Saturday, October 19, 2024

Latest Posts

‘ಮುಟ್ಟು ಅನ್ನೋದು ಅಂಗವೈಕಲ್ಯವಲ್ಲ. ಹೆಣ್ಣು ಮಕ್ಕಳಿಗೆ ವೇತನ ಸಹಿತ ರಜೆಯ ಅಗತ್ಯವಿಲ್ಲ’

- Advertisement -

National Political News: ಕಾಂಗ್ರೆಸ್ ನಾಯಕ ಶಶಿ ತರೂರ್ ಕೆಲಸಕ್ಕೆ ಹೋಗುವ, ಮುಟ್ಟಾದ ಹೆಣ್ಣು ಮಕ್ಕಳಿಗೆ ವೇತನ ಸಹಿತ ರಜೆ ಕೊಡಬೇಕು ಎಂಬ ಹೇಳಿಕೆಗೆ, ಕೇಂದ್ರ ಸಚಿವೆ ಸ್ಮೃತಿ ಇರಾನಿ ತಿರುಗೇಟು ಕೊಟ್ಟಿದ್ದಾರೆ. ಮುಟ್ಟು ಅನ್ನೋದು ಅಂಗವೈಕಲ್ಯವಲ್ಲ. ಹೆಣ್ಣು ಮಕ್ಕಳಿಗೆ ವೇತನ ಸಹಿತ ರಜೆಯ ಅಗತ್ಯವಿಲ್ಲ ಎಂದಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಸ್ಮೃತಿ ಇರಾನಿ, ಮುಟ್ಟು ಮಹಿಳೆಯರ ಕೆಲಸಕ್ಕೆ ಎಂದಿಗೂ ಅಡ್ಡಿಯಾಗುವುದಿಲ್ಲ. ಅದು ಮಹಿಳೆಯರ ಜೀವನದ ಒಂದು ಭಾಗ ಮತ್ತು ಸಹಜ ಕ್ರಿಯೆ. ಇದಕ್ಕೆಲ್ಲ ವೇತನ ಸಹಿತ ರಜೆಯ ಅಗತ್ಯವಿಲ್ಲ ಎಂದಿದ್ದಾರೆ.

ಅಲ್ಲದೇ, ವೇತನ ಸಹಿತ ಮುಟ್ಟಿನ ರಜೆ ನೀಡಬೇಕು ಎಂದು ಎಲ್ಲಿಂದಲೂ ಸರ್ಕಾರದ ಪರಿಗಣನೆಗೆ ಬಂದಿಲ್ಲ. ಮುಟ್ಟಿನ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಯೋಜನೆಯ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಬೇಟಿ ಬಚಾವೋ, ಬೇಟಿ ಪಡಾವೋ ಯೋಜನೆಯಡಿ, ಮುಟ್ಟಿನ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸ್ಮೃತಿ ಇರಾನಿ ಹೇಳಿದ್ದಾರೆ.

‘ಹಿಂದಿನ ಕಹಿ ನೆನಪು ಇನ್ನೂ ಇದೆ. ಇದು ಸರ್ಕಾರಕ್ಕೆ ಕೆಟ್ಟ ಹೆಸರು’

‘ತಮ್ಮ ಎಲೆಯಲ್ಲಿ ಆನೆ ಸತ್ತು ಬಿದ್ದಿರುವಾಗ, ನಮ್ಮ ಎಲೆಯಲ್ಲಿ ನೊಣವನ್ನು ಹುಡುಕಿದಂತಿದೆ ಬಿಜೆಪಿಗರ ದುಸ್ಥಿತಿ’

ಲೋಕಸಭೆಯ ಒಳಗೆ ಭದ್ರತಾ ಉಲ್ಲಂಘನೆಯು ತೀವ್ರ ಕಳವಳಕಾರಿಯಾಗಿದೆ: DCM D.K.Shivakumar

- Advertisement -

Latest Posts

Don't Miss