ಅವರ ಸಹೋದರ ಮೃತಪಟ್ಟಿದ್ದು, ಇತರರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
ಬಳಕೆದಾರರ ಅನುಕೂಲಕ್ಕೆ ತಕ್ಕಂತೆ ಹೊಸ ಆವಿಷ್ಕಾರಕ್ಕೆ ತಯಾರಾಗಿರುವ ವ್ಯಾಟ್ಸಪ್