ಹಾಸನ : ಆ.1 ರಿಂದ ಹಾಲು ಉತ್ಪಾದಕರಿಗೆ ಹೆಚ್ಚಿಗೆ ಮೂರು ರೂಪಾಯಿ ಕೊಡಲು ಮಂತ್ರಿ ಮಂಡಲದಲ್ಲಿ ಚರ್ಚೆ ಆಗಿದೆ, ಅದು ಜಾರಿಗೆ ಬರುತ್ತೆ. ಅದರ ಜೊತೆಯಲ್ಲಿ ಹಾಲಿನ ದರವೂ ಹೆಚ್ಚಾಗುತ್ತೆ, ಹಾಲು ಉತ್ಪಾದಕರಿಗೂ ಹೆಚ್ಚಾಗುತ್ತೆ. ಆ ಪೂರ್ಣ ಮೂರು ರೂಪಾಯಿಯನ್ನು ಉತ್ಪಾದಕರಿಗೆ ಕೊಡುತ್ತೇವೆ.
ಸರ್ಕಾರ ರೈತರ ಹಿತವನ್ನು ಕಾಪಾಡಲು ನಿರ್ಧಾರ ಕೈಗೊಂಡಿದೆ ಈಗಾಗಲೇ ರಾಜ್ಯದಲ್ಲಿ ಹಾಲು ಉತ್ಪಾದನೆ ಕಡಿಮೆಯಾಗಿದೆ. ಹಾಲು ಉತ್ಪಾದನೆ ಕಡಿಮೆಯಾಗಲು ಕಾರಣ ಉತ್ಪಾದನಾ ವೆಚ್ಚ ಜಾಸ್ತಿಯಾಗಿರುವುದು. ಹಾಲು ಉತ್ಪಾದನೆ ಹೆಚ್ಚಿಸಲು ಮೂರು ರೂಪಾಯಿ ರೈತರಿಗೆ ನೀಡಲಾಗುತ್ತಿದೆ 39 ರೂಪಾಯಿಗೆ ಹಾಲು ಮಾರಾಟ ಮಾಡುತ್ತಿದ್ದಾರೆ ಅದು 42 ರೂಪಾಯಿ ಆಗುತ್ತೆ. ನಮಗೆ ಗ್ರಾಹಕರು ಮುಖ್ಯ, ಉತ್ಪಾದಕರೂ ಮುಖ್ಯಯೂನಿಯನ್‌ಗಳಿಗೋಸ್ಕರ ಏನು ಹಾಲಿನ ದರ ಹೆಚ್ಚಿಸುತ್ತಿಲ್ಲ.
ಗ್ರಾಹಕರಿಗೆ ಮೂರು ರೂಪಾಯಿ ಹೆಚ್ಚಾಗುತ್ತೆ, ಆ ಪೂರ್ಣ ಪ್ರಮಾಣದ ಹಣ ಹಾಲು ಉತ್ಪಾದಕರಿಗೆ ಹೋಗುತ್ತೆ. ರಾಜ್ಯದಲ್ಲಿ 94 ಲಕ್ಷ ಲೀಟರ್ ಹಾಲು ಉತ್ಪಾದನೆ ಆಗುತ್ತಿತ್ತು, ಈಗ ಅದು 79, 80 ಲಕ್ಷ ಲೀಟರ್‌ಗೆ ಬಂದಿದೆ. ಹೆಚ್ಚು ಬಡವರಿರುವ ಗುಲ್ಬರ್ಗಾ, ಬೀದರ್, ಗುಲ್ಬರ್ಗಾ ಆ ಭಾಗದಲ್ಲಿ ಹಾಲಿನ ಪೌಡರ್ ಪೂರೈಕೆ ಮಾಡಲು ಆಗುತ್ತಿಲ್ಲ. ಅಲ್ಲಿನ ಸರ್ಕಾರಿ ಶಾಲೆಯ ಮಕ್ಕಳು, ಅಂಗನವಾಡಿ ಮಕ್ಕಳು ಕ್ಷೀರಭಾಗ್ಯದಿಂದ ವಂಚಿತಾಗುತ್ತಿದ್ದಾರೆ.ಈ ಬಗ್ಗೆ ನನ್ನ ಗಮನಕ್ಕೆ ಬಂದಿದೆ, ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದೇನೆ.
KC Valley Project-ಕೆ.ಸಿ ವ್ಯಾಲಿ ಬಗ್ಗೆ ಆರೋಪ ಕುರಿತು ಶಾಸಕ ಕೊತ್ತೂರು ಮಂಜುನಾಥ್ ಪ್ರತಿಕ್ರಿಯೆ.