ಬೆಂಗಳೂರು: ರಾಜ್ಯದ ಹಲವೆಡೆ ನಾಳೆ ಭಾರಿ ಬಿರುಗಾಳಿ ಬೀಸಲಿದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಬಿರುಗಾಳಿ ತನ್ನ ಪ್ರತಾಪ ತೋರಲಿದ್ದು ಜನರು ಎಚ್ಚರದಿಂದಿರಲು ಹವಾಮಾನ ಇಲಾಖೆ ಸಲಹೆ ನೀಡಿದೆ.
ತಮಿಳುನಾಡಿನಲ್ಲೂ ಇದೇ ರೀತಿ ಪ್ರಚಂಡ ಬಿರುಗಾಳಿ ಏಳಲಿದೆ ಅಂತ ಮಾಹಿತಿ ನೀಡಿದೆ. ಬಿರುಗಾಳಿಯು 40-50 ಕಿ.ಮೀ ವೇಗದಲ್ಲಿ ಬೀಸಲಿದ್ದು ವಿದ್ಯುತ್ ಕಂಬ, ಮರಗಳು ಧರೆಗುರುಳುವ ಸಾಧ್ಯತೆಯಿದ್ದು, ಜನರು ಎಚ್ಚರದಿಂದಿರಲು ಹವಾಮಾನ ಇಲಾಖೆ ಸಲಹೆ ನೀಡಿದೆ.
ಇನ್ನುಳಿದಂತೆ ಈಶಾನ್ಯ ರಾಜ್ಯಗಳಾದ ಅಸ್ಸಾಂ, ತ್ರಿಪುರ, ಮಣಿಪುರ, ನಾಗಾಲ್ಯಾಂಡ್ ಮಿಜೋರಾಂ ಮತ್ತು ಮೆಗಾಲಯದಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗಲಿದೆ ಅಂತಲೂ ಇಲಾಖೆ ಮುನ್ಸೂಚನೆ ನೀಡಿದೆ.
ಮೇ 29ರಂದು ಮಂಡ್ಯದಲ್ಲಿ ಸ್ವಾಭಿಮಾನದ ವಿಜಯೋತ್ಸವ ಹೇಗಿರಲಿದೆ ಗೊತ್ತಾ..?ಈ ವಿಡಿಯೋ ತಪ್ಪದೇ ನೋಡಿ