Thursday, December 5, 2024

Latest Posts

ವಿದ್ಯಾಕಾಶಿಯಲ್ಲಿ ತಡರಾತ್ರಿ ಪಿಸ್ತೂಲ್ ಸದ್ದು.. ಆಗಿದ್ದೇನು..?

- Advertisement -

Dharwad News: ವಿದ್ಯಾಕಾಶಿ ಧಾರವಾಡದಲ್ಲಿ ನಿನ್ನೆ ತಡರಾತ್ರಿ ಪಿಸ್ತೂಲ್ ಸದ್ದು ಮಾಡಿದೆ. ಧಾರವಾಡ‌ ನಗರದ ಆರ್.ಎನ್.ಶೆಟ್ಟಿ ಕ್ರೀಡಾಂಗಣದ ಮುಂಭಾಗದ ರಸ್ತೆಯಲ್ಲೇ ಪಿಸ್ತೂಲಿನಿಂದ ಗುಂಡು ಹಾರಿದೆ.

ಧಾರವಾಡದ ಸಂಗಮ್ ಸರ್ಕಲ್ ಬಳಿ ಫೈನಾನ್ಸ್ ಕಚೇರಿ ಹೊಂದಿರುವ ಅಭಿಷೇಕ್ ಬಡ್ಡಿಮನಿ ಎಂಬುವವರೇ ತಮ್ಮ ಪಿಸ್ತೂಲಿನಿಂದ ಗುಂಡು ಹಾರಿಸಿದ್ದು.

ಅಭಿಷೇಕ್ ನಿನ್ನೆ ರಾತ್ರಿ ಆರ್.ಎನ್.ಶೆಟ್ಟಿ ಕ್ರೀಡಾಂಗಣದ ರಸ್ತೆಯಲ್ಲಿ ಬೈಕ್ ಮೇಲೆ ಹೋಗುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಬಂದ ಕಾರೊಂದು ಅಭಿಷೇಕ ತೆಗೆದುಕೊಂಡು ಹೋಗುತ್ತಿದ್ದ ಸ್ಕೂಟಿಗೆ ಡಿಕ್ಕಿ ಹೊಡೆದಿದೆ ಎಂದು ಹೇಳ್ತಾರೆ.

ಕಾರಿನಲ್ಲಿ ಮೂರು ಜನ ಇದ್ದರು ಎಂದು ಅವರು ತಮ್ಮ ದೂರಿನಲ್ಲಿ‌ ಹೇಳಿದ್ದಾರೆ. ‌ತನ್ನ ಸ್ಕೂಟಿಗೆ ಕಾರು ಡಿಕ್ಕಿ ಹೊಡೆದಿದ್ದರಿಂದ ಅಭಿಷೇಕ ಅವರೊಂದಿಗೆ ವಾಗ್ವಾದ ನಡೆಸಿದ್ದಾರೆ.

ಸ್ಥಳದಲ್ಲೇ ಎಲ್ಲರೂ ಕೈ ಕೈ ಮಿಲಾಯಿಸಿದ ನಂತರ ಅಭಿಷೇಕ ತನ್ನ ಬಳಿ ಇದ್ದ ಪಿಸ್ತೂಲಿನಿಂದ ಕಾರಿನ ಮೇಲೆ ಎರಡು ಸುತ್ತು ಗುಂಡು ಹಾರಿಸಿದ್ದಾನೆ.

ಆ ನಂತರ ಸ್ಥಳದಲ್ಲೇ ಪಿಸ್ತೂಲ್ ಹಾಗೂ ಸ್ಕೂಟಿ ಬಿಟ್ಟು ಅಲ್ಲಿಂದ ಓಡಿ ಹೋಗಿದ್ದಾನೆ. ಕಾರಿನಲ್ಲಿದ್ದ ಮೂವರು ಅಲ್ಲಿಂದ ಜಿಲ್ಲಾಸ್ಪತ್ರೆಗೆ ಹೋಗಿ ಆನಂತರ ಉಪನಗರ ಠಾಣೆಗೆ ಹೋಗಿದ್ದಾರೆ. ಸದ್ಯ ಸ್ಥಳದಲ್ಲಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸ್ಥಳಕ್ಕೆ ಪೊಲೀಸ್ ಆಯುಕ್ತ ಎನ್ ಶಶಿಕುಮಾರ್ ಗೇಟಿನ ನೀಡಿ ಪರಿಶೀಲನೆ ನಡೆಸಿದ್ದಾರೆ.

‌ಈ ಬಗ್ಗೆ ಎರಡು ಕಡೆಯಿಂದ ದೂರಿಗೆ‌ ಪ್ರತಿ ದೂರು ದಾಖಲಾಗಿದೆ ಎಂದು ತಿಳಿಸಿದ ಪೊಲೀಸ್ ಆಯುಕ್ತರು, ಸದ್ಯ ಅಭಿಷೇಕ್ ಎಂಬುವವನಿಗೆ ವಶಕ್ಕೆ ಪಡೆದಿದ್ದಾರೆ. ಇನ್ನು ಕಾರಿನಲ್ಲಿದ್ದ ಪ್ರಜ್ವಲ್, ಗಣೇಶ ಹಾಗೂ ದಿನೇಶ ಎಂಬ ಮೂವರು ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರೆ‌ ಘಟನೆ ಕುರಿತು ಧಾರವಾಡ ಉಪನಗರ ಠಾಣೆಯಲ್ಲಿ ದೂರು ಸಹ ದಾಖಲಾಗಿದೆ.

- Advertisement -

Latest Posts

Don't Miss