Mandya News: ಮಂಡ್ಯ: ಮಂಡ್ಯದಲ್ಲಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ರಾಜೀನಾಮೆ ನೀಡಿದ ಬಳಿಕ ಮಾತನಾಡಿದ ರವೀಂದ್ರ, ನಾಟಿ ಬ್ರೀಡ್ ಎಂಬ ಸಚಿವ ಚೆಲುವರಾಯಸ್ವಾಮಿ ಹೇಳಿಕೆಗೆ ಪ್ರತಿಕ್ರಿಯಿಸಿದ್ದು, ಸಚಿವರು ನಾಟಿ ಕೋಳಿ ರುಚಿ ಗೊತ್ತಿಲ್ಲ, ಗಿರಿರಾಜ ಕೋಳಿಯನ್ನ ನಾಟಿಕೋಳಿ ಅನ್ಕೊಂಡಿದ್ದಾರೆ ಎಂದು ತಿರುಗೇಟು ನೀಡಿದ್ದಾರೆ.
ಸಚಿವರು ನಾಟಿ ಕೋಳಿ ತಿಂದಿಲ್ಲ. ಅವರು ಬೆಂಗಳೂರಿಗೆ ಬಿದ್ದು ಬಹಳ ದಿನ ಆಗಿದೆ. ಗಿರಿರಾಜ ಕೋಳಿಯನ್ನ ನಾಟಿಕೋಳಿ ಅನ್ಕೊಂಡಿದ್ದಾರೆ. ಪರಿಸ್ಥಿತಿ ಆ ರೀತಿಯಲ್ಲಿ ಇಲ್ಲ ಸ್ವಲ್ಪ ಪ್ರಜ್ಞೆ ಇರಬೇಕು. ನಮ್ಮೂರಲ್ಲಿ ನಮ್ಮ ಪೌಲ್ಟ್ರಿಯಲ್ಲಿ ಬೆಳೆದದ್ದು ನಾಟಿ ಕೋಳಿಯಾಗಲ್ಲ. ನಾಟಿ ಅಂದ್ರೆ ನಮ್ಮೂರಲ್ಲೆ ತಿರುಗಾಡಿ ತಿಪ್ಪೆಯಲ್ಲಿ ತಿಂದು ಬೆಳೆಯುವುದು. ಇದು ನಮ್ಮೂರಲ್ಲೆ ಬೆಳೆಸಿರುವ ಬಾಯ್ಲರ್ ಕೋಳಿ. ಸ್ಟಾರ್ ಚಂದ್ರು ವಿಷಯಕ್ಕೆ ಹೋಗಲ್ಲ ಎಂದು ನಾಟಿ ಬ್ರೀಡ್ ಅರ್ಥ ಹೇಳಿ ಸಚಿವ ಚಲುವರಾಯಸ್ವಾಮಿ ವಿರುದ್ದ ಡಾ.ರವೀಂದ್ರ ವ್ಯಂಗ್ಯವಾಡಿದ್ದಾರೆ.
ನಾವು ಕಾಂಗ್ರೆಸ್ ಪಕ್ಷ ಉಳಿಸಲು ಪಕ್ಷಕ್ಕೆ ಸಪೋರ್ಟ್ ಮಾಡ್ತೇವೆ. ಕಾಂಗ್ರೆಸ್ ಪಕ್ಷದಲ್ಲಿ ಇದೆ ವ್ಯಕ್ತಿ ಸ್ಪರ್ಧಿಸಿದ್ರೆ ತೀರ್ಮಾನ ತೆಗೆದುಕೊಳ್ಳುತ್ತೇವೆ. ಕಳೆದ ಬಾರಿ ಎಂಪಿ ಚುನಾವಣೆಯಲ್ಲಿ ಡಿಕೆಶಿ ಕರೆ ಮಾಡಿದ್ರು. ರಿಪಿಡೆಟ್ ಹಾಗಿ ಮಾಡಿದ್ದಕ್ಕೆ ಅವರ ನಂಬರ್ ಬ್ಲಾಕ್ ಮಾಡಿದ್ದೆ. ನನಗೆ ಬಂಡತನ ಇದೆ. ಈ ಬಾರಿಯ ಚುನಾವಣೆಯಲ್ಲಿ ಸಕ್ರಿಯವಾಗಿರ್ತೇನೆ ಎಂದು ರವೀಂದ್ರ ಹೇಳಿದ್ದಾರೆ.
ಸಂಸದೆ ಸುಮಲತಾ ಅವರ ಜೊತೆ ಇನ್ನು ಯಾವುದೇ ಕಾರಣಕ್ಕೂ ಹೋಗಲ್ಲ. ಹಣದ ಕಾರಣ ಬಿಟ್ಟು ಪಕ್ಷದ ಕೆಲಸ ಮಾಡಿ. ದುಡ್ಡು ಬೇಕು, ದುಡ್ಡು ಬೇಕು ಅಂತಾರೆ ಚುನಾವಣೆಗೆ ಎಷ್ಟು ಬೇಕು.? ಸಾರ್ವಜನಿಕವಾಗಿ 100ಕೋಟಿ ಅಂತ ಮಾತನಾಡ್ತಾರೆ ಹೊದ್ದು ಒಳಗೆ ಹಾಕಬೇಕು ಅಲ್ವ. ವೆಂಕಟರಮಣಗೌಡ ನಾಗಮಂಗಲ ಅಷ್ಟೆ ಕಾಂಗ್ರೇಸ್ ಮೆಂಬರ್ ಅಲ್ಲ. ಲೋಕಸಭಾ ಚುನಾವಣೆಯಲ್ಲಿ ಸ್ಟಾರ್ ಚಂದ್ರು, ಸುಮಲತಾ ಸ್ಪರ್ಧೆ ಮಾಡಿದ್ರೆ ನಾನು ವಿರೋಧ. ನಾವು ನಮ್ಮ ಜಮೀನು ಕಡೆಗೆ ಹೋಗ್ತೇವೆ ಬೆರೆಯವರು ಆದ್ರೆ ಮಾತ್ರ ಸಪೋರ್ಟ್ ಮಾಡ್ತೇವೆ ಎಂದು ರವೀಂದ್ರ ಹೇಳಿದ್ದಾರೆ.
ಶೇಕ್ ಹ್ಯಾಂಡ್ ಮಾಡಲು ಬಂದ ರಾಹುಲ್ ಗಾಂಧಿಗೆ ಆಲೂಗಡ್ಡೆ ಕೊಟ್ಟ ಬಿಜೆಪಿ ಕಾರ್ಯಕರ್ತರು
ಅಯೋಧ್ಯೆಗೆ ಭೇಟಿ ನೀಡಿ, ಚಾಮರ ಸೇವೆ ಸಲ್ಲಿಸಿದ ಬಿಜೆಪಿ ನಾಯಕ ನಳೀನ್ ಕುಮಾರ್ ಕಟೀಲ್
ಅನಂತ್-ರಾಧಿಕಾ ಪ್ರಿವೆಡ್ಡಿಂಗ್ ಕಾರ್ಯಕ್ರಮದಲ್ಲಿ ಚಿನ್ನದ ಶರ್ಟ್‌ನಲ್ಲಿ ಮಿಂಚಿದ ಮಾರ್ಕ್