Sunday, September 8, 2024

Latest Posts

ಕೋಲಾರದಲ್ಲಿ ಸಚಿವ ಬೋಸರಾಜು.! KC ವ್ಯಾಲಿ, ಅಕ್ಕಿ ಬಗ್ಗೆ ಹೇಳಿದ್ದೇನು.?

- Advertisement -

Kolar News: ಕೋಲಾರ: ಸಣ್ಣ ನೀರಾವರಿ ಇಲಾಖಾ ಸಚಿವ ಬೋಸರಾಜು ಇಂದು ಕೆಸಿ ವ್ಯಾಲಿ ಯೋಜನೆ ವೀಕ್ಷಣೆ ಮಾಡಿದರು. ಈ ಯೋಜನೆ ಕೋಲಾರ ಜಿಲ್ಲೆಗೆ ವರದಾನವಾಗಿದ್ದು, ಬೆಂಗಳೂರಿನ ತ್ಯಾಜ್ಯ ನೀರನ್ನು ಶುದ್ಧೀಕರಿಸಿ, ಕೋಲಾರ ಜಿಲ್ಲೆಯ ಕೆರೆಗಳನ್ನು ತುಂಬಿಸುವ ಯೋಜನೆ ಇದಾಗಿದೆ. ಹಾಗಾಗಿ ಸಚಿವರು ಈ ಯೋಜನೆ ವೀಕ್ಷಣೆ ಮಾಡಿದ್ದು, ಇವರಿಗೆ ನೀರಾವರಿ ಇಲಾಖೆ ಅಧಿಕಾರಿಗಳು, ಕೆಸಿ ವ್ಯಾಲಿ ಅಧಿಕಾರಿಗಳು ಸಾಥ್ ನೀಡಿದರು. ಇದಾದ ಬಳಿಕ ನರಸಾಪುರ ಪಂಪ್ ಹೌಸ್‌ಗೂ ಸಚಿವರು ಭೇಟಿ ನೀಡಿದ್ದಾರೆ.

ಈ ವೇಳೆ ಮಾತನಾಡಿದ ಸಚಿವರು, ಕೆಸಿ ವ್ಯಾಲಿ ಯೋಜನೆ ಪ್ರಾರಂಭಿಸಿದ್ದು ಸಿದ್ದರಾಮಯ್ಯ ಸರ್ಕಾರದಲ್ಲಿ. ಮೂರನೇ ಬಾರಿ‌‌ಶುದ್ದೀಕರಿಸಿ ಕೆರೆಗಳಿಗೆ ಹರಿಸಬೇಕು ಎನ್ನುವ ಒತ್ತಾಯವಿದೆ. ಅಧಿಕಾರಿಗಳ‌ ಜೊತೆ ಮಾತನಾಡಿ ಜನಾಭೀಪ್ರಾಯದಂತೆ ತಕ್ಷಣ ಕ್ರಮ ಕೈಗೊಳ್ಳುತ್ತೇನೆ ಎಂದಿದ್ದಾರೆ. ಇನ್ನು ಎರಡನೇಯ ಹಂತದ ಕೆಸಿ ವ್ಯಾಲಿ ಯೋಜನೆ ಕಾಮಗಾರಿ ವಿಚಾರದ ಬಗ್ಗೆ ಮಾತನಾಡಿದ ಸಚಿವರು, ಅಧಿಕಾರಿಗಳಿಗೆ ಹಾಗೂ ಗುತ್ತಿಗೆ ದಾರರಿಗೆ ಗುಣಮಟ್ಟದಿಂದ ಕಾಮಗಾರಿ ನಡೆಸಲು ಸೂಚಿಸಿದ್ದೇನೆ ಎಂದಿದ್ದಾರೆ.

ಕೇಂದ್ರ ಸರ್ಕಾರದಿಂದ ಹೆಚ್ಚುವರಿ ೫ ಕೆಜಿ ಅಕ್ಕಿ ನೀಡದ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವರು,  ಅಕ್ಕಿ ಕೋಡುತ್ತೇನೆ ಎಂದು ಒಪ್ಪಿ ಪತ್ರ ಬರೆದಿದ್ದರು. ಇದೀಗ ರಾಜ್ಯಕ್ಕೆ ಅಕ್ಕಿ‌ ಕೋಡೋದಿಲ್ಲ ಅಂತ ಹೇಳ್ತಿದ್ದಾರೆ. ಬಡವರಿಗೆ ಅಕ್ಕಿ ಕೊಡಬೇಕು ಅಂತ ರಾಜ್ಯ ಕಾಂಗ್ರೇಸ್ ಘೋಷಣೆ ಮಾಡಿದೆ. ಅಕ್ಕಿ ಸ್ಟಾಕ್ ಇದೆ ಕೊಡ್ತೇವೆ ಅಂತ ಹೇಳಿದ್ದರು. ನಮ್ಮ ಸಚಿವರು ಕೇಂದ್ರದ ದೆಹಲಿಯ ಸಚಿವರ ಬಳಿ ಹೋಗಿದ್ದಾರೆ. 3 ದಿನದಿಂದ ಪ್ರಯತ್ನಿಸುತ್ತಿದ್ದರೂ ನಮ್ಮ‌ ರಾಜ್ಯದ ಸಚಿವರ ಸಂಪರ್ಕಕ್ಕೆ ಸಿಗ್ತಾ ಇಲ್ಲ. ಯಾವ ಕಾರಣದಿಂದ ಹೀಗೆ ಕೇಂದ್ರ ಸರ್ಕಾರ ಮಾಡ್ತಿದೆ ಅನ್ನೋದನ್ನ ರಾಜ್ಯದ ಜನ ಅರ್ಥ ಮಾಡಿಕೊಂಡಿದ್ದಾರೆ. ಬಡವರಿಗೆ ಆಗಬೇಕಿದ್ದ  ಯೋಜನೆಯನ್ನು ವಿಫಲಗೊಳಿಸಲು ಬಿಜೆಪಿಯ ಕೇಂದ್ರ ಸರ್ಕಾರ ಮುಂದಾಗಿದೆ. ರಾಜ್ಯದ ಬಿಜೆಪಿ ನಾಯಕರು ಸಹ ಇದಕ್ಕೆ‌ ತದ್ವಿರುದ್ದ ಹೇಳಿಕೆಗಳನ್ನು ನೀಡುತ್ತಿದ್ದಾರೆ. ನಾವೇನು ಪುಕ್ಕಟೆ ಕೋಡಿ ಅಂತ ಕೇಳುತ್ತಿಲ್ಲ ಎಂದು ಹೇಳಿದ್ದಾರೆ.

ಅಲ್ಲದೇ, ಈ ಯೋಜನೆಯನ್ನು ಜಾರಿಗೆ ತಂದಿದ್ದು ಮೋದಿ ಸರ್ಕಾರ ಅಲ್ಲ, ಯುಪಿಎ ಸರ್ಕಾರದ ಅವಧಿಯಲ್ಲಿ. ಮನಮೋಹನ್ ಸಿಂಗ್ ಸೋನಿಯಾಗಾಂದಿ ಅವರು  CFA ಅನ್ನ ಜಾರಿಗೆ ತಂದ್ರು. ಅಂದಿನಿಂದ ಇಡೀ ದೇಶದಲ್ಲಿ ೫ ಕೆಜಿ ಅಕ್ಕಿ ಕೋಡೋ ಕಾರ್ಯಕ್ರಮ ಕಾಂಗ್ರೇಸ್ ಸರ್ಕಾರ ತಂತು. ರಾಜ್ಯದಲ್ಲಿ‌ ಬಡವರು ಕೂಲಿ ಕಾರ್ಮಿಕರು ಹೆಚ್ಚಾಗಿದ್ದಾರೆ.  ಅದಕ್ಕೆ ೫ ಕೆಜಿ‌ ಅಕ್ಕಿ ಕೊಡಿ ಅಂತ ಕೇಳುತ್ತಿದ್ದೇವೆ.

ನಮ್ಮ ಪ್ರಣಾಳಿಕೆ ಯಲ್ಲಿ ಇದನ್ನ ಸೇರಿಸಿದ್ದೇವೆ. ಅದರಂತೆ ಹೋಗಬೇಕು ಅಂತ ನಮ್ಮ ನಾಯಕರು ಪ್ರಯತ್ನ ಮಾಡುತ್ತಿದ್ದಾರೆ. ಈ ಹಿಂದೇಯೆ ಬಿಜೆಪಿಯ ರಾಷ್ಟ್ರಾಧ್ಯಕ್ಷ  ಜಿ.ಪಿ ನಡ್ಡಾ ನಮ್ಮ ಸರ್ಕಾರ ಬರದಿದ್ದರೆ ಕೇಂದ್ರದಿಂದ ಏನೂ ಸಿಗೋದಿಲ್ಲ ಅಂತ ಎಚ್ಚರಿಕೆ ಕೊಟ್ಟಿದ್ದರು. ಅದರಂತೆ ಕಾರ್ಯ ರೂಪಕ್ಕೆ ತರುವ ಮೂಲಕ‌ ಸೇಡಿನ ರಾಜಕಾರಣ ಮಾಡ್ತಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಗೆ ರಾಜ್ಯದ ಜನರು ತಕ್ಕ ಉತ್ತರವನ್ನು ನೀಡುತ್ತಾರೆ ಎಂದು ಬಿಜೆಪಿ ವಿರುದ್ದ ಸಚಿವರು ವಾಗ್ದಾಳಿ ನಡೆಸಿದ್ದಾರೆ.

‘ಸಿದ್ದರಾಮಯ್ಯ,ಜಾರಕಿಹೊಳಿ‌ ಅವರೇ 135 ಸೀಟ್ ಸಿಕ್ಕಿದ್ದು EVM ನಿಂದ ಇದು‌ ನೆನಪಿರಲಿ’

ಬ್ರ್ಯಾಂಡ್ ಬೆಂಗಳೂರು ಅಭಿಯಾನದ ವೆಬ್‌ಸೈಟ್‌ ಅಧಿಕೃತ ರಿಲೀಸ್: ಟ್ವೀಟ್ ಮೂಲಕ ಡಿಕೆಶಿ ವಿವರಣೆ

ಚಿಕ್ಕಬಳ್ಳಾಪುರದಲ್ಲಿ ಬಿಜೆಪಿ ಜಿಲ್ಲಾಮಟ್ಟದ ಕಾರ್ಯಕರ್ತರ ಸಭೆ

- Advertisement -

Latest Posts

Don't Miss