Sunday, June 1, 2025

Latest Posts

ಅತ್ಯಾಚಾರಿ ಆರೋಪಿ ಮೌಲ್ವಿ ಭಾರತದವನೇ ಅಲ್ಲ.. ಗುಲಾಮ್ ಜಿಲಾನಿಯ ಸ್ಪೋಟಕ ರಹಸ್ಯ ಬಯಲು

- Advertisement -

Hubballi News: ಮದರಸಾ ಶಿಕ್ಷಕಿಯ ಮೇಲಿನ ನಿರಂತರ ಅತ್ಯಾಚಾರ ಆರೋಪದಡಿ ಹುಬ್ಬಳ್ಳಿ ಪೊಲೀಸರಿಂದ ಬಂಧಿತನಾಗಿದ್ದ ಮೌಲ್ವಿ, ಗುಲಾಮ್ ಜಿಲಾನಿಯ ಸ್ಪೋಟಕ ರಹಸ್ಯ ಬಯಲಾಗಿದೆ. ಈತ ಭಾರತದವನೇ ಅಲ್ಲವೆಂದು ತಿಳಿದು ಬಂದಿದೆ.

ಮಧ್ಯಪ್ರದೇಶದಲ್ಲಿ ಬಂಧಿತನಾಗಿದ್ದ ಗುಲಾಮ್,ನಕಲಿ ದಾಖಲೆ ಸೃಷ್ಟಿಸಿ, ಭಾರತಕ್ಕೆ ಬಂದಿದ್ದಾನೆ. ಈತ ನೇಪಾಳದವನಾಗಿದ್ದು, ಮಧ್ಯಪ್ರದೇಶದ ಖಂಡವಾ ಎಂಬಲ್ಲಿಗೆ, 6 ವರ್ಷದ ಹಿಂದೆ ಬಂದು ನೆಲೆಸಿದ್ದ. ಅಲ್ಲದೇ, ನಕಲಿ ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ ಕೂಡ ಮಾಡಿಸಿದ್ದ. ಧರ್ಮ ಪ್ರವಚನ ನೀಡುತ್ತಿದ್ದ ಈ ಮೌಲ್ವಿ ಈಗಾಗಲೇ ಎರಡು ಮದುವೆಯಾಗಿದ್ದು, ಮೊದಲನೇಯವಳಿಗೆ ಡಿವೋರ್ಸ್ ನೀಡಿದ್ದ. ಎರಡನೇಯ ಪತ್ನಿ ಕೂಡ ನೇಪಾಳದಲ್ಲಿ ನೆಲೆಸಿದ್ದು, ಆಗಾಗ ನೇಪಾಳಕ್ಕೆ ಹೋಗಿ ಬರುತ್ತಿದ್ದ.

ಹುಬ್ಬಳ್ಳಿ ಮೂಲದ 23 ವರ್ಷದ ಯುವತಿ, ಮಧ್ಯಪ್ರದೇಶದ ಖಂಡವಾದಲ್ಲಿರುವ ಮುಫ್ತಿ ಗುಲಾಮ ಜಿಲಾನಿ ಅಜಹರಿಯ ಮದರಸಾದಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದಳು. ಗುಲಾಮ ಜಿಲಾನಿ ಅಜಹರಿ ಯುವತಿಯ ತಂದೆಯ ಪರಿಚಯಸ್ಥನಾಗಿದ್ದನು. ಮದುವೆ ಮಾಡಿಕೊಳ್ಳುವದಾಗಿ ಹೇಳಿ ಎರಡು ವರ್ಷದ ಅವಧಿಯಲ್ಲಿ ಮೇಲಿಂದ ಮೇಲೆ ಬಲಾತ್ಕಾರ ಮಾಡಿದ್ದಾನೆ. ಎರಡು ವರ್ಷದ ಅವಧಿಯಲ್ಲಿ ಗುಲಾಮ ಜಿಲಾನಿ ಅಜಹರಿ, ಒಟ್ಟು ನಾಲ್ಕು ಬಾರಿ ಆಕೆಯ ಗರ್ಭಪಾತ ಮಾಡಿಸಿದ್ದಾನೆ.

ಯುವತಿ ಐದನೇ ಬಾರಿಗೆ ಗರ್ಭಿಣಿಯಾದ ಬಳಿಕ ಆಕೆಯನ್ನು ತವರು ಮನೆ ಹುಬ್ಬಳ್ಳಿಯಲ್ಲಿ ಬಿಟ್ಟು, ನನ್ನ ನಿನ್ನ ನಡುವೆ ಯಾವುದೇ ಸಂಬಂಧ ಉಳಿದಿಲ್ಲ. ಈ ವಿಷಯ ಬಹಿರಂಗ ಮಾಡಿದರೆ ನಿನ್ನನ್ನು ಮತ್ತು ನಿನ್ನ ಕುಟುಂಬವನ್ನು ಜೀವ ಸಮೇತ ಬಿಡಲ್ಲ ಎಂದು ಬೆದರಿಕೆ ಹಾಕಿದ್ದಾನೆ. ಆಗ ಶಿಕ್ಷಕಿಗೆ ಈತನ ಬಂಡವಾಳ ಗೊತ್ತಾಗಿ, ಆಕೆ ಪೊಲೀಸರಿಗೆ ದೂರು ನೀಡಿದ್ದಾಳೆ. ಹುಬ್ಬಳ್ಳಿ ಪೊಲೀಸರು, ಮಧ್ಯಪ್ರದೇಶಕ್ಕೆ ತೆರಳಿ, ಮೌಲ್ವಿಯನ್ನು ಅರೆಸ್ಟ್ ಮಾಡಿದ್ದಾರೆ.

ಅಯೋಧ್ಯಾ ರಾಮ ಮಂದಿರದ ಮೇಲೆ ಬಾಂಬ್ ದಾಳಿ ಬೆದರಿಕೆ, ಯೋಗಿ ಆದಿತ್ಯನಾಥ್ ಹತ್ಯೆಗೂ ಸಂಚು..!

ಚುನಾವಣಾ ರಾಜಕಾರಣ ಬದಿಗಿಟ್ಟು ಮುಗ್ಧ ರೈತರ ನೆರವಿಗೆ ಧಾವಿಸಿ: ಬಿ.ವೈ.ವಿಜಯೇಂದ್ರ ಆಗ್ರಹ

ಫೋಟೋಶೂಟ್ ಮಾಡಿಸಬೇಡ ಎಂದಿದ್ದಕ್ಕೆ, ಯುವತಿ ಆತ್ಮಹತ್ಯೆ..

- Advertisement -

Latest Posts

Don't Miss