ವೀಕೆಂಡ್ ಕರ್ಫ್ಯೂನಲ್ಲೂ ಕಾಂಗ್ರೆಸ್ ನಾಯಕರು ಮೇಕೆದಾಟು ಹೋರಾಟಕ್ಕೆ ಜನವರಿ 9 ರಂದು ಹೊರಟಿದ್ದಾರೆ. ಈ ಹೋರಾಟಕ್ಕೆ ಸಂಭoದಿಸಿದoತೆ ಕನಕಪುರದಲ್ಲಿ ಕಾಂಗ್ರೆಸ್ ನಾಯಕರು ಚರ್ಚೆ ಮಾಡಿದ್ದಾರೆ. ಸುದ್ದಿಗೋಷ್ಠಿಯ ಬಳಿಕ ಮಾತನಾಡಿದ ಡಿಕೆ ಶಿವಕುಮಾರ್. ಮೇಕೆದಾಟು ಹೋರಾಟಕ್ಕೆ ಸಂಭoದಿಸಿದoತೆ 120 ನಾಯಕರುಗಳು ಸುದೀರ್ಘವಾಗಿ ಚರ್ಚೆ ಮಾಡಿದ್ದೇವೆ.
ಬಿಜೆಪಿ ಈ ಹೋರಾಟ ನಿಲ್ಲಿಸಲು ಸರ್ಕಾರ ತೆಗೆದುಕೊಂಡ ಕ್ರಮದ ಬಗ್ಗೆ ಮಾತನಾಡಿದ್ದೇನೆ, ಸರ್ಕಾರ ನೈಟ್‌ಕರ್ಫ್ಯೂ ವೀಕೆಂಡ್ ಕರ್ಫ್ಯೂ
ಏರಿ ಎಲ್ಲಾ ಜನರಿಗೂ ತೊಂದರೆ ಕೊಟ್ಟಿದೆ.
ನಮ್ಮ ಜಿಲ್ಲೆಯಲ್ಲಿ ಒಂದು ಸಾವು ಇಲ್ಲ, ಒಬ್ಬ ಐಸಿಯು ರೋಗಿಯೂ ಇಲ್ಲ ಈಗಾಗಿ ನಾವು
ಹೋರಾಟದಲ್ಲಿ ಮುಂಜಾಗೃತ ಕ್ರಮವನ್ನು ವಹಿಸುತ್ತೇವೆ. ಈಗಾಗಲೇ ಹೋರಾಟಕ್ಕೆ ಸಂಭoದಿಸಿದoತೆ 100 ವೈದ್ಯರು ಕಾರ್ಯ ನಿರ್ವಹಿಸಲಿದ್ದಾರೆ. ಜೊತೆಗೆ ಒಂದು ಲಕ್ಷ ಮಾಸ್ಕ್ ಗಳನ್ನು ಒದಗಿಸಿದ್ದೇವೆ. 1500 ಕಾರ್ಯಕರ್ತರಿಗೆ ಊಟ ವಸತಿ ವ್ಯವಸ್ಥೆಯನ್ನು ಮಾಡಲಾಗಿದೆ. ಇನ್ನು 8.30 ಕ್ಕೆ ಹೋರಾಟ ಶುರುವಾಗಲಿದೆ. ಹಾಗಾಗಿ ಅಚಲ ಮನಸ್ಸಿನಿಂದ ಹೋರಾಡಬೇಕಾಗಿದೆ. ಎಂದಿದ್ದಾರೆ.