ಮಂಡ್ಯ: ಮಂಡ್ಯದಲ್ಲಿ ಮಾತನಾಡಿದ ಸಚಿವ ಅಶ್ವಥ್ ನಾರಾಯಣ, ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿ ಪರ ಅಲೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಡ್ಯಕ್ಕೆ ಪ್ರಧಾನಿ ಭೇಟಿ ಕೊಟ್ಟಾಗ ಬೆಂಬಲ ಎದ್ದು ಕಾಣುತ್ತಿತ್ತು. ಕೆ.ಆರ್.ಪೇಟೆಯಲ್ಲಿ ಬಿಜೆಪಿ ಖಾತೆ ತೆರೆದಿದ್ದೇವೆ. ರಾಜ್ಯದಲ್ಲಿ ಬಿಜೆಪಿ ಸಾಕಷ್ಟು ಅಭಿವೃದ್ಧಿ ಮಾಡಿದೆ. ಮೀಸಲಾತಿ ನೀತಿಯನ್ನು ಬಿಜೆಪಿ ಕೊಟ್ಟಿದೆ. ಎಲ್ಲರೂ ಬಿಜೆಪಿ ಪಕ್ಷವನ್ನು ಅಧಿಕಾರಕ್ಕೆ ತರಲು ಪಣ ತೊಟ್ಟಿದ್ದಾರೆ ಎಂದು ಅಶ್ವತ್ ನಾರಾಯಣ್ ಹೇಳಿದ್ದಾರೆ.
ಮಂಡ್ಯದಲ್ಲಿ ನಮಗೆ ಎದುರಾಳಿ ಜೆಡಿಎಸ್. ಜೆಡಿಎಸ್ ಪಕ್ಷ ಮಂಡ್ಯ ಜಿಲ್ಲೆಯಲ್ಲಿ ಪ್ರಬಲವಾಗಿದೆ. ಮಂಡ್ಯ ಜಿಲ್ಲೆ ಸಂಪೂರ್ಣ ಅಭಿವೃದ್ಧಿಗೆ ಬಿಜೆಪಿ ಮತ ಕೊಡಿ. ಮಂಡ್ಯ ಜಿಲ್ಲೆ ದೇಶದಲ್ಲೇ ಉತ್ತಮವಾಗಿ ಬೇಳಿಬೇಕು. ಅದಕ್ಕೆ ಬಿಜೆಪಿ ಪಕ್ಷವನ್ನು ಗೆಲ್ಲಿಸಬೇಕು ಎಂದು ಅಶ್ವತ್ಥ ನಾರಾಯಣ್ ಮನವಿ ಮಾಡಿದ್ದಾರೆ.
ಪದ್ಮನಾಭನಗರ ಕ್ಷೇತ್ರಕ್ಕೆ ಡಿಕೆ ಸುರೇಶ್ ನಾಮ ಪತ್ರ ಸಲ್ಲಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅಶ್ವತ್ಥ ನಾರಾಯಣ್, ಅವರ ಸ್ಟ್ರಾಟಜಿ ಏನಿದೆ ಅಂತ ಗೊತ್ತಿಲ್ಲ.ಇತ್ತೀಚೆಗೆ ಸಮೃದ್ಧಿ ನಾಡನ್ನು ಬಿಜೆಪಿ ಕಟ್ಟಿದೆ ಎಂದಿದ್ದಾರೆ.
ಇನ್ನು ವರುಣ ಹಾಗೂ ಕನಕಪುರ ಕಾಂಗ್ರೆಸ್ ಕಟ್ಟು ಹಾಕಲು ಬಿಜೆಪಿ ರಣತಂತ್ರ ವಿಚಾರಕ್ಕೆ ಪ್ರತಿಕ್ರಿಯಿಸಿದ ಅಶ್ವತ್ಥ್ ನಾರಾಯಣ್, ಯಾರನ್ನೂ ಕಟ್ಟು ಹಾಕೋಕೆ ಹೋಗಿಲ್ಲ. ಗೆಲ್ಲುವುದಕ್ಕೆ ಹೋಗಿರೋದು. ಬಿಜೆಪಿ ಪಕ್ಷ ಜನರ ಪರ ಇರುವ ಪಕ್ಷ . ನಮ್ಮ ಪ್ರತಿ ಪಕ್ಷಗಳೂ ಎರಡೂ ಕುಟುಂಬ ಪಕ್ಷಗಳು. ಕೆಲವೇ ಜನಕ್ಕೆ ಮಾತ್ರ ಸೀಮಿತವಾಗಿರುವ ಪಕ್ಷ ಈ ಪಕ್ಷ ಗಳು ಪ್ರಸ್ತುತವಾಗಿಲ್ಲ ಅಪಾಸ್ತೃತ ಆಗಿವೆ. ಕರ್ನಾಟಕ ಅಭವೃದ್ಧಿ ಆಗಬೇಕಾದರೆ ಬಿಜೆಪಿನೇ ಪರಿಹಾರ. ಮಂಡ್ಯ ಜಿಲ್ಲೆ ಅಭಿವೃದ್ಧಿ ಆಗಬೇಕಾದರೆ ಬಿಜೆಪಿನೇ ಆಯ್ಕೆ ಮಾಡಬೇಕು ಎಂದಿದ್ದಾರೆ.
ಅಲ್ಲದೇ, ವರುಣ ಕನಕಪುರದಲ್ಲಿ ಬಿಜೆಪಿ ಅಭ್ಯರ್ಥಿನೇ ಗೆಲ್ತಾರೆ. ಕನಕಪುರದ ಜೆಡಿಎಸ್ ವೋಟ್ ಸಂಪೂರ್ಣವಾಗಿ ಬಿಜೆಪಿಗೆ ಟರ್ನ್ ಆಗುತ್ತೆ. ವರುಣದಲ್ಲಿ ಸಿದ್ದರಾಮಯ್ಯ 1 ಲಕ್ಷ ಮತಗಳಿಂದ ಸೋಲಬಹುದು. ಯಾರ್ ಜೊತೆನು ಹೊಂದಾಣಿಕೆ ಪ್ರಶ್ನೆ ಇಲ್ಲಾ. ನೇರ ಸ್ಪರ್ಧೆ . ಕಾಂಗ್ರೆಸ್ ಜೆಡಿಎಸ್ ಎರಡು ಪಕ್ಷಗಳೂ ನಮಗೆ ವಿರೋಧ. ಗೆಲ್ಲೋದೊಂದೆ ಬಿಜೆಪಿ ಗುರಿ. ಈ ಬಾರಿ ಬಿಜೆಪಿ ಗೆ ಸಂಪೂರ್ಣ ಬಹುಮತ ಬಂದು ರಾಜ್ಯ ಅಭಿವೃದ್ದಿ ಕಾಣುತ್ತೆ ಎಂದು ಅಶ್ವತ್ಥ್ ನಾರಾಯಣ್ ಹೇಳಿದ್ದಾರೆ..
ಬಿಜೆಪಿ ಪಕ್ಷ ಬಿಟ್ಟು ಹೋದ ಶಾಸಕರು ಟಾರ್ಗೆಟ್ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಚಿವರು, ಬಿಜೆಪಿ ಪಕ್ಷ ಗಟ್ಟಿ ಪಕ್ಷ ಶಕ್ತಿ ಇರೋದಿಕ್ಕೆ ಟಿಕೆಟ್ ಕೊಟ್ಟಿಲ್ಲ. ಯಾರಿಗೆ ಕೊಡಬೇಕು ಯಾರಿಗೆ ಬಿಡಬೇಕು ಎಂಬ ಸ್ಪಷ್ಟ ನಿಲುವನ್ನು ನಮ್ಮ ಪಕ್ಷ ತೋಗೊಳುತ್ತೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಪಕ್ಷದ ರೀತಿ ಅಸಾಯಕ ಪಕ್ಷವಲ್ಲ. ತುಂಬಾ ಜನಕ್ಕೆ ಇವತ್ತು ಟಿಕೆಟ್ ಕೊಟ್ಟಿಲ್ಲ ಸದೃಢ ಪಕ್ಷವನ್ನು ಜನರು ಬಯಸುತ್ತಿದ್ದಾರೆ. ಲೀಡರ್ ಗೆ ಮನೆ ಹಾಕದೆ ಜನರಿಗೆ ಮನೆ ಹಾಕುವ ಪಕ್ಷ ಬಿಜೆಪಿ ಪಕ್ಷ. ಬಿಜೆಪಿ ಗೆ ಮತ್ತಷ್ಟು ಶಕ್ತಿ ಬಂದಿದೆ. ರಾಜ್ಯದಲ್ಲಿ 150 ಸ್ಥಾನ ಗೆಲ್ಲುತ್ತೇವೆ ಎಂದು ಅಶ್ವತ್ಥ್ ನಾರಾಯಣ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಂಡ್ಯ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಬಂಡಾಯ, ಪಕ್ಷೇತರ ಅಭ್ಯರ್ಥಿಯಾದ ಡಾ.ಹೆಚ್.ಕೃಷ್ಣ
ಶಾಸಕ ಎಂ.ಶ್ರೀನಿವಾಸ್ ನೇತೃತ್ವದಲ್ಲೇ ಜೆಡಿಎಸ್ ವಿರುದ್ಧ ಸ್ವಾಭಿಮಾನದ ಅಸ್ತ್ರ.
‘ನೀನು ಗಂಡ್ಸೆ ಅಲ್ಲ ಅಂತೆಲ್ಲ ನನ್ನನ್ನ ಬೈದ್ರು. ನಾನು ಸಹಿಸಿಕೊಂಡೆ ಆದ್ರೆ…’