Hubballi news: ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ವರ್ಗಾವಣೆ ಧಂದೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿದ ಗುಂಡೂರಾವ್, ವರ್ಗಾವಣೆ ಮಾಡ್ತಾ ಇದ್ದೇವೆ ಪ್ರತಿ ಹೊಸ ಸರ್ಕಾರ ಬಂದಾಗ ಆಗುತ್ತೆ. ಅವರು ಹರಾಜು ಪ್ರಕ್ರಿಯೆ ಅಂತ ಆರೋಪ ಮಾಡ್ತಾ ಇದ್ದಾರೆ. ಯಾಕೆ ವರ್ಗಾವಣೆ ಮಾಡಿದ್ದೇವೆ ದುಡ್ಡು ತೊಗೊಂಡು ಮಾಡಿದ್ದೇವಾ? ಎಂದು ಬಿಜೆಪಿಗೆ ಮರುಪ್ರಶ್ನಿಸಿದ್ದಾರೆ.
ಅಲ್ಲದೇ, ಯಾವುದೇ ಎವಿಡೆನ್ಸ್ ಇಲ್ಲದೇ ಮಾತಾಡಿದ್ರೆ, ಪೆನ್ಡ್ರೈವ್ ಸಿಡಿ ಅಂತ ಮಾತಾಡ್ತಾರೆ ಅದ್ಯಾವುದೂ ಇಲ್ಲ. ನಮ್ಮನ್ನ ಗೋಜಿಗೆ ಸಿಲುಕಿಸಲು ಅಕ್ಕಿ ಕೊಡಲಿಲ್ಲ. ಇದೀಗ ಎಫ್ ಸಿ ಎ ಅವರು ಹರಾಜು ಮಾಡುತ್ತಿದ್ದಾರೆ ಖರೀದಿ ಮಾಡಲು ಯಾರು ಇಲ್ಲಾ. ನಮಗಾದ್ರೆ ಕೊಡಲಿಲ್ಲ. ಜನಕ್ಕೆ ಅಕ್ಕಿಗಿಂತ ಇದೆ ಖುಷಿ ಆಗಿದೆ. ದುಡ್ಡು ಕೊಡೋದೆ ಜನರಿಗೆ ಖುಷಿ ಯಾಗಿದೆ. ಐದು ಗ್ಯಾರಂಟಿ ವೇಗವಾಗಿ ಮಾಡಿದ್ದೇವೆ. ಎಲ್ಲಾ ಜಾತಿ ಧರ್ಮ ಎಲ್ಲರಿಗೂ ಸರಿಯಾಗಿ ಹೋಗ್ತಾ ಇದೆ. 1% ಕೂಡ ಭ್ರಷ್ಟಾಚಾರ ನಡೆಯಲು ಚಾನ್ಸ್ ಇಲ್ಲಾ ಎಂದು ಗುಂಡೂರಾವ್ ಸ್ಪಷ್ಟನೆ ನೀಡಿದ್ದಾರೆ.
ಸರ್ಕಾರದಲ್ಲಿ ಅಭಿವೃದ್ಧಿಗೆ ಹಣ ಇಲ್ಲಾ ಎಂಬ ವಿಪಕ್ಷ ನಾಯಕರ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿದ ಗುಂಡೂರಾವ್, ಎಲ್ಲಾ ಇಲಾಖೆಯಲ್ಲೂ ಅಭಿವೃದ್ದಿ ಮಾಡ್ತಾ ಇದ್ದೇವೆ. ಕಳೆದ 4 ವರ್ಷದಲ್ಲಿ ಎಲ್ಲವನ್ನು ಇವರು ಹಾಳು ಮಾಡಿದ್ದಾರೆ. ಬಿಜೆಪಿಯವರು ಎಲ್ಲ ಹಾಳು ಮಾಡಿದ್ದಾರೆ. ನಮ್ಮ ಇಲಾಖೆಯಲ್ಲಿ ಎಲ್ಲವನ್ನೂ ಹಾಳು ಮಾಡಿದ್ದಾರೆ. 108 ಯೋಜನೆ ಸೇರಿ ಎಲ್ಲವೂ ಹಾಗೇ ನಿಂತಿವೆ ಎಂದು ದಿನೇಶ್ ಗಂಭೀರ ಅರೋಪ ಮಾಡಿದ್ದಾರೆ.
ಇನ್ನು ಸಮಯ ಕೊಡಬೇಕಲ್ವಾ ನೋಡಿ ಅಭಿವೃದ್ಧಿ ಹೇಗೆ ಮಾಡ್ತೆವೇ ಅಂತ. ಸರ್ಕಾರಕ್ಕೆ ಹಣದ ಕೊರತೆ ಇದ್ದೆ ಇರುತ್ತೆ. ಇರುವುದರಲ್ಲಿ ನಾವು ಎಲ್ಲವನ್ನು ಮಾಡಲೇ ಬೇಕು ಎಂದಿದ್ದಾರೆ. ಇನ್ನು ಪಕ್ಷದ ಬಿಟ್ಟು ಹೋದವರನ್ನು ವಾಪಸ್ ಕರೆ ತರೋ ವಿಚಾರದ ಬಗ್ಗೆ ಮಾತನಾಡಿದ ಗುಂಡೂರಾವ್, ನಾವು ಯಾರನ್ನೂ ಕರೀತಿಲ್ಲ,ಅವರೇ ಬರ್ತೀದಾರೆ. ಬಿಜೆಪಿ, ಜೆಡಿಎಸ್ ನವರು ಅವರೇ ಬರ್ತೀದಾರೆ . ಯಾರು ಪ್ರಾಮಾಣಿಕರು,ನಮಗೆ ಹೇಗೆ ಹೊಂದಕೋತಾರೆ ಅನ್ನೋ ಆಧಾರದ ಮೇಲೆ ನಾವು ಪಕ್ಷಕ್ಕೆ ಕರೆದುಕೊಳ್ಳುತ್ತೇವೆ. ಅಧ್ಯಕ್ಷರು ಹೇಳಿದ್ದಾರಲ್ಲ ಬರಬೇಕು ಅಂತ ನಾವು ಯಾರ ಹಿಂದೆನೂ ಹೋಗ್ತಿಲ್ಲ. ಕೆಲವರು ಬರಬೇಕು ಅಂತಾ ಇದಾರೆ ಎಂದು ಗುಂಡೂರಾವ್ ಹೇಳಿದ್ದಾರೆ.
ಜಗದೀಶ ಶೆಟ್ಟರ್ ಗೆ ಅಮಿತ್ ಶಾ ಕರೆ ಮಾಡಿರೋ ವಿಚಾರದ ಬಗ್ಗೆ ಪ್ರತಿಕ್ರಿಯಿಸಿದ ಗುಂಡೂರಾವ್, ಅವರೇ ಹೇಳಿದ್ದಾರೆ ನಮಗೆ ಯಾವುದೇ ಕರೆ ಬಂದಿಲ್ಲ ಅಂತ. ಲೋಕಸಭಾ ಚುನಾವಣೆಯಲ್ಲಿ 20 ಕ್ಕೂ ಹೆಚ್ಚು ಸೀಟ್ ಗೆಲ್ತೀವಿ ಎಂದು ಗುಂಡೂರಾವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಜಿಲ್ಲಾ ತಂಬಾಕು ನಿಯಂತ್ರಣ ಕೋಶದ ಅಧಿಕಾರಿಗಳಿಂದ ಬಾರ್ ಅಂಡ್ ರೆಸ್ಟೋರೆಂಟ್ ಅಂಗಡಿಗಳ ಮೇಲೆ ದಾಳಿ
ವ್ಹೀಲಿಂಗ್ ಮಾಡುತ್ತಿದ್ದ ಪಿಎಸ್‌ಐ ಪುತ್ರನನ್ನೇ ಜೈಲಿಗೆ ದಬ್ಬಿದ ಮೈಸೂರು ಪೊಲೀಸರು!