Wednesday, December 11, 2024

Latest Posts

30ನೇ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಬೇಕಿದ್ದ ರೆಹಮಾನ್-ಸೈರಾಬಾನು ಡಿವೋರ್ಸ್ ತೆಗೆದುಕೊಂಡಿದ್ದೇಕೆ..?

- Advertisement -

Bollywood News: ಸಂಗೀತ ನಿರ್ದೇಶಕ ಎ.ಆರ್.ರೆಹಮಾಾನ್ ಮತ್ತು ಸೈರಾಬಾನು ತಮ್ಮ 29 ವರ್ಷದ ವೈವಾಹಿಕ ಜೀವನವನ್ನು ಅಂತ್ಯಗೊಳಿಸಿದ್ದು, ಪರಸ್ಪರ ಒಪ್ಪಿಗೆಯ ಮೇರೆಗೆ ಡಿವೋರ್ಸ್ ಪಡೆದಿದ್ದಾರೆ.

ಇನ್ನು ಕೆಲವೇ ದಿನಗಳಲ್ಲಿ ಇವರಿಬ್ಬರು ತಮ್ಮ 30ನೇ ವರ್ಷದ ವೆಡ್ಡಿಂಗ್ ಆ್ಯನಿವರ್ಸರಿ ಆಚರಿಸಿಕೊಳ್ಳಬೇಕಿತ್ತು. ಆದರೆ ಇಂದು ಎ.ಆರ್.ರೆಹಮಾನ್ ತಮ್ಮ ಪತ್ನಿಯೊಂದಿಗೆ ವಿಚ್ಛೇದನ ತೆಗೆದುಕೊಳ್ಳುತ್ತಿರುವ ಸಂಗತಿ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ. ಇವರ ಈ ನಿರ್ಧಾರದಿಂದ ಇವರ ಅಭಿಮಾನಿಗಳಿಗೆ ಬೇಸರವಾಗಿದ್ದಲ್ಲೇ, ಈ ಸುದ್ದಿ ನಿಜಕ್ಕೂ ಶಾಕಿಂಗ್ ಎನ್ನಿಸಿದೆ.

ಆದರೆ 29 ವರ್ಷಗಳ ಕಾಲ ಸಂಸಾರ ನಡೆಸಿ, ಮೂವರು ಮಕ್ಕಳಿದ್ದು, ಇದೀಗ ಯಾಕೆ ಇವರಿಬ್ಬರು ಡಿವೋರ್ಸ್ ಪಡೆದಿದ್ದಾರೆ ಎಂಬ ಪ್ರಶ್ನೆಗೆ ಉತ್ತರ. ಒಬ್ಬರಿಗೊಬ್ಬರು ಸರಿಯಾಗಿ ಸಮಯ ನೀಡಲಾಗುತ್ತಿಲ್ಲ ಎಂಬ ಕಾರಣಕ್ಕಾಗಿ. ಸಂಬಂಧದಲ್ಲಿ ಭಾವನಾತ್ಮಕ ಒತ್ತಡದಿಂದಾಗಿ ಡಿವೋರ್ಸ್ ಪಡೆಯುತ್ತಿದ್ದೇವೆ ಎಂದು ಸೈರಾಬಾನು ಹೇಳಿದ್ದಾರೆ.

ಇನ್ನು ಈ ಬಗ್ಗೆ ತಿಳಿಸಿರುವ ರೆಹಮಾನ್, ‘ನಾವು ಇನ್ನೇನು 30 ವರ್ಷಗಳ ದಾಂಪತ್ಯಕ್ಕೆ ಕಾಲಿಡಬೇಕಿತ್ತು. ಆದರೆ, ಯಾರೂ ಊಹಿಸದ ಅಂತ್ಯ ಸಿಕ್ಕಿದೆ. ಮುರಿದ ಹೃದಯಗಳ ಭಾರಕ್ಕೆ ದೇವರ ಸಿಂಹಾಸನವೂ ನಡುಗಬಹುದು. ಆದರೂ, ಈ ಚೂರಾದ ಸಂಬಂಧದಲ್ಲೂ ನಾವು ಅರ್ಥವನ್ನು ಹುಡುಕುತ್ತೇವೆ. ಒಡೆದ ತುಣುಕುಗಳು ಮತ್ತೆ ಎಂದಿಗೂ ಒಂದಾಗಲಾರದು. ನಮ್ಮ ಖಾಸಗಿತನ ಗೌರವಿಸಿದ ಗೆಳೆಯರಿಗೆ ಧನ್ಯವಾದ’ ಎಂದಿದ್ದಾರೆ.

ಇನ್ನು ಹಿಂದೂವಾಗಿ ಹುಟ್ಟಿದ್ದ ರೆಹಮಾನ್‌ರನ್ನು ಮುಸ್ಲಿಂ ಮತದವರಾದ ಅವರ ತಂದೆ ತಾಯಿ ದತ್ತು ಪಡೆದಿದ್ದರು. ಈ ಕಾರಣಕ್ಕಾಗಿ ರೆಹಮಾನ್ ಮುಸ್ಲಿಂ ಆಗಿ ಮತಾಂತರಗೊಂಡಿದ್ದರು. ಅಲ್ಲದೇ, ತಂದೆ ತಾಯಿ ನೋಡಿದ್ದ ಹುಡುಗಿಯಾದ ಸೈರಾ ಬಾನು ಅವರನ್ನು ವಿವಾಹವಾಗಿದ್ದರು. ಇಲ್ಲಿಯವರೆಗೂ ಅವರಿಬ್ಬರು ಪರಸ್ಪರ ಗೌರವಿಸಿ, ಬೆಂಬಲಿಸಿಕೊಂಡು ಬಂದ ಕಾರಣ, ಇಂಥದ್ದೊಂದು ಸುದ್ದಿ ಬರಬಹುದು ಎಂದು ಯಾರೂ ಊಹಿಸಿಯೂ ಇರಲಿಲ್ಲ.

- Advertisement -

Latest Posts

Don't Miss