Tuesday, October 14, 2025

Latest Posts

ಗಾಜಾದ ಮಕ್ಕಳ ಆಸ್ಪತ್ರೆಯಲ್ಲಿ ಸುರಂಗ ನಿರ್ಮಿಸಿದ ಉಗ್ರರು: ವೀಡಿಯೋ ರಿಲೀಸ್ ಮಾಡಿದ ಇಸ್ರೇಲ್ ಸೇನೆ

- Advertisement -

International News: ಗಾಜಾದ ಆಸ್ಪತ್ರೆ, ಶಾಲಾ ಕಟ್ಟಡಗಳನ್ನೇ ತಮ್ಮ ನೆಲೆಯಾಗಿಸಿಕೊಂಡಿರುವ ಹಮಾಸ್ ಉಗ್ರರು, ಅಲ್ಲೇ ಸುರಂಗ ಮಾರ್ಗವನ್ನು ಸಹ ನಿರ್ಮಿಸಿದ್ದಾರೆ. ಈ ಬಗ್ಗೆ ಇಸ್ರೇಲ್ ಸೇನೆ ವೀಡಿಯೋ ಮಾಡಿ, ಟ್ವೀಟ್ ಮೂಲಕ ರಿಲೀಸ್ ಮಾಡಿದೆ.

ಈ ಮೊದಲು ಇಸ್ರೇಲ್ ಮಕ್ಕಳ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡು, ಅವರ ಮೇಲೆ ದಾಳಿ ಮಾಡುತ್ತಿದೆ ಎಂದು ಹಮಾಸ್ ಸುದ್ದಿ ಹರಡಿಸಿತ್ತು. ಆದರೆ ಸತ್ಯ ಹೊರಹಾಕಿರುವ ಇಸ್ರೇಲ್, ನಾವು ಮಕ್ಕಳ ಆಸ್ಪತ್ರೆಯನ್ನು ಗುರಿಯಾಗಿಸಿಕೊಂಡಿರಲಿಲ್ಲ. ಬದಲಾಗಿ ಉಗ್ರರು ಮಕ್ಕಳ ಆಸ್ಪತ್ರೆಯನ್ನೇ ತಮ್ಮ ರಕ್ಷಣಾ ಕವಚವನ್ನಾಗಿ ಇರಿಸಿಕೊಂಡು, ತಮ್ಮ ಪ್ರಾಣ ಉಳಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಅಲ್ಲಿರುವ ಮಕ್ಕಳು, ಆ ಮಕ್ಕಳ ಪೋಷಕರು, ನರ್ಸ್‌ಗಳು, ವೈದ್ಯರು, ಆಸ್ಪತ್ರೆ ಸಿಬ್ಬಂದಿಗಳನ್ನು ಒತ್ತೆಯಾಳುಗಳಾಗಿ ಇರಿಸಿಕೊಂಡಿದ್ದರು. ಅವರನ್ನು ಬಿಡಿಸಲು ನಾವು ಪ್ರಯತ್ನಿಸುತ್ತಿದ್ದೇವೆ ಎಂದು ಇಸ್ರೇಲ್ ಸೇನೆ ಹೇಳಿದೆ. ಈ ಮೂಲಕ ಹಮಾಸ್ ಉಗ್ರರ ಕಪಟತನವನ್ನು ಇಸ್ರೇಲ್ ಸೇನೆ ಹೊರಗಿಟ್ಟಿದೆ.

ರ್ಯಾಂಟಸ್ಸಿ ಎಂಬ ಮಕ್ಕಳ ಆಸ್ಪತ್ರೆಯಲ್ಲಿ ಹಮಾಸ್ ಉಗ್ರರು ಸುರಂಗ ಕೊರೆದಿದ್ದು, ಇಲ್ಲಿಂದ ತನ್ನ ಮನೆಗೆ ಹಮಾಸ್ ಕಮಾಂಡರ್ ಸುರಂಗ ನಿರ್ಮಿಸಿಕೊಂಡಿದ್ದಾನೆ. ಶಾಲೆಯ ಪಕ್ಕದಲ್ಲೇ ಉಗ್ರನ ಮನೆಯಿದ್ದು, ಅಲ್ಲಿಂದ ಕೊಂಚ ದೂರದಲ್ಲಿರುವ ಆಸ್ಪತ್ರೆಗೆ ಸುರಂಗ ಮಾರ್ಗ ಮಾಡಲಾಗಿದೆ. ಇನ್ನು ವೀಡಿಯೋದಲ್ಲಿ ತೋರಿಸಿರುವ ಪ್ರಕಾರ, ಉಗ್ರನ ಮನೆಯಲ್ಲಿ ರಾಶಿ ರಾಶಿ ಶಸ್ತ್ರಾಸ್ತ್ರಗಳು ಪತ್ತೆಯಾಗಿದೆ.

ಈ ಸುರಂಗದಲ್ಲಿ ಏನೇನಿದೆ ಎಂದು ಇಸ್ರೇಲ್ ಸೇನಾ ಅಧಿಕಾರಿ ವಿವರಿಸುವಾಗ, ಅವರಿಗೆ ಒಂದು ಲೀಸ್ಟ್ ಸಿಕ್ಕಿದೆ. ಅದನ್ನು ಒಂದು ಕೋಣೆಯಲ್ಲಿ ಅಂಟಿಸಲಾಗಿದ್ದು, ಇಸ್ರೇಲ್ ವಿರುದ್ಧ ಎಲ್ಲೆಲ್ಲಿ ದಾಳಿ ಮಾಡಬೇಕು ಎಂಬುದನ್ನು ಅವರು ಪ್ಲಾನ್‌ ಮಾಡಿದ್ದನ್ನು, ಆ ಲೀಸ್ಟ್‌ನಲ್ಲಿ ಬರೆಯಲಾಗಿದೆ. ಈ ಲೀಸ್ಟ್‌ನಲ್ಲಿ ಅಕ್ಟೋಬರ್ 7ರಂದು ಇಸ್ರೇಲ್ ಮೇಲೆ ದಾಳಿ ಮಾಡಬೇಕು ಎಂಬುದನ್ನು ಬರೆದಿದ್ದು, ಯಾವ ಟೆರರಿಸ್ಟ್ ಎಲ್ಲಿ ದಾಳಿ ಮಾಡಬೇಕು ಎಂಬುದನ್ನು ಕೂಡ, ಹೆಸರನ್ನು ನಮೂದಿಸಿ ಬರೆಯಲಾಗಿದೆ.

ಈ ಸುರಂಗದಲ್ಲಿ ಉಗ್ರರು ಬಳಸುತ್ತಿದ್ದ ವಾಹನ, ಬಟ್ಟೆ, ಶಸ್ತ್ರಾಸ್ತ್ರಗಳು ಸೇರಿ ಹಲವು ವಸ್ತುಗಳನ್ನು ಇಸ್ರೇಲ್ ವಶಕ್ಕೆ ಪಡೆದಿದೆ. ಇಸ್ರೇಲ್ ಸೇನೆ ಇನ್ನು ಕೆಲವೇ ದಿನಗಳಲ್ಲಿ ಹಮಾಸ್ ಉಗ್ರರನ್ನು ಸದೆಬಡಿದು, ಗಾಜಾವನ್ನು ತನ್ನ ವಶಕ್ಕೆ ಪಡೆಯುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿದೆ.

ಗಾಜಾದಲ್ಲಿ ಮಕ್ಕಳ ದುರ್ಮರಣ, ಆಹಾರ ನೀರಿಲ್ಲದೇ ಪ್ರಾಣ ಕಳೆದುಕೊಳ್ಳುತ್ತಿರುವ ಕಂದಮ್ಮಗಳು

1000ಕ್ಕೂ ಹೆಚ್ಚು ಮಂದಿಯನ್ನು ಒತ್ತೆಯಾಳಾಗಿ ಇರಿಸಿಕೊಂಡಿದ್ದ ಹಮಾಸ್ ಕಮಾಂಡರ್‌ ಹತ್ಯೆ..

ಹಮಾಸ್ ಉಗ್ರರನ್ನು ಸಂಪೂರ್ಣವಾಗಿ ಸದೆಬಡಿಯುವುದೇ ನಮ್ಮ ಪಾಲಿನ ಕದನ ವಿರಾಮ: ನೇತನ್ಯಾಹು

- Advertisement -

Latest Posts

Don't Miss