Thursday, December 12, 2024

Latest Posts

ಕಿಮ್ಸ್ ಆಸ್ಪತ್ರೆಯಲ್ಲಿನ ಭ್ರಷ್ಟಾಚಾರ ಮತ್ತು ಅವ್ಯವಹಾರ ಖಂಡಿಸಿ ಎಎಪಿ ಪಕ್ಷದಿಂದ ಬ್ರಹತ್ ಪ್ರತಿಭಟನೆ

- Advertisement -

Hubli News: ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಆಗುತ್ತಿರುವ ಸಮಸ್ಯೆಗಳ ಕುರಿತು ಆಮ್ ಆದ್ಮಿ ಪಕ್ಷದ ಅಧ್ಯಕ್ಷ ಸಂಜೀವ ಬೆಳಗೇರಿ ನೇತೃತ್ವದಲ್ಲಿ ಬ್ರಹತ್ ಪ್ರತಿಭಟನೆ ಮಾಡಲಾಯಿತು.

ಉತ್ತರ ಕರ್ನಾಟಕದ ಬಡವರ ಸಂಜೀವಿನಿ ಎಂದೇ ಹೆಸರು ವಾಸಿ ಆಗಿರುವ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಪ್ರತಿ ಒಂದಕ್ಕೂ ದುಡ್ಡು ಪಡೆಯುವುದು, ರೋಗಿ ಒಳಗೆ ಬರುವುದರಿಂದ ಹಿಡಿದು ಪ್ರತಿ ಒಂದಕ್ಕೂ ದುಡ್ಡು ತೆಗೆದುಕೊಳ್ಳುತ್ತಿರುದನ್ನು ಖಂಡಿಸಿ ಮತ್ತು ಪ್ರತಿ ದಿನ ಸಾವಿರಾರು ಜನರು ಬರುವ ಈ ಆಸ್ಪತ್ರೆಯಲ್ಲಿ ಈ ರೀತಿ ಹಗಲು ದರೋಡೆ ನಡೆಯುತ್ತಿದ್ದರೂ ಆಡಳಿತ ಮಂಡಳಿ ಆಗಲಿ ನಿರ್ದೇಶಕರು ಆಗಲಿ ಸುಮ್ಮನೆ ಕುಳಿತಿರುವುದು ಅನುಮಾನಕ್ಕೆ ಕಾರಣವಾಗಿದೆ ಇದನ್ನು ಆಮ್ ಆದ್ಮಿ ಪಕ್ಷ ಸಹಿಸುವುದಿಲ್ಲ ಉಗ್ರ ಹೋರಾಟ ಮಾಡಲಾಗುವುದು ಎಂದು ಹುಬ್ಬಳ್ಳಿಯ ತಾಲುಕು ಅಧ್ಯಕ್ಷ ಸಂಜೀವ ಅವರು ಎಚ್ಚರಿಕೆಯನ್ನು ನೀಡಿದರು.

ಇನ್ನೂ ಕಿಮ್ಸ್ ಆವರಣದಲ್ಲಿ ಅನಧಿಕೃತ ಅಂಗಡಿಗಳು ದಿನಕ್ಕೊಂದು ಹುಟ್ಟಿಕೊಂಡಿದ್ದು ಇದರ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕು ಜೊತೆಗೆ ಸರಕಾರಿ ನಿಯಮಾವಳಿಗಳನ್ನು ಗಾಳಿಗೆ ತೂರಿ ಕಾನೂನು ಬಾಹಿರವಾಗಿ ಈ ರೀತಿ ಅನಧಿಕೃತ ಅಂಗಡಿಗಳನ್ನ ನಡೆಸುವವರ ಬಗ್ಗೆ ಕ್ರಮ ಕೈಗೊಂಡು ತೆರವು ಗೊಳಿಸಬೇಕು ಎಂದು ನಿರ್ದೇಶಕರಿಗೆ ತಿಳಿಸಿದರು.

ಇನ್ನೂ ಕೆಲಸಕ್ಕೆ ಬರಬೇಕಾದರೆ 50 ಸಾವಿರದಿಂದ ಒಂದು ಲಕ್ಷ ಲಂಚ ಕೊಟ್ಟು ಒಳಗೆ ಬರುವುದನ್ನ ಆಮ್ ಆದ್ಮಿ ಪಕ್ಷ ಖಂಡಿಸುತ್ತದೆ ಬಡವರು ದುಡ್ಡಿಗಾಗಿ ಒಂದು ತುತ್ತು ಅನ್ನಕ್ಕಾಗಿ ಕೆಲಸ ಕೇಳಿಕೊಂಡು ಬಂದಾಗ ಅವರಿಗೆ ಲಕ್ಷಗಟ್ಟಲೆ ಲಂಚ ಕೇಳಿದರೆ ಎಲ್ಲಿಂದ ಕೊಡಬೇಕು ಇಷ್ಟೆಲ್ಲಾ ಭ್ರಷ್ಟಾಚಾರ ಅವ್ಯವಹಾರ ಕಣ್ಣು ಮುಂದೆ ನಡೆಯುತ್ತಿದ್ದರೂ ಆಡಳಿತ ಮಂಡಳಿ ಕಣ್ಣು ಮುಚ್ಚಿ ಕುಳಿತಿದೆ ಇದಕ್ಕೆಲ್ಲ ಕಡಿವಾಣ ಹಾಕದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಏನು ತಾಲುಕು ಅಧ್ಯಕ್ಷ ಸಂಜೀವ ಎಚ್ಚರಿಕೆ ನೀಡಿದರು.

ಇನ್ನೂ ಸ್ಥಳಕ್ಕೆ ಬಂದ ಕಿಮ್ಸ್ ನಿರ್ದೇಶಕರಾದ ಕಮ್ಮಾರ ಅವರು ನಿಮ್ಮ ಎಲ್ಲ ಬೇಡಿಕೆಗಳನ್ನು ಆದಷ್ಟು ಬೇಗ ಬಗೆಹರಿಸಲಾಗುವುದು ಮತ್ತು ಯಾವುದೇ ರೀತಿಯ ಅವ್ಯವಹಾರ ನಡಿಯದ ಹಾಗೆ speaker ಅಳವಡಿಸಲಾಗಿದೆ ಇನ್ನೂ ಅದನ್ನು ಹೆಚ್ಚುವರಿ ಮಾಡಿ ತಡೆಯಲು ನಾನು ಕೂಡ ಸಹಕಾರ ಮಾಡುತ್ತೇನೆ ಎಂದು ಪರಿಸ್ಥಿತಿಯನ್ನ ಶಾಂತ ಗೊಳಿಸಿದರು

ಇನ್ನೂ ಈ ಸಂದರ್ಭದಲ್ಲಿ ತಾಲುಕು ಅಧ್ಯಕ್ಷ ಸಂಜೀವ ಬೆಳಗೆರಿ,ಮಂಜುನಾಥ ಬೆಳಗೆರೀ, ಜಾಕಿರ್ ರಾಮದುರ್ಗ, ಇಜಾಜ್, ಸದಾನಂದ್ ರಾಜೂರ,ಪ್ರತೀಕ ತಳವಾರ್, ಬಾಷಾ ತೆಳಗವಾಡ್,ಉಷಾ ಛಲವಾದಿ,ಗಾಯತ್ರಿ ಪೂಜಾರ್,s b ಹುಬ್ಬಳ್ಳಿಕರ್ ಇನ್ನೂ ಆಮ್ ಆದ್ಮಿ ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು…

- Advertisement -

Latest Posts

Don't Miss