Thursday, April 17, 2025

Latest Posts

ಎಂ.ಬಿ ಪಾಟೀಲ್ ಮೊಬೈಲ್ ಮಿಸ್ಸಿಂಗ್..! ಅಷ್ಟಕ್ಕೂ ಆಗಿದ್ದೇನು..?

- Advertisement -

political News

ಬೆಂಗಳೂರು(ಫೆ.11): ಈಗಾಗಲೇ ಚುನಾವಣೆ ಹತ್ತಿರ ಬರುತ್ತಿರುವ ಹಿನ್ನಲೆಯಲ್ಲಿ ಪಕ್ಷಗಳು ತಮ್ಮ ತಮ್ಮ ಪಕ್ಷದ ಬಗ್ಗೆ ಹಲವಾರು ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದು, ಚುನಾವಣೆಯಲ್ಲಿ ಗೆಲುವು ಸಾಧಿಸಲು ಯಾತ್ರೆಗಳನ್ನು ಕೈಗೊಳ್ಳುತ್ತಿವೆ. ಕಾಂಗ್ರಸ್ ಪಕ್ಷ ಕೂಡ ಪ್ರಜಾಧ್ವನಿ ಯಾತ್ರೆಯ ಮೂಲಕ ಜನರನ್ನು ತಲುಪಲು ಮುಂದಾಗಿದೆ.

ಇದೀಗ ಕಾಂಗ್ರೆಸ್ ಪಕ್ಷ ಯಾದಗಿರಿಯಲ್ಲಿ ಪ್ರಜಾಧ್ವನಿ  ಯಾತ್ರೆ ನಡೆಸುತ್ತಿದ್ದು, ಸಮಾವೇಶದಲ್ಲಿ ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ್ ಅವರು ತಮ್ಮ ಮೊಬೈಲ್ ಫೊನ್ ಕಳೆದುಕೊಂಡ ಘಟನೆ ನಡೆದಿದೆ. ಯಾತ್ರೆಯ ವೇಳೆ ತಮ್ಮ ಮೊಬೈಲ್ ಜೇಬಿನಲ್ಲಿ ಇಟ್ಟುಕೊಂಡಿದ್ದರು, ಹೀಗೆ, ಯಾತ್ರೆಯ ವೇಳೆ ಮೊಬೈಲ್ ಜೋಬಿನಿಂದ ಬಿದ್ದಿದ್ದು, ಪಕ್ಷದ ಕಾರ್ಯಕರ್ತರು ಹುಡುಕಾಡಿದರೂ ಮೊಬೈಲ್ ಸಿಗಲಿಲ್ಲ, ಹೀಗಾಗಿ ತಮ್ಮ ಫೋನ್ ಕಳೆದುಕೊಂಡಿರುವ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತ ಪಾಟೀಲರು, ಮೈಕ್ ಅನೌನ್ಸ್​ಮೆಂಟ್ ಮಾಡಿದ್ದಾರೆ. ಯಾರಿಗಾದರೂ ಮೊಬೈಲ್ ಸಿಕ್ಕರೆ ಕೂಡಲೇ ತಲುಪಿಸಿ. ಅದರಲ್ಲಿ ನೀರಾವರಿ ಇಲಾಖೆ, ಕೆಪಿಸಿಸಿಗೆ ಸಂಬಂಧಿಸಿದ ದಾಖಲೆಗಳಿವೆ, ದಯವಿಟ್ಟು ಕೂಡಲೇ ಮೊಬೈಲ್ ತಲುಪಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.

- Advertisement -

Latest Posts

Don't Miss