ನಾಲ್ಕು ಬಾರಿ ಗುಬ್ಬಿಯಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದ ಎಸ್. ಆರ್. ಶ್ರೀನಿವಾಸ್ ಅವರಿಗೆ ಅಪಮಾನವಾಗಿದ್ದು, ಅವರಿಗೆ ಅಪಮಾನ ಮಾಡಿದ ಪಕ್ಷದಲ್ಲಿ ನಾವ್ಯಾರು ಇರುವುದಿಲ್ಲವೆಂದು, ಜೆಡಿಎಸ್ ಪಕ್ಷಕ್ಕೆ ವಾಸಣ್ಣ ಅಭಿಮಾನಿಗಳು ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಈ ಬಗ್ಗೆ ಮಾತನಾಡಿದ ವಾಸಣ್ಣ ಅಭಿಮಾನಿ ಬಳಗದ ಸಿದ್ದರಾಜು, ವಾಸಣ್ಣ ಆಡಳಿತದಲ್ಲಿರುವಾಗಲೇ, ಅವರಿಗೆ ಗೊತ್ತಾಗದಂತೆ, ಮುಂದಿನ ಚುನಾವಣೆಗೆ ಇನ್ನೋರ್ವ ಅಭ್ಯರ್ಥಿಯನ್ನು ತಂದು ನಿಲ್ಲಿಸಿರೋದು ತಪ್ಪು ಎಂದಿದ್ದಾರೆ.
ತುಮಕೂರಿನ ಅಮ್ಮನ ಘಟ್ಟ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಸಣ್ಣ ಅಭಿಮಾನಿಗಳು ಜೆಡಿಎಸ್ ಪಕ್ಷಕ್ಕೆ ಸಾಮೂಹಿಕ ರಾಜೀನಾಮೆ ನೀಡಿದ್ದಾರೆ. ಈ ಮೂಲಕ ಜೆಡಿಎಸ್ ತೊರೆದು, ನಾವೆಲ್ಲ ವಾಸಣ್ಣ ಅಭಿಮಾನಿ ಬಳಗಕ್ಕೆ ಸೇರ್ಪಡೆಯಾಗುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ವೇಳೆ ಮಾತನಾಡಿದ ಮುಖಂಡ ವೆಂಕಟೇಶ್, ಜನವರಿಯಲ್ಲಿ ನಮ್ಮ ಶಾಸಕರು ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತಾರೆ. ಅವರಿಗೆ ಟಿಕೇಟ್ ಕೂಡ ಸಿಗುತ್ತದೆ. ಅವರು ಗೆದ್ದು ಬರುತ್ತಾರೆಂಬ ನಂಬಿಕೆ ನಮಗಿದೆ. ಈ ಬಗ್ಗೆ ಕಾರ್ಯಕ್ರಮವನ್ನೂ ಹಮ್ಮಿಕೊಳ್ಳಲಾಗುತ್ತದೆ ಎಂದು ಹೇಳಿದ್ದಾರೆ.
ಅಲ್ಲದೇ, ನಮ್ಮ ವಾಸಣ್ಣ ಎಲ್ಲಿರುತ್ತಾರೋ, ನಾವು ಅಲ್ಲಿರುತ್ತೇವೆ. 20 ವರ್ಷಗಳಲ್ಲಿ ನಮ್ಮ ಗ್ರಾಮೀಣ ಭಾಗ ಅಭಿವೃದ್ಧಿಯಾಗಲು ಅವರೇ ಕಾರಣ. ಮುಂದಿನ ಚುನಾವಣೆಯಲ್ಲಿ ಅವರೇ ಗೆಲ್ಲುವುದು ಶತಸಿದ್ಧ ಎಂದು ವೆಂಕಟೇಶ್ ಹೇಳಿದ್ದಾರೆ.
ಸೆಲ್ಫಿ ತೆಗೆದುಕೊಳ್ಳುವಾಗ ತಲಪಾತಕ್ಕೆ ಬಿದ್ದು ನಾಲ್ಕು ಜನ ವಿದ್ಯಾರ್ಥಿನಿಯರು ನೀರು ಪಾಲು