ಮಳೆಗಾಲ ಶುರುವಾಗಿದೆ. ಸದ್ಯ ಬಜ್ಜಿ ಬೋಂಡಾ ಸಮೋಸಾ ಸೀಸನ್. ಆದ್ರೆ ಕೊರೊನಾ ಭೀತಿಯಿಂದ ಹೊರಗಿನ ತಿಂಡಿ ತಿನ್ನೋಕ್ಕೆ ಹೆದರಿಕೆಯಾಗಿದೆ.

ಅದಕ್ಕೆ ನಾವಿವತ್ತು ಸಿಂಪಲ್ ಆಗಿ ಕಾರ್ನ್ ಚಾಟ್ ಮಾಡೋದು ಹೇಗೆ ಅನ್ನೋದನ್ನ ಹೇಳ್ತೀವಿ ಕೇಳಿ. ಕಾರ್ನ್ ಚಾಟ್ ಮಾಡಲು ಬೇಕಾಗುವ ಸಾಮಗ್ರಿಯನ್ನ ನೋಟ್ ಮಾಡಿಕೊಳ್ಳಿ.
ಒಂದು ಕಪ್ ಬೇಯಿಸಿದ ಸ್ವೀಟ್ ಕಾರ್ನ್, ಸಣ್ಣಗೆ ಹೆಚ್ಚಿದ ಈರುಳ್ಳಿ, ಸಣ್ಣಗೆ ಹೆಚ್ಚಿದ ಸೌತೇಕಾಯಿ, ತುರಿದ ಕ್ಯಾರೆಟ್, ಮಸಾಲೆ ಶೇಂಗಾ, ನೈಲಾನ್ ಸೇವು, ಸಣ್ಣಗೆ ಹೆಚ್ಚಿದ ಕೊತ್ತೊಂಬರಿ ಸೊಪ್ಪು, ಒಂದು ಚಮಚ ನಿಂಬೆರಸ, ಚಿಟಿಕೆ ಪೆಪ್ಪರ್ ಪುಡಿ, ಚಿಟಿಕೆ ಚಾಟ್ ಮಸಾಲ ಪುಡಿ, ಚಿಟಿಕೆ ಖಾರದ ಪುಡಿ, ಅಗತ್ಯಕ್ಕೆ ತಕ್ಕಷ್ಟು ಉಪ್ಪು.
ಮಾಡುವ ವಿಧಾನ: ಬೇಯಿಸಿದ ಕಾರ್ನ್‌ಗೆ ಈರುಳ್ಳಿ, ಸೌತೇಕಾಯಿ, ತುರಿದ ಕ್ಯಾರೆಟ್,ಮಸಾಲೆ ಶೇಂಗಾ, ನೈಲಾನ್ ಸೇವು, ಸಣ್ಣಗೆ ಹೆಚ್ಚಿದ ಕೊತ್ತೊಂಬರಿ ಸೊಪ್ಪು, ನಿಂಬೆರಸ, ಪೆಪ್ಪರ್ ಪುಡಿ, ಚಾಟ್ ಮಸಾಲ ಪುಡಿ, ಖಾರದ ಪುಡಿ, ಉಪ್ಪು ಸೇರಿಸಿ ಮಿಕ್ಸ್ ಮಾಡಿದ್ರೆ ಸಿಂಪಲ್ ಕಾರ್ನ್ ಚಾಟ್ ರೆಡಿ.
ಈ ತಿಂಡಿ ರುಚಿಕರವಾಗಿರುವುದಲ್ಲದೇ, ಆರೋಗ್ಯಕರವೂ ಹೌದು. ಮಕ್ಕಳು ಜಂಕ್‌ಫುಡ್ ಬೇಕೆಂದು ಹಠ ಮಾಡಿದ್ರೆ, ಈ ತಿಂಡಿ ಮಾಡಿಕೊಡಿ.
ಶ್ರಾವಣಿ ಸೋಮಯಾಜಿ, ಕರ್ನಾಟಕ ಟಿವಿ
