Hassan News: ಹಾಸನ: ಬೇಲೂರು: ಬೇಲೂರು ತಾಲೂಕು ಹಾಸನ ರಸ್ತೆಯ ಸಂಕೇನಹಳ್ಳಿ ತಿರುವಿನ ಬಳಿ ಮಿನಿ ಟ್ರಕ್ ಹಾಗೂ ಕಾರು ಮುಖಮುಖಿ ಡಿಕ್ಕಿ ಹೊಡೆದಿದೆ. ಚಿಕ್ಕಮಗಳೂರಿಂದ ಹಾಸನಕ್ಕೆ ತೆರಳುತ್ತಿದ್ದ ಕಾರಿಗೆ ಹಾಸನದಿಂದ ಬೇಲೂರು ಕಡೆಗೆ ಬರುತ್ತಿದ್ದ ಮಿನಿ ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರಿನಲ್ಲಿ ಇದ್ದಂತಹ ಚಿಕ್ಕಮಂಗಳೂರಿನ ಹನಿಕ್ (೧೯ ವರ್ಷ) ತೀವ್ರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯ ಮೃತಪಟ್ಟಿದ್ದಾನೆ. ಮತ್ತೊಬ್ಬ ತೀವ್ರವಾಗಿ ಪೆಟ್ಟಾಗಿದ್ದು, ಹೆಚ್ಚಿನ ಚಿಕಿತ್ಸೆಗೆ ಹಾಸನಕ್ಕೆ ಕಳಿಸಲಾಗಿದೆ. ಲಾರಿಯ ಚಾಲಕ ವಾಹನವನ್ನು ಬಿಟ್ಟು ಪರಾರಿಯಾಗಿದ್ದು, ಸ್ಥಳಕ್ಕೆ ಬೇಲೂರು ಪೊಲೀಸರು ಆಗಮಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
‘ಗ್ಯಾರಂಟಿ ಹೆಸರಲ್ಲಿ ಮಂಕುಬೂದಿ ಎರಚಿದ್ದಾರೆ: ಸಾಲ ಮನ್ನಾ ವಿಚಾರದಲ್ಲಿ ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ’
ಕೋಲಾರದಲ್ಲಿ ಯೋಗಾ ದಿನ ಆಚರಣೆ: ಸಂಸದ ಮುನಿಸ್ವಾಮಿ ಭಾಗಿ, ಸ್ಥಳೀಯ ಶಾಸಕ, ಸಚಿವರು ಗೈರು..
‘ಸಿದ್ದರಾಮಯ್ಯ,ಜಾರಕಿಹೊಳಿ ಅವರೇ 135 ಸೀಟ್ ಸಿಕ್ಕಿದ್ದು EVM ನಿಂದ ಇದು ನೆನಪಿರಲಿ’