Thursday, November 21, 2024

Latest Posts

World cup : ವಿಶ್ವಕಪ್ ಗೆಲುವಿಗೆ ಈ ಕನ್ನಡಿಗನೂ ಕಾರಣ!

- Advertisement -

ಭಾರತ 17 ವರ್ಷಗಳ ನಂತರ ಟಿ-20 ವಿಶ್ವಕಪ್ ಗೆದ್ದಿದೆ. ಈ ಮೂಲಕ ಕೋಟ್ಯಾಂತರ ಭಾರತೀಯರ ಕನಸು ಹಾಗೂ ಪ್ರಾರ್ಥನೆ ಈಡೇರಿದೆ. 13 ವರ್ಷಗಳಿಂದ ಅನುಭವಿಸುತ್ತಿದ್ದ ವಿಶ್ವಕಪ್ ಬರವನ್ನು ಭಾರತ ತಂಡ ನೀಗಿಸಿದೆ. ಜೂನ್ 29ರಂದು ನಡೆದ ದ.ಆಫ್ರಿಕಾ ವಿರುದ್ಧದ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ 7ರನ್‌ಗಳ ಅಂತರದಲ್ಲಿ ಗೆಲ್ಲುವುದರ ಮೂಲಕ ವಿಶ್ವಕಪ್ ಕಿರೀಟ ಮುಡಿಗೇರಿಸಿಕೊಂಡಿದೆ.

ಈ ಐತಿಹಾಸಿಕ ಗೆಲುವಿಗೆ ಭಾರತ ತಂಡದ ಆಟಗಾರರು ಎಷ್ಟು ಮುಖ್ಯವೋ, ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಸೇರಿದಂತೆ ಇಡೀ ತಂಡದ ಸಿಬ್ಬಂದಿ ವರ್ಗದ ಪಾತ್ರವೂ ಅಷ್ಟೇ ಮುಖ್ಯ. ಕ್ರಿಕೆಟ್ ಅಂಗಳದ ತೆರೆ ಮುಂದಿನ ಹೀರೋಗಳನ್ನು ಅಂದರೆ ಆಟಗಾರರ ಪ್ರದರ್ಶನವನ್ನು ನೋಡಿ ಎಂಜಾಯ್ ಮಾಡುತ್ತೇವೆ. ಆದರೆ ತೆರೆಯ ಹಿಂದೆ ಅದೇಷ್ಟೋ ಪ್ರತಿಭೆಗಳು ತಂಡದ ಯಶಸ್ಸಿಗಾಗಿ ತಮ್ಮ ಬೆವರು ಹರಿಸಿರುತ್ತಾರೆ. ಇದೀಗ ಭಾರತ ತಂಡ ಸಾಧಿಸಿದ ಅದ್ಭುತ ಯಶಸ್ಸು ಹಾಗೂ ಕೀರ್ತಿಯಲ್ಲಿ ತೆರೆ ಮರೆಯಲ್ಲಿ ಶ್ರಮಿಸಿದ ಕನ್ನಡಿಗನೊಬ್ಬನ ಪಾತ್ರ ಕೂಡ ಅಷ್ಟೇ ಮುಖ್ಯವಾಗಿದೆ.

ಆತನಿಗೆ ಕ್ರಿಕೆಟ್ ಆಟಗಾರನಾಗಬೇಕೆಂಬ ಆಸೆ ಎಷ್ಟರ ಮಟ್ಟಿಗೆ ಇತ್ತೆಂದರೆ, ಕಿರಿಯ ವಯಸ್ಸಿನಲ್ಲಿಯೇ ಅಂದರೆ ಸರಿಸುಮಾರು 24ವರ್ಷಗಳ ಹಿಂದೆಯೇ ಆತ ಮನೆ ಬಿಟ್ಟು ಬಂದಿದ್ದ. ಆ ಹುಡುಗ ಕ್ರಿಕೆಟ್ ಆಟಗಾರನಾಗಬೇಕೆಂಬ ಕನಸು ಕಂಡವ. ಆದರೆ ಆತನ ಕೈ ಮುರಿಯಿತು. ಕ್ರಿಕೆಟ್ ಕನಸು ಕೂಡ ಕಮರಿತು. ಆದರೆ ಆತ ತನ್ನ ಛಲ ಬಿಡಲಿಲ್ಲ. ಅದೇ ಕನಸನ್ನು ಬೇರೆ ರೀತಿಯಲ್ಲಿ ಹಿಂಬಾಲಿಸಿ ಹೊರಟವನು ಇಂದು ಭಾರತದ ಟಿ20 ವಿಶ್ವಕಪ್ ವಿಜಯದ ರೂವಾರಿಗಳಲ್ಲೊಬ್ಬನಾಗಿ ನಿಂತಿದ್ದಾನೆ. ಆತನೇ ಭಾರತ ಕ್ರಿಕೆಟ್ ತಂಡದ ತ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ದಿವಗಿ.

ಕ್ರಿಕೆಟ್ ಆಡಲೆಂದು ಕೇವಲ 21 ರೂಪಾಯಿಗಳೊಂದಿಗೆ ಮನೆ ಬಿಟ್ಟಿದ್ದ ಹುಡುಗನ ಆ ಪ್ರಯಾಣ, ಇಂದು ಭಾರತದ ವಿಶ್ವಕಪ್ ಗೆಲುವಿನಲ್ಲಿ ನಿರ್ಣಾಯಕ ಪಾತ್ರ ವಹಿಸುವವರೆಗೆ ಬಂದು ತಲುಪಿದೆ ಎಂದರೆ ಇದು ರೋಚಕ ಸಂಗತಿಯೇ ಸರಿ.

- Advertisement -

Latest Posts

Don't Miss