Sunday, September 8, 2024

Latest Posts

ಕಾಡುಕೊತ್ತನಹಳ್ಳಿ ಗ್ರಾಮ ಮಾದರಿ ಗ್ರಾಮವಾಗಬೇಕು: ಕೆ.ಗೋಪಾಲಯ್ಯ

- Advertisement -

ಕಾಡುಕೊತ್ತನಹಳ್ಳಿ ಗ್ರಾಮಪಂಚಾಯಿತಿಯು ಬಹಳ  ಅಚ್ಚುಕಟ್ಟಾಗಿ ಇತರರಿಗೆ ಮಾದರಿಯಾಗುವ ರೀತಿಯಲ್ಲಿ ನಿರ್ಮಾಣವಾಗಿದೆ. ಈ ಭಾಗದ ಜನರಿಗೆ ನೀಡಬೇಕಾದಂತಹ ಮೂಲ ಸೌಲಭ್ಯವನ್ನು ಗ್ರಾಮ ಪಂಚಾಯತಿಯಿಂದ ನೀಡಲಾಗುತ್ತಿದೆ. ಕಾಡುಕೊತ್ತನಹಳ್ಳಿ ಗ್ರಾಮ ಮಾದರಿ ಗ್ರಾಮವಾಗಬೇಕು ಎಂದು ಅಬಕಾರಿ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಗೋಪಾಲಯ್ಯ ಅವರು ತಿಳಿಸಿದರು.

ಮದ್ದೂರು ತಾಲ್ಲೂಕಿನ ಕಾಡುಕೊತ್ತನಹಳ್ಳಿ ಗ್ರಾಮದಲ್ಲಿ  ಇಂಧನ ಮತ್ತು ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವರಾದ ಕ್ರಿಶನ್ ಪಾಲ್ ಗುರ್ಜರ್ ರವರ ಅಧ್ಯಕ್ಷತೆಯಲ್ಲಿ ನಡೆದ ಗ್ರಾಮ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಕಾಡುಕೊತ್ತನಹಳ್ಳಿ ಒಳಗೊಂಡಂತೆ  ಇನ್ನೂ ಎರಡು ಗ್ರಾಮಗಳನ್ನು ಮಾದರಿ ಗ್ರಾಮವನ್ನಾಗಿ ಮಾಡಲು ಗ್ರಾಮ ಪಂಚಾಯತಿ ಅಧ್ಯಕ್ಷರು ಸದಸ್ಯರು ಕನಸು ಕಂಡು ಗ್ರಾಮದ ಅಭಿವೃದ್ದಿಗಾಗಿ 2.20 ಕೋಟಿ ರೂ ಗಳ  ಬೇಡಿಕೆಗಳನ್ನು ಇಟ್ಟಿದ್ದಾರೆ ಈ ಸಂಬಂಧ ಮುಖ್ಯಮಂತ್ರಿ ಯವರ ಜೊತೆ ಮಾತನಾಡಿ ಅನುದಾನವನ್ನು ಕೊಡಿಸುವಂತಹ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.

ಕಾರ್ತಿಕ ಹುಣ್ಣಿಮೆಯ ಪೂಜಾ ವಿಧಾನ…!

ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಿರುವ ಅನುದಾನ ಹಾಗೂ ಕೇಂದ್ರ ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ಸರಿಯಾದ ಸಮಯಕ್ಕೆ ತಲುಪುತ್ತಿದೆಯೇ ಎಂಬುದನ್ನು ಪರಿಶೀಲಿಸಿ ಫಲಾನುಭವಿಗಳಿಗೆ ಸಿಗಬೇಕಾದಂತಹ ಅನುಕೂಲತೆಗಳು ಸಿಗದಿದ್ದಲ್ಲಿ ಅವುಗಳನ್ನು ಕೊಡಿಸುವಂತಹ ಸಲುವಾಗಿ ಇಂಧನ ಮತ್ತು ಬೃಹತ್ ಕೈಗಾರಿಕೆಗಳ ರಾಜ್ಯ ಸಚಿವರಾದ ಕ್ರಿಶನ್ ಪಾಲ್ ಗುರ್ಜರ್ ರವರು ಮಂಡ್ಯ ಜಿಲ್ಲೆಗೆ ಎರಡನೇ ಬಾರಿ ಭೇಟಿ ನೀಡಿದ್ದಾರೆ ಎಂದರು.

ಕಾಡುಕೊತ್ತನಹಳ್ಳಿ ಗ್ರಾಮದ ಶಾಲೆ, ಗ್ರಾಮ ಪಂಚಾಯಿತಿ ಹಾಗೂ ರಸ್ತೆಗಳನ್ನು ಗಮನಿಸಿದಾಗ ಇಲ್ಲಿನ ಗ್ರಾಮ ಪಂಚಾಯತಿಯ ಅಧ್ಯಕ್ಷರು ಸದಸ್ಯರುಗಳು ತಮ್ಮ ಕುಟುಂಬದ ಆಸ್ತಿಯಂತೆ ಗ್ರಾಮವನ್ನ ಕಾಪಾಡಿಕೊಂಡು ಕೆಲಸವನ್ನು ನಿರ್ವಹಿಸುತ್ತಿದ್ದೀರಿ. ನಿಜಕ್ಕೂ ಶ್ಲಾಘನೀಯ ಕಾಡುಕೊತ್ತನಹಳ್ಳಿ ಗ್ರಾಮ ಪಂಚಾಯತಿ ರಾಜ್ಯಕ್ಕೆ ಮಾದರಿಯಾಗಬೇಕು ಇದಕ್ಕೆ ಬೇಕಾದಂತ ಸಹಕಾರವನ್ನು ಜಿಲ್ಲೆಯ ಉಸ್ತುವಾರಿ ಸಚಿವನಾಗಿ ನೀಡುತ್ತೇನೆ ಎಂದರು.

ರೈತರನ್ನು ಆರ್ಥಿಕವಾಗಿ ಸದೃಢಗೊಳಿಸಲು ಕೇಂದ್ರ ಸರ್ಕಾರದಿಂದ ವಿವಿಧ ಯೋಜನೆಗಳು: ಕೃಷ್ಣಪಾಲ್ ಗುರ್ಜರ್

ಕಾಡುಕೊತ್ತನಹಳ್ಳಿ ಗ್ರಾಮಕ್ಕೆ ಭೇಟಿ ನೀಡಿ ಸರ್ಕಾರದ ಯೋಜನೆಗಳು ಜನಸಾಮಾನ್ಯರಿಗೆ ತಲುಪುವ ಬಗ್ಗೆ  ಪರಿಶೀಲನೆ ನಡೆಸಿ ಜನಸಾಮಾನ್ಯರೊಂದಿಗೆ ಸಂವಾದ ನಡೆಸಲು ಕೇಂದ್ರ ಸರ್ಕಾರದಿಂದ ಬಂದಿರುವಂತಹ ಕ್ರಿಶನ್ ಪಾಲ್ ಗುರ್ಜರ್ ರವರಿಗೆ ಮಂಡ್ಯ ಜಿಲ್ಲೆಯ ಪರವಾಗಿ ಗ್ರಾಮದ ಪರವಾಗಿ ಧನ್ಯವಾದಗಳನ್ನು  ಅರ್ಪಿಸುತ್ತೇನೆ ಎಂದರು.

ಗ್ರಾಮ ಸಭೆಯಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಡಿ.ಎಸ್.ವೀರಯ್ಯ, ಉಪವಿಭಾಗಾಧಿಕಾರಿ ಆರ್.ಐಶ್ವರ್ಯ, ತಹಶೀಲ್ದಾರ್ ನರಸಿಂಹಮೂರ್ತಿ, ಸಮಾಜ ಕಲ್ಯಾಣ ಇಲಾಖೆಯ ಉನಿರ್ದೇಶಕ ರಂಗೇಗೌಡ,ಕೃಷಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎಸ್.ಅಶೋಕ, ತೋಟಗಾರಿಕೆ ಇಲಾಖೆಯ ನಿರ್ದೇಶಕ ಮಂಜುನಾಥ್ ಸೇರಿದಂತೆ ಇತರರು ಉಪಸ್ಥಿತರಿದ್ದರು.

- Advertisement -

Latest Posts

Don't Miss