Saturday, October 19, 2024

Latest Posts

ಸಣ್ಣ ಪುಟ್ಟ ತಲೆನೋವಿಗೆ ಇಲ್ಲಿದೆ ನೋಡಿ ಮನೆ ಮದ್ದು..!

- Advertisement -

ಕೆಲಸದ ಒತ್ತಡದಿಂದ ಕೆಲವರಿಗೆ ಪದೇ ಪದೇ ತಲೆನೋವು ಉಂಟಾಗುತ್ತದೆ. ಸಣ್ಣ ಪುಟ್ಟ ತಲೆನೋವಿಗೆ ಪದೇ ಪದೇ ಮಾತ್ರೆಯೂ ತೆಗೆದುಕೊಳ್ಳಬಾರದು. ಹಾಗಾದ್ರೆ ತಲೆನೋವಿಗೆ ಯಾವ ರೀತಿ ಪರಿಹಾರ ಕಂಡುಕೊಳ್ಳಬಹುದು ಅನ್ನೋದನ್ನ ನೋಡೋಣ ಬನ್ನಿ.

1.. ನಿದ್ದೆ ಕಡಿಮೆ ಮಾಡುವುದರಿಂದ ತಲೆ ನೋವು ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ದಿನಕ್ಕೆ 8 ಗಂಟೆಗಳ ಕಾಲ ನಿದ್ದೆ ಮಾಡಿ. ರಾತ್ರಿ ಸರಿಯಾಗಿ ನಿದ್ದೆ ಬರದಿದ್ದರೆ, ಬಿಸಿ ಹಾಲಿಗೆ ಕೊಂಚ ಅರಿಶಿನ ಮತ್ತು ಕೊಂಚ ತುಪ್ಪ ಹಾಕಿ ಕುಡಿಯಿರಿ.

2.. ಕೂದಲಿಗೆ ಸರಿಯಾಗಿ ಎಣ್ಣೆ ಹಾಕದಿದ್ದಾಗಲೂ ತಲೆ ನೋವಾಗುವ ಸಾಧ್ಯತೆ ಇರುತ್ತದೆ. ಹಾಗಾಗಿ ರಾತ್ರಿ ಮಲಗುವಾಗ ಎಣ್ಣೆಯನ್ನ ಡಬಲ್ ಬಾಯ್ಲಿಂಗ್ ಪ್ರೊಸೆಸ್ ಮೂಲಕ ಕಾಯಿಸಿ, ಚೆನ್ನಾಗಿ ಹೆಡ್ ಮಸಾಜ್ ಮಾಡಿ ಮಲಗಿ.

https://youtu.be/qYCxsgZsTqI

3.. ಕೆಲವರಿಗೆ ಟೀ ಕಾಫಿ ಸೇವನೆ ಮಾಡದಿದ್ದಲ್ಲಿ ತಲೆನೋವು ಬರುತ್ತದೆ. ಅಂಥವರು ಶುಂಠಿ ಟೀ ಮಾಡಿ ಕುಡಿದರೆ ತಲೆನೋವು ಮಾಯವಾಗುತ್ತದೆ.

4.. ತಲೆ ನೋವಾದಾಗ ಮೊದಲು ಒಂದು ಗ್ಲಾಸ್ ಬಿಸಿ ಬಿಸಿ ನೀರನ್ನ ಕುಡಿಯಿರಿ.

5.. ಹೆಚ್ಚು ಹೊತ್ತು ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವುದರಿಂದಲೂ ತಲೆ ನೋವು ಕಾಣಿಸಿಕೊಳ್ಳುತ್ತದೆ. ಹಾಗಾಗಿ ಕೆಲಸ ಮಾಡುವಾಗ ಅರ್ಧ ಗಂಟೆಗೊಮ್ಮೆ 5 ನಿಮಿಷ ವಿಶ್ರಾಂತಿ ಪಡೆಯಿರಿ.

https://youtu.be/NQ8w-fqSGrI

6.. ಕೊಬ್ಬರಿ ಎಣ್ಣೆಗೆ ಲವಂಗದ ಎಣ್ಣೆ ಮಿಕ್ಸ್ ಮಾಡಿ ಹಣೆಗೆ ಮಸಾಜ್‌ ಮಾಡಿಕೊಳ್ಳುವುದರಿಂದ ತಲೆನೋವು ಕಡಿಮೆಯಾಗುತ್ತದೆ.

7.. ಕೆಲವೊಮ್ಮೆ ಜೀರ್ಣಕ್ರಿಯೆ ಸಮಸ್ಯೆ ಇರುವುದರಿಂದಲೂ ತಲೆ ನೋವು ಸಂಭವಿಸುವ ಸಾಧ್ಯತೆ ಇರುತ್ತದೆ. ಈ ವೇಳೆ ನಿಯಮಿತವಾಗಿ ಬಿಸಿ ನೀರಿನ ಸೇವನೆ ಮಾಡಿ.

8.. ನಿಯಮಿತವಾಗಿ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ತಲೆ ನೋವು ಕಡಿಮೆಯಾಗುತ್ತದೆ.

9.. ಜಾಯಿಕಾಯಿಯನ್ನು ತೆಯ್ದು ಪೇಸ್ಟ್ ಮಾಡಿ ಹಣೆ ಹಚ್ಚುವುದರಿಂದ ತಲೆನೋವು ಗುಣುಖವಾಗುತ್ತದೆ.

10.. ಏನೇ ಮನೆ ಮದ್ದು ಮಾಡಿದರೂ ತಲೆ ನೋವು ಕಡಿಮೆಯಾಗುತ್ತಿಲ್ಲ ಎಂದಾದಲ್ಲಿ ತಪ್ಪದೇ ವೈದ್ಯರ ಬಳಿ ತೋರಿಸಿ.

- Advertisement -

Latest Posts

Don't Miss