Saturday, December 21, 2024

Latest Posts

‘ಮರೆಯಬೇಡಿ 35% BJPಗೆ ಮತ ಹಾಕಿದವರಿಗೂ 1೦kg ಅಕ್ಕಿ ದೊರಕಲಿದೆ’

- Advertisement -

Political News: ಬೆಂಗಳೂರು: ಕಾಂಗ್ರೆಸ್ ಅಧಿಕಾರಕ್ಕೆ ಬರುವ ಮುಂಚೆ ತನ್ನ ಪ್ರಣಾಳಿಕೆಯಲ್ಲಿ ಪ್ರತೀ ಮನೆಯ ಸದಸ್ಯನಿಗೆ 10 ಕೆಜಿ ಅಕ್ಕಿ ಕೊಡುವುದಾಗಿ ಹೇಳಿತ್ತು. ಆದರೆ ಇದೀಗ, ಕೇಂದ್ರ ಸರ್ಕಾರ ಬರೀ 5 ಕೆಜಿ ಅಕ್ಕಿ ಕೊಡುತ್ತಿದೆ. ಉಳಿದಿದ್ದನ್ನ ತಡೆ ಹಿಡಿದಿದೆ ಎಂದು ಕಾಂಗ್ರೆಸ್ಸಿಗರು ಆರೋಪಿಸಿದ್ದಾರೆ.

ಇದಕ್ಕೆ ಪ್ರತ್ಯುತ್ತರವಾಗಿ, ಬಿಜೆಪಿ ಮಾಜಿ ಸಚಿವ ಸಿ.ಟಿ.ರವಿ ಟ್ವೀಟ್ ಮಾಡಿದ್ದು, ರಾಜ್ಯದ ಪ್ರತಿಯೊಬ್ಬ ಬಡವರಿಗೂ ಪ್ರತಿ ತಿಂಗಳೂ ಐದು ಕೆಜಿ ಅಕ್ಕಿ ಕೊಡುತ್ತಿರುವುದು ಪ್ರಧಾನಿ ನರೇಂದ್ರ ಮೋದಿಜಿ ಅವರ ನೇತೃತ್ವದ ಬಿಜೆಪಿ ಸರಕಾರ. ಸಿದ್ದರಾಮಯ್ಯ ನವರೇ ನಿಮ್ಮ ಪ್ರಣಾಳಿಕೆ ಪ್ರಕಾರ ನೀವು ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿ ನೀಡಿ. ಅಕ್ಕಿ ಹೊಂದಿಸಲು ಸಾಧ್ಯವಾಗದಿದ್ದರೆ ಅಲ್ಲಿಯವರೆಗೆ ಪ್ರತಿಯೊಬ್ಬರಿಗೂ ಹತ್ತು ಕೆಜಿ ಅಕ್ಕಿಯ ಮಾರುಕಟ್ಟೆ ದರವನ್ನು ಬಡವರ ಖಾತೆಗೆ ಹಾಕಿ ಎಂದು ಟ್ವೀಟ್ ಮಾಡಿದ್ದರು.

ಇದನ್ನು ಪ್ರಶ್ನಿಸಿ, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡ ಟ್ವೀಟ್ ಮಾಡಿ ತಿರುಗೇಟು ನೀಡಿದ್ದಾರೆ.
ಸಿ.ಟಿ.ರವಿಯವರೆ, ರಾಜ್ಯದ ಪ್ರತಿಯೊಬ್ಬ ಬಡವನಿಗೆ 5kg ಅಕ್ಕಿ ಸಿಗುತ್ತಿರುವುದು ನಿಮ್ಮ ಮೋದಿಯಿಂದಲ್ಲ ಬದಲಿಗೆ UPA2 ಅವಧಿಯಲ್ಲಿ ಜಾರಿಗೆ ಬಂದ ಆಹಾರ ಭದ್ರತಾ ಕಾಯ್ದೆಯಿಂದಾಗಿ. ದೇಶದ 66% ರಷ್ಟು ಜನರ ಹೊಟ್ಟೆ ತುಂಬಿಸುತ್ತಿರುವುದು ನಾವು ತಂದ ಕಾಯ್ದೆಯೇ ಹೊರತು ಇದರಲ್ಲಿ ನಿಮ್ಮ‌ ಮೋದಿ ಸರ್ಕಾರದ ಹೆಚ್ಚುಗಾರಿಕೆಯೇನಿಲ್ಲ.
ರವಿಯವರೆ, ನಾವು ಪ್ರಣಾಳಿಕೆಯಲ್ಲಿ ಹೇಳಿದಂತೆ 10kg ಅಕ್ಕಿ ಕೊಟ್ಟೇ ಕೊಡುತ್ತೀವಿ. ನಿಮಗೆ ರಾಜ್ಯದ ಜನರ ಮೇಲೆ ಅಷ್ಟು ಕಾಳಜಿ ಇದ್ದರೆ, ನಮ್ಮ ರಾಜ್ಯಕ್ಕೆ ಅಕ್ಕಿ ಮಾರಾಟ ಸ್ಥಗಿತಗೊಳಿಸಿರುವುದು ಯಾಕೆ ಎಂದು ನಿಮ್ಮ ಮೋದಿಯನ್ನು ಪ್ರಶ್ನಿಸಿ. ಕೇಂದ್ರದ ಮೇಲೆ ಒತ್ತಡ ಹೇರಿ. ಮರೆಯಬೇಡಿ 35% BJPಗೆ ಮತ ಹಾಕಿದವರಿಗೂ 1೦kg ದೊರಕಲಿದೆ ಎಂದು ದಿನೇಶ್ ಗುಂಡೂರಾವ್ ಟಾಂಗ್ ನೀಡಿದ್ದಾರೆ.

‘ಅಷ್ಟಕ್ಕೂ ಕೇಂದ್ರವು ಅಕ್ಕಿಯನ್ನು ಪುಗಸಟ್ಟೆ ನೀಡುತ್ತಿಲ್ಲ’

ನಾಳೆ ಮಂಡ್ಯ ಜನತೆಗೆ ಬೀಗರ ಊಟದ ಔತಣಕ್ಕೆ ಆಮಂತ್ರಿಸಿದ ಸುಮಲತಾ ಅಂಬರೀಷ್..

ಉತ್ತರಪ್ರದೇಶದ ಮಾಜಿ ಸಿಎಂ ಅಖಿಲೇಶ್ ಯಾದವ್‌ರನ್ನ ಭೇಟಿಯಾದ ನಿಖಿಲ್ ಕುಮಾರ್.

- Advertisement -

Latest Posts

Don't Miss