Saturday, December 7, 2024

Latest Posts

ಮಾಯವಾಗಿಸೋ ಮಾಯಾವಿ… ಟ್ರೆಂಡ್ ಆಯ್ತು ಸೋನು-ಸಂಚಿತ್ ಹಾಡು

- Advertisement -

Movie News: ಸದ್ಯ ಯು ಟ್ಯೂಬ್ ಆನ್ ಮಾಡುತ್ತಿದ್ದಂತೆಯೇ ನಂಬರ್ ಒನ್ ಟ್ರೆಂಡಿಂಗ್ ನಲ್ಲಿರೋ ಸಾಂಗ್ ಈ ಮಾಯಾವಿ ಮಿನುಗು ನೀನು. ಅಂದಹಾಗೆ, ಈ ಹಾಡನ್ನೀಗ ಕೇಳದವರೇ ಇಲ್ಲವೆನ್ನಿ. ಅದರಲ್ಲೂ ಹಾಡು ಪ್ರಿಯರಿಗಂತೂ ಮಾಯಾವಿ ಸಾಂಗ್ ಮಾಯಗೊಳಿಸಿದೆ ಅಂದರೆ ತಪ್ಪಿಲ್ಲ. ಸೋನು ನಿಗಮ್ ವಾಯ್ಸ್ ನಲ್ಲಿರೋ ಹಾಡು ಅಂದರೆ ಕೇಳಬೇಕೇ? ಜೊತೆಗೆ ಸಂಚಿತ್ ಹೆಗಡೆ ಧ್ವನಿ ಕೂಡ ಹಾಡೊಳಗೆ ಮಿಂದೆದ್ದಿದೆ. ನ.6 ರಂದು ಸಲೀಂ ಸುಲೈಮನ್ ಮ್ಯೂಸಿಕ್ ಯು ಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆದ ಈ ಸಾಂಗ್ ಕೇವಲ ಹದಿನಾಲ್ಕು ದಿನಕ್ಕೆ 52 ಲಕ್ಷದ 46 ಸಾವಿರ ಕಿವಿಗಳು ಆಲಿಸಿವೆ ಅನ್ನೋದು ವಿಶೇಷ. ಕನ್ನಡದಲ್ಲಿ ಹಾಡುಗಳ ಕಾಲ ಮುಗೀತು ಅಂದವರಿಗೆ, ವಿಡಿಯೋ ಆಲ್ಬಂ ಸಾಂಗ್ ಕಥೆ ಮುಗೀತು ಅಂದುಕೊಂಡವರಿಗೆ ಈ ಮಾಯಾವಿ ಒಂದೊಳ್ಳೆಯ ಉತ್ತರ ಅನ್ನಬಹುದು.

ಈ ಹಾಡು ಕೇಳದವರು ಒಂದೊಮ್ಮೆ ಕಿವಿಗೊಟ್ಟು ಕೇಳಿ ನೋಡಿ, ಮಾಯಾವಿಯ ಧ್ವನಿಗೆ ಕಳೆದು ಹೋಗೋದು ಗ್ಯಾರಂಟಿ. ಮೊದಲೇ ಹೇಳಿದಂತೆ ಸಂಗೀತ ಅನ್ನೋದು ಮ್ಯಾಜಿಕ್ ಇದ್ದಂತೆ. ಸೋನು ನಿಗಮ್ ಮತ್ತು ಸಂಚಿತ್ ಹೆಗಡೆ ಅವರ ಧ್ವನಿಯಲ್ಲಿ ಮೂಡಿ ಬಂದ ಈ ಹಾಡು ಕೇಳಿದವರು ಮತ್ತೊಮ್ಮೆ, ಮಗದ್ದೊಮ್ಮೆ ಕೇಳಬೇಕು ಅಂತಂದುಕೊಳ್ಳೋದು ನಿಜ. ಅಷ್ಟರಮಟ್ಟಿಗೆ ಹಾಡು ಮನದಾಳಕ್ಕೆ ಇಳಿದುಬಿಡುತ್ತೆ. ಇಲ್ಲಿ ಗಮನಿಸಬೇಕಾದ ಮುಖ್ಯ ಅಂಶವೆಂದರೆ, ಸಂಗೀತ ಮತ್ತು ಸಾಹಿತ್ಯ. ಒಂದಕ್ಕಿಂತ ಒಂದು ಅದ್ಭುತ ಎನಿಸುವಷ್ಟರ ಮಟ್ಟಿಗೆ ಹಾಡಿನ ಔಟ್ ಪುಟ್ ಹೊರಬಂದಿದೆ. ಸಂಚಿತ್ ಹೆಗಡೆ ಅವರೇ ಕಂಪೋಸ್ ಮಾಡಿರೋ ಹಾಡಿಗೆ ನಾಗಾರ್ಜುನ್ ಶರ್ಮ ಅವರ ಸಾಹಿತ್ಯವಿದೆ. ಇಲ್ಲಿ ಸಾಹಿತ್ಯ ಕೂಡ ಮನಸ್ಸಿಗೆ ಮುದ ನೀಡುತ್ತೆ. ಅಷ್ಟೇ ಅಲ್ಲ, ಅದೊಂದು ಹುಡುಗಿಗೆ ಹೋಲಿಸಿ ಬರೆದಿರೋ ಹಾಡು. ಹಾಗಾಗಿಯೇ ಅಷ್ಟೊಂದು ಗುನು ಗುನುಗುವಂತಾಗಿದೆ….

ವಿಶೇಷವೆಂದರೆ, ಈ ಹಾಡು ಗಾಯಕರಾದ ಸೋನು ನಿಗಮ್ ಮತ್ತು ಸಂಚಿತ್ ಹೆಗಡೆ ಅವರ ಕಾಂಬಿನೇಷನ್ ನಲ್ಲಿ ಮೂಡಿಬಂದಿದೆ. ಅದ್ಭುತ ಸೆಟ್ ಹಾಕಿ, ಶೂಟ್ ಮಾಡಲಾಗಿದೆ. ನೋಡೋಕೂ ಅಂದ, ಕೇಳೋಕು ಚಂದವೆನಿಸೋ ಈ ಹಾಡು ಇಬ್ಬರ ಜುಗಲ್ ಬಂಧಿ ರೀತಿ ಕಾಣುತ್ತೆ. ಇದುವರೆಗೆ ಬಂದಿರುವ ಮೆಲೋಡಿ ಆಲ್ಬಂಗಳ ಪೈಕಿ ದಿ ಬೆಸ್ಟ್ ಆಲ್ಬಂ ಅಂತ ಮುಲಾಜಿಲ್ಲದೆ ಹೇಳಬಹುದು. ಈ ಹಾಡಿನ ಸ್ಪೆಷಲ್ ಅಂದರೆ, ಸಂಗೀತ ಸಂಯೋಜನೆ ಮತ್ತು ಸಾಹಿತ್ಯ ಅದಕ್ಕೆ ತಕ್ಕಂತಿರೋ ಧ್ವನಿ. ಎಲ್ಲದ್ದಕ್ಕೂ ಹೆಚ್ಚಾಗಿ, ಹಾಡನ್ನು ಇನ್ನಷ್ಟು ಅಂದಗಾಣಿಸಿರುವ ಸ್ಟುಡಿಯೋ ಸೆಟಪ್. ತುಂಬ ರಿಚ್ ಆಗಿ ಕಾಣುವ ಈ ಹಾಡು ಸದ್ಯ ಎಲ್ಲರ ಬಾಯಲ್ಲೂ ಗುನುಗುವಂತಿದೆ. ನೋಡೋಕೂ ಅದ್ಭುತ ಅಂದರೆ, ಅದಕ್ಕೆ ಕಾರಣ ಡಿಓಪಿ ಅಭಿಷೇಕ್ ಶಮ ಅವರ ಕ್ಯಾಮೆರಾ ಕೈ ಚಳಕ.

ಅದೇನೆ ಇರಲಿ, ಸೋನು ನಿಗಮ್ ಅವರಿಗೆ ಬಹು ಬೇಡಿಕೆಯ ಗಾಯಕ ಅನ್ನುವ ಹೆಸರೇನಾದರೂ ಇದ್ದರೆ, ಅದು ಕನ್ನಡ ಚಿತ್ರರಂಗ ಕೊಟ್ಟ ಕೊಡುಗೆ ಎನ್ನಬಹುದು. ಕನ್ನಡದ ಹಾಡುಗಳನ್ನು ಹಾಡುವ ಮೂಲಕ ಕಾಡುವ ಮತ್ತು ಪದೇ ಪದೇ ಗುನುಗುವ ಹಾಡು ಕೊಟ್ಟಿದ್ದು ಇದೇ ಸೋನು ನಿಗಮ್. ಕನ್ನಡದ ಹಾಡುಗಳಿಂದಲೇ ತನ್ನ ಬೇಡಿಕೆ ಹೆಚ್ಚಿಸಿಕೊಂಡಿದ್ದು ಸುಳ್ಳಲ್ಲ. ಆದರೆ, ಕನ್ನಡಿಗರಿಗೆ ಸುಲಭವಾಗಿಯೇ ಸಿಗುತ್ತಿದ್ದ ಸೋನು ನಿಗಮ್, ಬರ ಬರುತ್ತ ದುಬಾರಿಯಾಗಿದ್ದು ನಿಜ. ಸೋನು ಅವರನ್ನು ದುಬಾರಿ ಸಿಂಗರ್ ಮಾಡಿದ ಕೀರ್ತಿ ಕೂಡ ಕನ್ನಡಿಗರಿಗೇ ಸೇರಬೇಕು ಬಿಡಿ. ಕನ್ನಡ ಸಿನಿಮಾ ಹಾಡು ಅಂದರೆ ಸೋನುಗೆ ಎಲ್ಲಿಲ್ಲದ ಖುಷಿ. ಕಾರಣ, ಸಿನಿಮಾದಲ್ಲಿ ಒಂದು ಹಾಡಿದ್ದರೆ, ಅದು ಹಿಟ್ ಅಂತಾನೇ ಲೆಕ್ಕ. ಅಷ್ಟರಮಟ್ಟಿಗೆ ಸೋನು ಅಂದರೆ ಮೆಲೋಡಿಗೆ ಫಿಕ್ಸ್. ಎಲ್ಲೋ ಅಲ್ಲೊಂದು ಇಲ್ಲೊಂದು ಫೀಲಿಂಗ್ ಸಾಂಗ್ ಹಾಡಿದ್ದಾರೆ. ಅಲ್ಲೂ ಗುಡ್ ಸಿಂಗರ್ ಆಗಿದ್ದಾರೆ ಕೂಡ.

ಸೋನು ಅವರ ಹಾಡುಗಳ ಬತ್ತಳಿಕೆಯಲ್ಲಿ ಕನ್ನಡ ಹಾಡುಗಳ ಗುಚ್ಛವೇ ಹೆಚ್ಚು. ಕನ್ನಡ ಸಾಂಗ್ ಅವರನ್ನು ಮತ್ತಷ್ಟು ಬಿಝಿ ಸಿಂಗರ್ ಮಾಡಿದಂತೂ ಸುಳ್ಳಲ್ಲ. ಸೋನು ನಿಗಮ್ ಇತ್ತೀಚೆಗೆ ಕನ್ನಡದಲ್ಲಿ ಹಾಡುವುದನ್ನು ಕಡಿಮೆ ಮಾಡಿಬಿಟ್ಟರು ಎಂಬ ಮಾತಿತ್ತು. ಅವರು ಕಡಿಮೆ ಮಾಡಲಿಲ್ಲ. ಅವರು ಹಾಡೋಕೆ ರೆಡಿ. ಆದರೆ, ಅವರನ್ನು ಸಂಪರ್ಕಿಸಿ ಹಾಡಿಸಿಕೊಳ್ಳುವ ಮೇಕರ್ಸ್ ಕಡಿಮೆಯಾದರು. ಕಾರಣ, ದುಬಾರಿ ಅನ್ನೋದು. ಆದರೆ, ಸೋನು ಹೇಳಿದ ಸಂದರ್ಶನವೊಂದರಲ್ಲಿ ಹಾಡು, ಸಂಗೀತ ಇಷ್ಟವಾದರೆ, ಹಣ ಮುಖ್ಯ ಆಗಲ್ಲ ಅಂದಿದ್ದರು. ಆ ಹೇಳಿಕೆಗೆ ಅವರು ಬದ್ಧ ಕೂಡ. ಇರಲಿ, ಯಾವ ಭಾಷಿಗರಾದರೇನು, ಅವರ ಪ್ರತಿಭೆಗೆ ಜೈ ಎನ್ನಲೇಬೇಕು.

ಸೋನು ನಿಗಮ್ ಸಾವಿರಾರು ಹಾಡು ಹಾಡಿರಬಹುದು. ಆದರೆ, ಅವರಿಗೂ ಎಲ್ಲೋ ಒಂದು ಕಡೆ ಒಂದೊಳ್ಳೆಯ ಹಾಡು ಹೇಳುವುದು ಮಿಸ್ ಆಯ್ತು ಅನ್ನೋ ಫೀಲ್ ಇದ್ದೇ ಇದೆ. ಅಂಥದ್ದೊಂದು ಬೇಸರವನ್ನು ಸೋನು ನಿಗಮ್ ಹೊರಹಾಕಿದ್ದಾರೆ. ಇತ್ತೀಚೆಗೆ ಸದ್ದು ಮಾಡಿರುವ, ಮಾಡುತ್ತಿರುವ ಮಾಯಾವಿ ಹಾಡಿನ ಕುರಿತ ಸಂದರ್ಶನವೊಂದರಲ್ಲಿ ಸಲೀಂ ಮರ್ಚಂಟ್ ಜೊತೆ ಸೋನು ಈ ಬೇಸರ ಹೊರಹಾಕಿದ್ದಾರೆ. ಸಂದರ್ಶನದಲ್ಲಿ ಸಲೀಂ ಮರ್ಚಂಟ್, ಆ ಹಾಡು ನನಗೆ ಇಷ್ಟ. ಆದರೆ, ಹಾಡೋದು ಮಿಸ್ ಆಯ್ತು. ಪದೇ ಪದೇ ಗುನುಗುವ ಹಾಡು ಇದ್ದರೆ ಯಾವುದು ಎಂದು ಪ್ರಶ್ನಿಸಿದ್ದಾರೆ.

ಸೋನು ಸೂಪರ್ ಹಿಟ್ ಹಾಡಿಗೆ ಧ್ವನಿಯಾದವರು. ಮಾಯಾವಿ ಮೂಲಕ ಮತ್ತೆ ಸುದ್ದಿಯಾದವರು. ಅವರಿಗೂ ಒಂದು ಹಾಡು ಹೇಳೋಕ್ಕಾಗಿಲ್ಲ ಎಂಬ ಬೇಸರವಿದೆ. ಅದನ್ನು ಅವರೇ ಹೇಳಿದ್ದು ಹೀಗೆ. ಹಾಗೆ ನೋಡಿದರೆ, ಬಹಳಷ್ಟು ಹಾಡುಗಳು ಇವೆ. ಆದರೆ, ಒಂದು ಹಾಡಿನ ಮೇಲಂತೂ ವಿಶೇಷ ಪ್ರೀತಿ, ಒಲವಿತ್ತು. ಆ ಹಾಡು ಬೇರಾವುದೂ ಅಲ್ಲ, ಅದು ‘ಖುದಾ ಜಾನೆ.. ಎಂಬ ಹಾಡು. ಇದು ನನ್ನ ಅತ್ಯಂತ ಫೇವರಿಟ್ ಸಾಂಗ್. ಆ ಹಾಡು ಹೇಳಲು ನನಗೆ ಆಗಲಿಲ್ಲ. ಹಾಡಲು ಸಿಕ್ಕಿದ್ದರೆ ನಿಜಕ್ಕೂ ಖುಷಿಯಾಗುತ್ತಿತ್ತು. ಆದರೆ, ನಾನು ಹಾಡಬೇಕಿದ್ದ ಹಾಡನ್ನು ಗಾಯಕ ಕೆಕೆ ಹಾಡಿದ್ದಾರೆ. ನಿಜಕ್ಕೂ ಅವರು ನನಗಿಂತಲೂ ಚೆನ್ನಾಗಿ ಹಾಡಿದ್ದಾರೆ. ಅವರ ಧ್ವನಿ ಇದ್ದುದರಿಮದ ಆ ಹಾಡು ಉತ್ತಮವಾಗಿ ಮೂಡಿಬಂದಿದೆ ಎಂದಿದ್ದಾರೆ.

ಅದು ಬಚನಾ ಯೇ ಹಸೀ ಸಿನಿಮಾದ ಹಾಡು. ರಣಬೀರ್ ಕಪೂರ್ ಮತ್ತು ದೀಪಿಕಾ ಪಡುಕೋಣೆ ನಟಿಸಿರುವ ಸಿನಿಮಾ ಅದು. ಆ ಹಾಡನ್ನು ಕೆಕೆ ಹಾಡಿದ್ದಾರೆ. ಸೂಪರ್ ಹಿಟ್ ಸಾಂಗ್ ಅದು. ಬಟ್ ಕೆಕೆ ಇಂದು ಇಲ್ಲ ಎಂಬ ಬೇಸರ ಹೊರ ಹಾಕಿರುವ ಸೋನು, ಆ ಹಾಡು ಹಾಡಬೇಕಿತ್ತು. ಆಗಲಿಲ್ಲ ಎಂಬ ಬೇಸರ ಹೊರಹಾಕಿದ್ದಾರೆ.

- Advertisement -

Latest Posts

Don't Miss