Political News: ಕೃಷಿ ಸಚಿವ ಎನ್. ಚಲುವರಾಯಸ್ವಾಮಿಯವರನ್ನು ಇಂದು ವಿಕಾಸಸೌಧ ಕಚೇರಿಯಲ್ಲಿ ಅಮೆರಿಕ ದೇಶದ ಅಲ್ಬಮ ರಾಜ್ಯದ ಔಬರ್ನ್ ವಿಶ್ವವಿದ್ಯಾಲಯದ ಡಾ. ಜಾನಕಿ ಅಲವಲಪಟ್ಟಿ, ಡೀನ್ ಅರಣ್ಯ ಮಹಾವಿದ್ಯಾಲಯ ವನ್ಯಜೀವಿ, ಡಾ. ಜಾರ್ಜ್ ಫ್ಲವರ್ಸ್, ಡಿನ್ ಮ್ಯಾಕನಿಕಲ್ ಇಂಜಿನಿಯರಿಂಗ್, ಡಾ. ಸೀಮಾ ಸ್ಟೀವಾರ್ಟ್ ಡೈರೆಕ್ಟರ್ ವೃತ್ತಿ ಪರ ಅಭಿವೃದ್ಧಿ, ಜಸ್ಟಿನ್ ಮಿಲ್ಲರ್, ಡಾ. ವೃಷಾಕ್ ರಾಘವ್ ಶಂಕರ್ ಗೌಡ, ಪ್ರಾಧ್ಯಾಪಕರು ಏರೋಸ್ಪೇಸ್ ವಿಭಾಗ, ಇವರುಗಳು ಭೇಟಿ ಮಾಡಿದರು..
ಇದೇ ವೇಳೆ ಕರ್ನಾಟಕದ ಕೃಷಿ ವಿಶ್ವವಿದ್ಯಾನಿಲಯಗಳೊಡನೆ ಹಾಗೂ ಔಬರ್ನ್ ವಿಶ್ವವಿದ್ಯಾಲಯ ಗಳ ನಡುವೆ ಕರ್ನಾಟಕ ಸರ್ಕಾರದ ಮಧ್ಯಸ್ಥಿಕೆಯಲ್ಲಿ ಕೃಷಿಗೆ ಸಂಬಂಧಿತ ಅರಣ್ಯ, ತೋಟಗಾರಿಕೆ ಹಾಗೂ ಪಶುಸಂಗೋಪನೆ ವಿಷಯದಲ್ಲಿ ಉನ್ನತ ವ್ಯಾಸಂಗಾಕ್ಕಾಗಿ ಚರ್ಚಿಸಿದರು..
ಈ ಕುರಿತು ಮಾನ್ಯ ಕೃಷಿ ಸಚಿವರು, ತೆಲಂಗಾಣ ರಾಜ್ಯದ ಕೃಷಿ ವಿವಿ ಜೊತೆ ಈಗಾಗಲೇ ಔಬರ್ಸ್ ವಿಶ್ವವಿದ್ಯಾನಿಲಯ ಒಡಂಬಡಿಕೆ ಮಾಡಿಕೊಂಡಿರುವುದರಿಂದ, ತೆಲಂಗಾಣ ಸರ್ಕಾರದೊಂದಿಗೆ ಚರ್ಚಿಸಿ ಪ್ರಸ್ತಾವನೆ ಸಿದ್ದ ಪಡಿಸಲು ಕೃಷಿ ಇಲಾಖೆ ಕಾರ್ಯದರ್ಶಿಗಳಿಗೆ ಸೂಚಿಸಿದರು.
ಸಭೆಯಲ್ಲಿ ಕೃಷಿ ಇಲಾಖೆ ಕಾರ್ಯದರ್ಶಿ ಡಾ.ರವಿಶಂಕರ್, ಆಯುಕ್ತ ವೈ.ಎಸ್.ಪಾಟೀಲ್, ಜಲಾನಯನ ಇಲಾಖೆ ಆಯುಕ್ತ ಮಹೇಶ್ ಶಿರೂರು, ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ ಉಪಕುಲಪತಿ ಸುರೇಶ್, ಕೃಷಿ ಇಲಾಖೆ ನಿರ್ದೇಶಕ ಡಾ.ಪುತ್ರ, ಜಲಾನಯನ ಅಭಿವೃದ್ಧಿ ಇಲಾಖೆ ನಿರ್ದೇಶಕ ಬಂಥನಾಳ್ ಸೇರಿದಂತೆ ಇತರೆ ಅಧಿಕಾರಿಗಳು ಭಾಗವಹಿಸಿದ್ದರು..