Hubballi Political News: ಹುಬ್ಬಳ್ಳಿ: ಹುಬ್ಬಳ್ಳಿಗಿಂದು ಡಿಸಿಎಂ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ್ದು, ಇಲ್ಲಿಂದ ಗದಗ ತೆರಳೋ ಮಾರ್ಗದಲ್ಲಿ, ಅವರ ಅಭಿಮಾನಿಗಳು ಅವರನ್ನ ಭೇಟಿ ಮಾಡಿ, ಹೂವಿನ ಸುರಿಮಳೆ ಸುರಿಸಿದ್ದಾರೆ.
ಅಲ್ಲದೇ, ಎಲ್ಲರ ಕೈಯಲ್ಲೂ ಡಿಕೆಶಿ ಮುಂದಿನ ಸಿಎಂ ಎಂಬ ಬೋರ್ಡ್ ಇದ್ದು, ಡಿಕೆ ಮುಂದಿನ ಸಿಎಂ ಎಂಬ ಘೋಷಣೆ ಕೂಡ ಕೂಗಿದ್ದಾರೆ. ಧಾರವಾಡ ಜಿಲ್ಲೆಯ ಅಣ್ಣಿಗೇರಿ ತಾಲೂಕಿನ ನಲವಡಿಯಲ್ಲಿ ಅಭಿಮಾನಿಗಳು ಡಿಕೆ ಮುಂದಿನ ಸಿಎಂ ಎಂದು ಹೇಳಿದ್ದು, ಡಿಕೆಶಿಗೆ ಜೆಸಿಬಿ ಮೂಲಕ ಪುಷ್ಪಾರ್ಚನೆ ಮಾಡಿ, ಭರ್ಜರಿ ಸ್ವಾಗತ ಕೋರಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಜಯವಾಗಲಿ. ಮುಂದಿನ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಗೆ ಜಯವಾಗಲಿ ಎಂದು ಘೋಷಣೆ ಕೂಗಿದ ಅಭಿಮಾನಿಗಳು, ಕುಂದಗೋಳ ತಾಲೂಕಿನ ಕೈ ನಾಯಕತ್ವಕ್ಕೂ ಬೇಡಿಕೆ ಇಟ್ಟಿದ್ದಾರೆ. ದಿವಂಗತ, ಸಿ.ಎಸ್.ಶಿವಳ್ಳಿ ಸಹೋದರನಾದ ಷಣ್ಮುಖ ಶಿವಳ್ಳಿಗೆ ಕೈ ನಾಯಕತ್ವ ಕೊಡಬೇಕು. ನಿಗಮ ಮಂಡಳಿ ಅಧ್ಯಕ್ಷ ಸ್ಥಾನವೂ ಬೇಕು ಎನ್ನುವ ಮೂಲಕ ಶಿವಳ್ಳಿ ಪರ ಅಭಿಮಾನಿಗಳು ಬ್ಯಾಟ್ ಬೀಸಿದ್ದಾರೆ.
ಶಿವಣ್ಣನ ಆರೋಗ್ಯದಲ್ಲಿ ಚೇತರಿಕೆ: ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆದ ನಟ ಶಿವರಾಜ್‌ಕುಮಾರ್
‘ದೊಡ್ಡ ಮಟ್ಟದಲ್ಲಿ ಅನಾಹುತವಾದರೆ ನೇರವಾಗಿ ರೂರಲ್ ಪೊಲೀಸ್ ಠಾಣೆಯವರೇ ಕಾರಣರಾಗುತ್ತಾರೆ’
ವೇದಿಕೆ ಮೇಲೆ ಡಿಕೆಶಿ ಹೆಸರು ಹೇಳೋದನ್ನೇ ಮರೆತ ಸಿದ್ದು: ಸಿಎಂ-ಡಿಸಿಎಂ ದೂರ ದೂರ!