Friday, July 11, 2025

Latest Posts

ನಾಲಾಯಕ್ ಕರ್ನಾಟಕ ಸರ್ಕಾರ ಎಂದು ಘೋಷಣೆ ಕೂಗಿದ MES ಪುಂಡರು..!

- Advertisement -

www.karnatakatv.net: ಬೆಳಗಾವಿ: ನಗರದಲ್ಲಿ ಮತ್ತೆ ಎಂಇಎಸ್ ತನ್ನ ಚಾಳಿಯನ್ನು ಮುಂದುವರೆಸಿದೆ. ಜಿಲ್ಲೆಯ ಅಪರ ಜಿಲ್ಲಾಧಿಕಾರಿಗಳ ಮುಂದೆಯೇ ನಾಲಾಯಕ್ ಕರ್ನಾಟಕ ಸರಕಾರ ಎಂದು ಹೇಳುವ ಮೂಲಕ ಪುಂಡಾಟಿಕೆ ಮೆರೆದು ಮತ್ತೆ ತನ್ನ ಉದ್ಧಟತನ ಪ್ರದರ್ಶಿಸಿದೆ.

ಬೆಳಗಾವಿಯಲ್ಲಿ ನಾಮಫಲಕಗಳಲ್ಲಿ ಕನ್ನಡ ಹಾಗೂ ಇಂಗ್ಲೀಷ್ ಭಾಷೆಯ ಜೊತೆಗೆ ಮರಾಠಿ ಭಾಷೆ ಬಳಕೆ ಮಾಡಿಬೇಕು. ಪಾಲಿಕೆ ಮೇಲಿನ ಕನ್ನಡ ಧ್ವಜವನ್ನು ತೆಗೆದುಹಾಕಬೇಕು. ಇಲ್ಲವೇ ಪಾಲಿಕೆ ಮೇಲೆ ಭಗವಾ ಧ್ವಜ ಹಾಕಲು ಅವಕಾಶ ನೀಡಬೇಕು. ಅಲ್ಲದೇ ಮರಾಠಿ ಭಾಷಾ ಅಲ್ಪಸಂಖ್ಯಾತರ ಹಕ್ಕೊತ್ತಾಯ ಕುರಿತಂತೆ ಮಧ್ಯಮರ್ತಿ ಮಹಾರಾಷ್ಟ್ರ ಏಕೀಕರಣ ಸಮಿತಿಯು ಇಂದು ನಗರದ ಸಂಭಾಜಿ ವೃತ್ತದಲ್ಲಿ ಪ್ರತಿಭಟನೆ ಹಮ್ಮಿಕೊಂಡಿತ್ತು. ಇನ್ನು ಈ ಕುರಿತಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಲು ಹೊರಟಿದ್ದ ಎಂಇಎಸ್ ನಾಯಕರನ್ನು ಪೊಲೀಸರು ತಡೆದು ನಿಲ್ಲಿಸಿದರು. ಈ ವೇಳೆ ನಡು ರಸ್ತೆಯಲ್ಲಿಯೇ ಕುಳಿತು ಎಂಇಎಸ್ ಪ್ರತಿಭಟನೆಯನ್ನು ಪ್ರಾರಂಭಿಸಿತ್ತು.

ಈ ವೇಳೆ ಸ್ಥಳಕ್ಕೆ ಮನವಿ ಸ್ವೀಕರಿಸಲು ಆಗಮಿಸಿದ ಅಪರ ಜಿಲ್ಲಾಧಿಕಾರಿ ಅಶೋಕ ದುಡಗುಂಟಿಯವರ ಸಮ್ಮುಖದಲ್ಲಿಯೇ ನಾಲಾಯಕ ಕರ್ನಾಟಕ ಸರಕಾರ ಎಂದು ಪ್ರತಿಭಟನಾಕಾರರು ಘೋಷಣೆ ಕೂಗಿ,ಮೆರೆದಿದ್ದಾರೆ. ಈ ಮೂಲಕ ಸ್ಥಳದಲ್ಲಿಯೇ ಇದ್ದ ಅಪರ ಜಿಲ್ಲಾಧಿಕಾರಿಗಳಾದ ಅಶೋಕ ದುಡಗುಂಟುರವರಿಗೆ ಅವಮಾನ ಮಾಡಿದ ಪ್ರಸಂಗ ಕೂಡ ಕಂಡುಬoತು.

- Advertisement -

Latest Posts

Don't Miss