Tuesday, September 23, 2025

Latest Posts

ಜ.24 ರಂದು ಹುಬ್ಬಳ್ಳಿಯಲ್ಲಿ ಮಿನಿ ಉದ್ಯೋಗ ಮೇಳ

- Advertisement -

Hubballi News: ಹುಬ್ಬಳ್ಳಿ: ನವನಗರದ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ‌ ಮಿನಿ ಉದ್ಯೋಗ ಮೇಳವನ್ನು ಜನೇವರಿ 24ರಂದು ಬೆಳಿಗ್ಗೆ 10.30 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ ನವನಗರದ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗಿದೆ.

ಮೇಳದಲ್ಲಿ 7 ಖಾಸಗಿ ವಲಯದ ಉದ್ಯೋಗದಾತರುಗಳು ಭಾಗವಹಿಸಿ, ತಮ್ಮ ಸಂಸ್ಥೆಯಲ್ಲಿ ವಿವಿಧ ಖಾಲಿ ಹುದ್ದೆಗಳಿಗೆ ಅಭ್ಯರ್ಥಿಗಳ ಸಂದರ್ಶನ ನಡೆಸಲಿದ್ದಾರೆ. ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಯಾವುದೇ ಪದವಿ, ಐ.ಟಿ.ಐ, ಡಿಪ್ಲೋಮಾ ( ಮೆಕ್ಯಾನಿಕಲ್, ಆಟೋಮೊಬೈಲ್, ಎಲೆಕ್ಟ್ರಿಕಲ್), ಬಿ.ಇ (ಎಲೆಕ್ಟ್ರಾನಿಕ್ಸ್, ಮೆಕ್ಯಾನಿಕಲ್, ಆಟೋಮೊಬೈಲ್) ಪೂರೈಸಿದ 18 ರಿಂದ 35 ವಯೋಮಿತಿಯ ಅಭ್ಯರ್ಥಿಗಳು ಸಂದರ್ಶನಕ್ಕೆ ಹಾಜರಾಗಬಹುದು.

ಅಭ್ಯರ್ಥಿಗಳು ತಮ್ಮ ಆಧಾರ ಕಾರ್ಡ, ಬಯೋಡಾಟಾ (ರೆಸ್ಯೂಮ) ಗಳ ಹೆಚ್ಚಿನ ಪ್ರತಿಗಳೊಂದಿಗೆ (ಕನಿಷ್ಟ 5 ಪ್ರತಿಗಳು) ತಮ್ಮ ಸ್ವಂತ ಖರ್ಚಿನಲ್ಲಿ ಉದ್ಯೋಗ ಮೇಳಕ್ಕೆ ಹಾಜರಾಗಬೇಕು. ಅಭ್ಯರ್ಥಿಗಳು https://forms.gle/3qV6Ynq3hggvftpG6 ವೆಬ್ ಸೈಟ್ ಮುಖಾಂತರ ನೋಂದಣಿ ಮಾಡಿಕೊಂಡು ಭಾಗವಹಿಸಬೇಕು.

ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ನವನಗರ, ಹುಬ್ಬಳ್ಳಿ ಅಥವಾ ದೂರವಾಣಿ ಸಂಖ್ಯೆ 0836-2225288, 9806905751, 9845826523 ಕಚೇರಿ ವೇಳೆಯಲ್ಲಿ ಸಂಪರ್ಕಿಸುವಂತೆ ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

‘ಅವರು ರಾಜಕೀಯವಾಗಿ ಮುಗಿಸಲು ಹೋದ್ರೆ, ಜನ ನನ್ನ ಪರವಾಗಿ ಇರ್ತಾರೆ’

ಕಾಂಗ್ರೆಸ್‌ನ ಚಿಲ್ಲರೆತನಕ್ಕೆ, ಬಾಲಿಶತನಕ್ಕೆ ಒಂದು ಮಿತಿ ಇರಬೇಕು: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ

‘ಇದು ಮುಂದುವರಿದರೆ ಪ್ರಾಮಾಣಿಕವಾಗಿ ತೆರಿಗೆ ಕಟ್ಟುವ ಈ ನಾಡಿನ ಪ್ರಭುಗಳಿಗೆ ಮೋಸ ಮಾಡಿದಂತಾಗುತ್ತದೆ’

- Advertisement -

Latest Posts

Don't Miss