Health Tips: ಜಾಯಿಂಡೀಸ್ ಅಥವಾ ಕಾಮಾಲೆ ರೋಗ ಅನ್ನೋದು ಕಾಮನ್. ಆದರೆ, ಇದು ಜೀವಕ್ಕೆ ಯಾವ ಮಟ್ಟಿಗೆ ಹಾನಿ ಮಾಡುತ್ತದೆ ಎಂದರೆ, ಕೆಲವೊಮ್ಮೆ ಜೀವವೇ ಹೋಗಿಬಿಡಬಹುದು. ಎಚ್ಚರಿಕೆ ತೆಗೆದುಕೊಳ್ಳದೇ, ನಿರ್ಲಕ್ಷಿಸಿ, ಎಷ್ಟೋ ಜನ ಕಾಮಾಲೆಗೆ ಬಲಿಯಾಗಿರುವ ಕೇಸ್‌ಗಳಿದೆ. ಹಾಗಾಗಿ ಕಾಮಾಲೆ ರೋಗ ಬಂದಾಗ, ಅದನ್ನು ಯಾವುದೇ ಕಾರಣಕ್ಕೂ ನಿರ್ಲಕ್ಷಿಸಬೇಡಿ.
ಇನ್ನು ಕಾಮಾಲೆ ರೋಗ ಯಾಕೆ ಬರತ್ತೆ ಅಂದ್ರೆ, ನಾವು ನಮ್ಮ ಲಿವರ್ ಆರೋಗ್ಯವನ್ನು ನಿರ್ಲಕ್ಷಿಸಿರುತ್ತೇವೆ. ಹಾಗಾಗಿ ಕಾಮಾಲೆ ರೋಗ ಸೇರಿ ಹಲವು ರೋಗಗಳು ಬರುತ್ತದೆ. ನಮ್ಮ ಲಿವರ್ ಸರಿಯಾಗಿ ಇರಬೇಕು ಅಂದ್ರೆ ನಾವು ಹೆಚ್ಚು ನೀರು ಕುಡಿಯಬೇಕು. ನಾರಿನಂಶ ಇರುವ ಪದಾರ್ಥಗಳ ಸೇವನೆ ಮಾಡಬೇಕು. ಪ್ರತಿದಿನ ತಿಂದ ಆಹಾರ ಸರಿಯಾಗಿ ಜೀರ್ಣವಾಗಿ, ಮಲವಿಸರ್ಜನೆಯಾಗಬೇಕು. ಹೀಗಾದಾಗ ಮಾತ್ರ ನಮ್ಮ ಲಿವರ್ ಆರೋಗ್ಯವಾಗಿರುತ್ತದೆ. ಆಗ ನಮಗೆ ಯಾವುದೇ ಕೆಟ್ಟ ಖಾಯಿಲೆ ಬರುವ ಭಯವಿರುವುದಿಲ್ಲ.
ಅಷ್ಟೇ ಅಲ್ಲದೇ, ಪದೇ ಪದೇ ಹೊಟೇಲ್‌ಗೆ ಹೋಗಿ, ಆಹಾರ ಸೇವನೆ ಮಾಡುವುದು. ಬೀದಿಬದಿ ಆಹಾರ ಸೇವನೆ ಮಾಡುವುದು, ಇತ್ಯಾದಿಗಳು ನಮ್ಮ ಆರೋಗ್ಯ ಹಾಳಾಗುವುದಕ್ಕೆ ಕಾರಣವಾಗುತ್ತದೆ. ಹಾಗಾಗಿ ಆದಷ್ಟು ಆರೋಗ್ಯಕರವಾದ, ಫ್ರೆಶ್ ಆಗಿರುವ ಮನೆಯೂಟ ಸೇವಿಸುವುದು ತುಂಬಾ ಮುಖ್ಯವಾಗಿದೆ.
ಇನ್ನು ಟೀ ಕಾಫಿ ಅಗತ್ಯಕ್ಕಿಂತ ಹೆಚ್ಚು ಬಾರಿ ಸೇವನೆ ಮಾಡಿದಾಗಲೂ ಲಿವರ್ ಡ್ಯಾಮೇಜ್ ಆಗುತ್ತದೆ. ಹಾಗಾಗಿ ದಿನಕ್ಕೆ ಒಮ್ಮೆ ಅಥವಾ ಎರಡು ಬಾರಿ ಮಾತ್ರ ಟೀ ಕಾಫಿ ಸೇವನೆ ಮಾಡಬಹುದು. ಅದರಲ್ಲೂ ತುಂಬಿದ ಹೊಟ್ಟೆಯಲ್ಲಿ ಈ ಎರಡೂ ಪೇಯವನ್ನು ಕುಡಿಯಬಹುದು. ಖಾಲಿ ಹೊಟ್ಟೆಯಲ್ಲಿ ಟೀ ಕಾಫಿ ಕುಡಿದರೆ, ಆರೋಗ್ಯ ಇನ್ನಷ್ಟು ಬಿಗಡಾಯಿಸುತ್ತದೆ. ಹಾಗಾದ್ರೆ ಕಾಮಾಲೆ ರೋಗಕ್ಕೂ, ಲೀವರ್ ಆರೋಗ್ಯಕ್ಕೂ, ಪುರುಷರ ಆರೋಗ್ಯಕ್ಕೂ ಏನು ಸಂಬಂಧ..? ಈ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಾರಂಪರಿಕ ವೈದ್ಯೆ ಪವಿತ್ರಾ ಅವರೇ ಹೇಳಿದ್ದಾರೆ. ವೀಡಿಯೋ ನೋಡಿ.