Hubli News: ಹುಬ್ಬಳ್ಳಿ: ಕರ್ನಾಟಕ ರಾಜ್ಯ ರೈತ ಸಂಘಗಳ ಏಕೀಕರಣ ಹೋರಾಟ ಸಂಘಟನೆಯ ಎಂ.ಎನ್.ಕುಕನೂರು, ಇಂದು ನಡೆದ ಸಭೆಯಲ್ಲಿ ಮಾತನಾಡಿ, ಡಿ.16 ರಂದು ಬೆಳಗಾವಿ ರೈತ ಸರ್ಕಲ್‌ನಿಂದ ಸುವರ್ಣ ಸೌಧದವರೆಗೆ ರೈತರಿಂದ ಬೃಹತ್ ಪ್ರತಿಭಟನೆ ಮಾಡಲಾಗುತ್ತಿದೆ. 31 ಜಿಲ್ಲೆಯ ರೈತರು ರೈಲ್ವೆ ಮೂಲಕ ಬೆಳಗಾವಿಗೆ ಬಂದು ಪಾದಯಾತ್ರೆಯಲ್ಲಿ ಭಾಗಿಯಾಗುತ್ತಾರೆ ಎಂದಿದ್ದಾರೆ.
ರಾಜ್ಯ ರೈತರ ಸಾಲಾ ಮನ್ನಾ, ಕಬ್ಬಿನ ಬೆಲೆ 5,500 ಏರಿಕೆ ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಪ್ರತಿಭಟನೆ ನಡೆಸಲಾಗುತ್ತದೆ. ಸ್ವಾಮಿನಾಥನವರದಿ ಎತಾವತ್ತಾಗಿ ಜಾರಿ, ಬಗರ ಹುಕುಂ ಸಾಗವಳಿ ಮಾಡು ನೀಜವಾದ ರೈತರಿಗೆ ಸಾಗುವಳಿ ಚೀಟಿ ನೀಡವಂತೆ ನೀಡಬೇಕು. ಆರ್‌ಟಿಸಿಯಲ್ಲಿ ವಕ್ಫ ಹೆಸರು ಬರುತ್ತಿರುವುದನ್ನು ವಕ್ಫ ಗೇಜೆಟ್ ನೋಟಿಫೀಕೇಶನ ರದ್ದು ಮಾಡಿ ತಡೆಯಬೇಕು. ವಿದ್ಯುತ್ ಖಾಸಗೀಕರಣ ಸೇರಿ ರೈತರ ಸಾಲ ಪಡೆಯುವ ವೇಳೆ ಸಿಬಿಲ್ ಸ್ಕೋರ್ ಮಾನದಂಡ ಕೈ ಬೀಡಬೇಕು.
ಬೇಡಿಕೆಗಳ ಈಡೇರಿಕೆಗಾಗಿ ಕರ್ನಾಟಕ ರಾಜ್ಯ ರೈತ ಸಂಘಗಳ ಏಕೀಕರಣ ಹೋರಾಟ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಗುತ್ತಿದೆ. ಬೆಳಗಾವಿ ರೈತ ಸರ್ಕಲ್ ನಿಂದ ಸುವರ್ಣ ಸೌಧದವರೆಗೂ ಪಾದ ಯಾತ್ರೆ ಮೂಲಕ ತೆರಳಿತ್ತೇವೆ. ಇದೊಂದು ಬೃಹತ್ ಪ್ರತಿಭಟನೆ ಮೆರವಣಿಗೆಯಾಗಿದ್ದುಣ ಸರ್ಕಾರ ನಮ್ಮ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಆಗ್ರಹಿಸಲಿದ್ದಾರೆಂದು ತಿಳಿಸಿದರು.