ಗೂಡ್ಸ್ ಆಟೋಗೆ ಹಿಂಬದಿಯಿಂದ ಮಿನಿ ಕ್ಯಾಂಟರ್ ಡಿಕ್ಕಿ: ಪತಿ ಸಾವು, ಪತ್ನಿಯ ಸ್ಥಿತಿ ಗಂಭೀರ

Hassan News: ಹಾಸನ : ಗೂಡ್ಸ್ ಆಟೋಗೆ ಹಿಂಬದಿಯಿಂದ ಮಿನಿ ಕ್ಯಾಂಟರ್ ಡಿಕ್ಕಿ ಹೊಡೆದಿದ್ದು, ಸ್ಥಳದಲ್ಲೇ ಓರ್ವ ಸಾವನ್ನಪ್ಪಿದ್ದು, ಓರ್ವ ಮಹಿಳೆಗೆ ಗಂಭೀರ ಗಾಯವಾಗಿದೆ.

ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ, ಹಿರಿಸಾವೆ ಬಳಿ ಘಟನೆ ಈ ಘಟನೆ ನಡೆದಿದ್ದು, ಇಬ್ರಾಹಿಂ (45) ಸ್ಥಳದಲ್ಲೇ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಇಬ್ರಾಹಿಂ ಚನ್ನರಾಯಪಟ್ಟಣದ ಬಾಗೂರು ರಸ್ತೆಯ ನಿವಾಸಿಯಾಗಿದ್ದಾನೆ.  ಪತ್ನಿ ಜೊತೆ ತಮ್ಮ ಗೂಡ್ಸ್ ಆಟೋದಲ್ಲಿ ಬೆಂಗಳೂರು ಕಡೆಗೆ ತೆರಳುತ್ತಿದ್ದ. ಈ ವೇಳೆ  ಹಿಂಬದಿಯಿಂದ ಇಬ್ರಾಹಿಂ ಆಟೋಗೆ ವೇಗವಾಗಿ ಬಂದು, ಮಿನಿ ಕ್ಯಾಂಟರ್ ಡಿಕ್ಕಿ ಹೊಡೆದಿದೆ.

ಇಬ್ರಾಹಿಂ ಸ್ಥಳದಲ್ಲೇ ಸಾವು, ಪತ್ನಿ ಸ್ಥಿತಿ ಗಂಭೀರವಾಗಿದ್ದು, ಗಾಯಾಳುವಿಗೆ ಚನ್ನರಾಯಪಟ್ಟಣ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಡಿಕ್ಕಿ ರಭಸಕ್ಕೆ ಗೂಡ್ಸ್ ಆಟೋ ನಜ್ಜುಗುಜ್ಜಾಗಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.  ಹಿರಿಸಾವೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

3 ಲಕ್ಷ ಲೀಡ್ ನಿಂದ ಗೆಲ್ತಿನಿ: ಶೆಟ್ಟರ್ ಟಿಕೆಟ್ ತಪ್ಪಿಸುವ ತಂತ್ರ ಮಾಡಿಲ್ಲ ಎಂದ ಕೇಂದ್ರ ಸಚಿವ ಜೋಶಿ..!

ಪ್ರತಾಪ್‌ ಸಿಂಹಗೆ ಟಿಕೆಟ್ ಮಿಸ್: ಹಿಂದೂ ಹುಲಿ ಪ್ರಮೋದ್ ಮುತಾಲಿಕ್ ಆಕ್ರೋಶ.

ಕೂಡಲೇ ತಯಾರಿ ಆರಂಭಿಸೋಣ, ಪ್ರಚಾರಕ್ಕೆ ಇಳಿಯೋಣ. ದೇಶಕ್ಕಾಗಿ, ಮೋದಿಗಾಗಿ: ಸಂಸದ ಪ್ರತಾಪ್ ಸಿಂಹ

About The Author