ಹಾಸನ– ಹಾಸನ ಜಿಲ್ಲೆ ಬೇಲೂರಿನಲ್ಲಿ ಅಬಕಾರಿ ಸಚಿವ ಕೆ ಗೋಪಾಲಯ್ಯ ಮಾತನಾಡಿದ್ದು, ಕೆಂಪೇಗೌಡರ ಪ್ರತಿಮೆ ಅನಾವರಣಕ್ಕೆ ದೇವೇಗೌಡರನ್ನ ಆಹ್ವಾನ ಮಾಡಿಲ್ಲ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ್ದಾರೆ. ದೇವೇಗೌಡರು ಹಿರಿಯ ನಾಯಕರು ಅವರನ್ನು ಖುದ್ದು ಸಿಎಂ ಅವರೆ ಫೋನ್ ಮಾಡಿ ಆಹ್ವಾನ ಮಾಡಿದ್ದಾರೆ. ಈಗ ಕಾರ್ಯಕ್ರಮವೂ ಮುಗಿದಿದೆ. ಇದರ ಬಗ್ಗೆ ಈಗ ಏನೂ ಪ್ರತಿಕ್ರಿಯೆ ನೀಡಲ್ಲ. ದೇವೇಗೌಡರ ಬಗ್ಗೆ ನಮಗೆ ದೊಡ್ಡ ಗೌರವ ಇದೆ. ಏನಾದ್ರು ವಿಚಾರ ಇದ್ದರೆ ಅದನ್ನು ಸರಿಪಡಿಸೋ ಕೆಲಸ ಮಾಡೋಣ ಎಂದು ಹೇಳಿದರು.
‘ಗೋಪುರದ ರೀತಿ ಕಾಣುವುದೆಲ್ಲ ಸಾಬ್ರುದು ಅನ್ನೊದಾದ್ರೆ ನಾವ್ ಏನ್ ಮಾಡೊದು..?’
ಇನ್ನು ಕಾಡಾನೆ ದಾಳಿ ಬಗ್ಗೆ ಮಾತನಾಡಿದ ಗೋಪಾಲಯ್ಯ, ಹಾಸನ ಜಿಲ್ಲೆಯ ಕಾಡಾನೆ ಹಾವಳಿ ಬಗ್ಗೆ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ಅದಕ್ಕಾಗಿಯೇ ವಿಶೇಷ ತಂಡ ಬಂದು ಅಧ್ಯಯನ ಕೂಡ ಆಗಿದೆ. ಸಿಎಂ ಈ ವಿಚಾರವನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ತಜ್ಞರ ತಂಡ ವರದಿ ಕೊಟ್ಟ ಬಳಿಕ ಸಿಎಂ ಜೊತೆ ಮತ್ತೆ ಮಾತನಾಡುತ್ತೇವೆ. ಆನೆ ಹಾವಳಿ ತಡೆಗೆ ಏನೆಲ್ಲಾ ಮಾಡಬಹುದು ಎಂದು ಚರ್ಚೆ ಮಾಡಲಾಗುತ್ತೆ. ಒಂದೇ ದಿನಕ್ಕೆ ಎಲ್ಲವನ್ನೂ ಮಾಡಲು ಆಗಲ್ಲ. ರೈಲ್ವೆ ಬ್ಯಾರಿಕೇಡ್ ನಿರ್ಮಾಣ ಆನೆಗಳ ಸ್ಥಳಾಂತರದ ಕೆಲಸ ಹಂತ ಹಂತವಾಗಿ ಆಗುತ್ತೆ ಎಂದು ಹೇಳಿದ್ದಾರೆ.
ಮಾಜಿ ಸಿಎಂ ಸಿದ್ದರಾಮಯ್ಯ ಕೋಲಾರದಿಂದ ಸ್ಪರ್ಧೆ ಮಾಡಲಿದ್ದಾರೆಂಬ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಗೋಪಾಲಯ್ಯ, ಅವರು ರಾಜ್ಯದ ಎಲ್ಲಿಂದಲಾದರೂ ಸ್ಪರ್ಧೆ ಮಾಡಲಿ. ಆದರೆ ನಾವು ಎಲ್ಲಿ ಚುನಾವಣೆಯಿಂದ ಗೆದ್ದಿದ್ದೇವೊ ಅಲ್ಲಿಂದಲೇ ಸ್ಪರ್ಧೆ ಮಾಡುತ್ತೇವೆ. ಜನರಿಗೆ ಉತ್ತಮವಾದ ಕೆಲಸ ಮಾಡಿದ್ದರೆ ಜನ ಅಲ್ಲೆ ನಮಗೆ ಮತ ಕೊಡ್ತಾರೆ. ಯಾಕೆ ಅವರು ಕ್ಷೇತ್ರ ಬದಲಾವಣೆ ಮಾಡ್ತಾರೆ ಅವರಿಗೆ ಯಾರ ಭಯಾ ಗೊತ್ತಿಲ್ಲ ಅವರೇ ಹೇಳಬೇಕು. ಅವರು ಕೆಲಸ ಮಾಡಿದ್ದೆ ಆಗಿದ್ದರೆ ಬಾದಾಮಿಯಿಂದ ಯಾಕೆ ಸ್ಪರ್ದೆ ಮಾಡ್ತಿಲ್ಲ ಎಂದು ಗೋಪಾಲಯ್ಯ ಲೇವಡಿ ಮಾಡಿದ್ದಾರೆ.
ಎರಡೇ ದಿನಕ್ಕೆ ಕಿತ್ತು ಬಂದ ಡಾಂಬರು: ಕಳಪೆ ರಸ್ತೆ ಕಾಮಗಾರಿ ವಿರುದ್ಧ ಗ್ರಾಮಸ್ಥರ ಆಕ್ರೋಶ..
2018 ರಲ್ಲಿ ಜನರು ಕೈಹಿಡಿದಿದ್ದಾರೆ ಅಲ್ಲವೇ ಮತ ನೀಡಿದ್ದಾರೆ ಅಲ್ಲವೇ. ಹಾಗಿದ್ದಮೇಲೆ ಅಲ್ಲೇ ನಿಲ್ಲಬಹುದು ಅಲ್ಲವೇ..? ಜನರು ಅಲ್ಲಿಂದ ಗೆಲ್ಲಿಸಿ ಕಳಿಸಿದ್ದಾರೆ ಅಲ್ಲವೇ..? ಸೋಲಿನ ಭಯದಿಂದಲೇ ಅವರು ಕ್ಷೇತ್ರ ಹುಡುಕಾಡುತ್ತಿದ್ದಾರೆ. ಚುನಾವಣೆ ಯಲ್ಲಿ ನಾಮಪತ್ರ ಸಲ್ಲಿಸೋ ವೇಳೆಗೆ ಯಾವ ಕ್ಷೇತ್ರ ಹುಡುಕುತ್ತಾರೋ ಗೊತ್ತಿಲ್ಲ ಎಂದು ಗೋಪಾಲಯ್ಯ ವ್ಯಂಗ್ಯವಾಡಿದ್ದಾರೆ.