Thursday, November 21, 2024

Latest Posts

ಮಹಿಳೆಯರು ಈ ವಿಚಾರದಲ್ಲಿ ಪುರುಷರಿಗಿಂತ ಮೇಲು ಅಂತಾರೆ ಚಾಣಕ್ಯರು

- Advertisement -

Spiritual: ಚಾಣಕ್ಯರು ತಮ್ಮ ನೀತಿಯಲ್ಲಿ ಜೀವನ ನಿಭಾಯಿಸುವ ರೀತಿ, ಶ್ರೀಮಂತರಾಗುವ ರೀತಿ, ಶ್ರೀಮಂತಿಕೆ ಉಳಿಸಿಕೊಳ್ಳುವ ರೀತಿ, ವಿವಾಹವಾಗಲು ಅನುಸರಿಸಬೇಕಾದ ಕ್ರಮ ಎಲ್ಲದರ ಬಗ್ಗೆಯೂ ಹೇಳಿದ್ದಾರೆ. ಅದೇ ರೀತಿ ಪುರುಷರು ಯಾವ ವಿಚಾರದಲ್ಲಿ ಮಹಿಳೆಯರನ್ನು ಸೋಲಿಸಲು ಸಾಧ್ಯವಿಲ್ಲ ಅನ್ನೋ ಬಗ್ಗೆಯೂ ಹೇಳಿದ್ದಾರೆ. ಅದು ಯಾವ ವಿಚಾರ ಅಂತಾ ತಿಳಿಯೋಣ ಬನ್ನಿ..

ಮೊದಲನೇಯ ವಿಚಾರ ಧೈರ್ಯ: ಹೆಣ್ಣು ಮಕ್ಕಳಿಗೆ ಗಂಡು ಮಕ್ಕಳಿಗಿಂತಲೂ ಹೆಚ್ಚು ಧೈರ್ಯವಿರುತ್ತದೆ. ಆದರೆ ಆ ಬಗ್ಗೆ ಸ್ವತಃ ಅವರಿಗೂ ಗೊತ್ತಿರುವುದಿಲ್ಲ. ಚಾಣಕ್ಯರ ಪ್ರಕಾರ ಮಹಿಳೆಯರಿಗೆ ಪುರುಷರಿಗಿಂತ 6 ಪಟ್ಟು ಹೆಚ್ಚು ಧೈರ್ಯವಿರುತ್ತದೆ. ಅಲ್ಲದೇ, ಮುಂದಾಲೋಚನೆಯೂ ಮಹಿಳೆಯರಿಗೆ ಇರುತ್ತದೆ. ಪತ್ನಿಯ ಮಾತು ಕೇಳಿ ಹಾಳಾದ ಪುರುಷರು ಬೆರಳೆಣಿಯಷ್ಟು ಇದ್ದರೆ, ಪತ್ನಿಯ ಮಾತು ಕೇಳದೇ, ನಷ್ಟ ಮಾಡಿಕೊಂಡ ಪುರುಷರು ಬೇಕಾದಷ್ಟು ಜನರಿದ್ದಾರೆ. ಅಲ್ಲದೇ, ಕೆಲವೊಮ್ಮೆ ಪತಿಗೆ ಕಷ್ಟ ಬಂದಾಗ, ಆ ಕಷ್ಟಕ್ಕೆ ಹೆಗಲು ಕೊಟ್ಟು, ಧೈರ್ಯದಿಂದ ಮುನ್ನಡೆದು, ಪರಿಹಾರ ಒದಗಿಸುವ ಪತ್ನಿಯರು ಹಲವರಿದ್ದಾರೆ.

ಎರಡನೇಯ ವಿಚಾರ ನಾಚಿಕೆ: ಪುರುಷರಿಗೆ ಹೋಲಿಸಿದರೆ, ಹೆಣ್ಣು ಮಕ್ಕಳಿಗೆ ನಾಚಿಕೆ ಹೆಚ್ಚು ಅನ್ನೋದು ಎಲ್ಲರಿಗೂ ಗೊತ್ತು. ಎಷ್ಟೇ ಧೈರ್ಯವಿರುವ ಮಹಿಳೆಯರು ಕೂಡ ನಾಚಿಕೊಳ್ಳುವ ಸ್ವಭಾವದವರಾಾಗಿರುತ್ತಾರೆ. ಇನ್ನು ಹೆಣ್ಣು ಮಕ್ಕಳು ಲೈಂಗಿಕತೆಯಲ್ಲಿಯೂ ಪುರುಷರನ್ನು ಮೀರಿಸುತ್ತಾರೆ ಅಂತಾರೆ ಚಾಣಕ್ಯರು.

ಮೂರನೇಯ ವಿಚಾರ ಹಸಿವು: ಪುರುಷರಿಗಿಂತ ಹೆಣ್ಣು ಮಕ್ಕಳಿಗೆ ಹಸಿವು ಹೆಚ್ಚಾಗುತ್ತದೆ. ಆದರೆ ಪುರುಷರು ಹಸಿವನ್ನು ತಡೆದುಕೊಳ್ಳುವುದಕ್ಕಿಂತಲೂ ಹೆಚ್ಚು ಹೊತ್ತು ಹೆಣ್ಣು ಮಕ್ಕಳು ಹಸಿವನ್ನು ತಡೆದಿಟ್ಟುಕೊಳ್ಳುತ್ತಾರೆ. ಇದಕ್ಕೆ ಕಾರಣವೇನೆಂದರೆ, ಹೆಣ್ಣು ಮಕ್ಕಳು ಸದಾ ಬ್ಯುಸಿಯಾಗಿರುತ್ತಾರೆ. ನಿದ್ರಿಸಲು ಮತ್ತು ವಿಶ್ರಮಿಸಲು ಕೆಲವೇ ಕೆಲವು ಗಂಟೆ ಸಾಕಾಗುತ್ತದೆ. ಹಾಾಗಾಗಿ ಮಹಿಳೆಯರಲ್ಲಿ ಹಸಿವು ತಡೆದುಕೊಳ್ಳುವ ಸಾಮರ್ಥ್ಯ ಹೆಚ್ಚಾಗಿರುತ್ತದೆ ಅಂತಾರೆ ಚಾಣಕ್ಯರು.

- Advertisement -

Latest Posts

Don't Miss