Thursday, June 19, 2025

Latest Posts

ಮ್ಯಾರೇಜ್ ಡೇಟ್ ಅನೌನ್ಸ್ ಮಾಡಿದ ಸ್ಯಾಂಡಲ್ ವುಡ್ ಜೋಡಿ ಹರಿಪ್ರಿಯಾ , ವಸಿಷ್ಠ ಸಿಂಹ

- Advertisement -

ಹಸೆಮಣೆ ಏರಲು ಸಜ್ಜಾದ ವಶಿಷ್ಠಸಿಂಹ ಹರಿಪ್ರಿಯ ಜೋಡಿ

ಸ್ಯಾಂಡಲ್‌ವುಡ್‌ನ ನಟ ವಸಿಷ್ಠಸಂಹ ಮತ್ತು ನಟಿ ಹರಿಪ್ರಿಯಾ ಕೆಲವು ತಿಂಗಳುಗಳಿ0ದ ಗುಟ್ಟಾಗಿ ಪ್ರೀತಿಸುತ್ತಿದ್ದೂ , ಈ ಸಂಗತಿ ಅವರಿಬ್ಬರು ಜೊತೆಯಾಗಿ ವಿಮಾನ ನಿಲ್ದಾಣದಲ್ಲಿ ಕೈ ಕೈ
ಹಿಡಿದುಕೊಂಡು ಓಡಾಡುತ್ತಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್ ವೈರಲ್ ಆಗುವ ಮೂಲಕ ಪ್ರೀತಿಯ ಗುಟ್ಟು ರಟ್ಟಾಯಿತು. ಫೋಟೋ ಬಹಿರಂಗವಾದ ನಂತರ
ಅಭಿಮಾನಿಗಳಿಗೆ ಅನುಮಾನ ಉಂಟಾಯಿತು. ನಂತರ ನಟ ವಶಿಸ್ಠಸಿಂಹ ಮತ್ತು ಹರಿಪ್ರಿಯ ಅಭಿಮಾನಿಗಳ ಅನುಮಾನಕ್ಕೆ ತೆರೆ ಎಳೆಯಲು ಡಿಸೆಂಬರ್ 2 ರಂದು ಎರಡು ಕುಟುಂಬಸ್ಥರ ಸಮ್ಮುಖದಲ್ಲಿ ನಿಶ್ಚಿತಾರ್ಥ ಮಾಡಿಕೊಂಡರು. ನಿಶ್ಚಿತಾರ್ಥ ಮಾಡಿಕೊಂಡ ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಅನುಮಾನಕ್ಕೆ ತೆರೆ ಎಳೆದರು. ಇನ್ನು ಇದೇ
ಜನವರಿ 26 ರಂದು ವಸಿಸ್ಠ ಸಿಂಹ ಹರಿಪ್ರಿಯಾ ಹಸಿಮಣೆ ಏರಲು ಸಜ್ಜಾಗಿದ್ದಾರೆ. ಇನ್ನು ಇವರ ಮದುವೆ ಸಮಾರಂಭ ಮೈಸೂರು ಊಟಿ ಹೆದ್ದಾರಿಯಲ್ಲಿರುವ ಗಣಪತಿ ಸಚ್ಚಿದಾನಂದ
ಆಶ್ರಮದಲ್ಲಿ ನೆರವೇರಲಿದೆ. ಇನ್ನು ಮದುವೆ ಪೂರ್ವ ತಯಾರಿಗಾಗಿ ಸಂಸದ ಪ್ರತಾಪ್ ಸಿಂಹನ ಜೊತೆ ಆಶ್ರಮಕ್ಕೆ ಆಗಮಿಸಿದ ಭಾವಿ ದಂಪತಿಗಳು ಸ್ವಾಮೀಜಿಗಳ ಆಶಿರ್ವಾದ ಪಡೆದರು. ಇನ್ನು ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ರಾಜೇಂದ್ರ ಈ ವೇಳೆ ಹಾಜರಿದ್ದು, ಆಶ್ರಮಕ್ಕೆ ಆಗಮಿಸಿದ ಭಾವಚಿತ್ರವನ್ನು ಸಂಸದ ಪ್ರತಾಪ್ ಸಿಂಹ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊ0ಡಿದ್ದಾರೆ .

ಶಿವರಾಜ್​ ಕುಮಾರ್ ಅವರ 125ನೇ ಸಿನಿಮಾ “ವೇದ” ಸೂಪರ್ ಹಿಟ್

ರಾಮ್ ಚರಣ್ ಮತ್ತು ಉಪಾಸನಾ ಫೋಟೋ ವೈರಲ್

ಕಾಂತಾರಗೆ ನಾನು ಫಿದಾ..! – ನಟಿ ಶ್ರೀಲೀಲಾ

- Advertisement -

Latest Posts

Don't Miss