Sunday, September 8, 2024

Latest Posts

ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಸಚಿವ ಗೋಪಾಲಯ್ಯ ಆಕ್ರೋಶ..

- Advertisement -

ಮಂಡ್ಯ: ಮೀಸಲಾತಿ ಹೋರಾಟದ ವಿಚಾರಕ್ಕೆ ಸಂಬಂಧಿಸಿದಂತೆ, ಮಂಡ್ಯದಲ್ಲಿ ಸಚಿವ ಕೆ. ಗೋಪಾಲಯ್ಯ, ಸಿಎಂ ಜೊತೆ ಮಾತನಾಡಿ ಎಲ್ಲಿ ಅನ್ಯಾಯ ಆಗಿದೆ ಅದನ್ನ ಸರಿಪಡಿಸುವ ಕೆಲಸ ಮಾಡ್ತೇವೆ ಎಂದಿದ್ದಾರೆ.

ಅಲ್ಲದೇ, ಮೀಸಲಾತಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ಕೊಟ್ಟ ಗೋಪಾಲಯ್ಯ, ಐದು ವರ್ಷ ಕಾಂಗ್ರೆಸ್ ಸರ್ಕಾರ ಇತ್ತು, ಸಂಪೂರ್ಣವಾಗಿ ಮಾಡಬಹುದಿತ್ತು. ರಾಜ್ಯದ ಜನತೆ ಅಧಿಕಾರ ಕೊಟ್ಟಿದ್ರು. ಅಧಿಕಾರ ಕೊಟ್ಟ ಸಂದರ್ಭದಲ್ಲಿ ಏಕೆ ಮಾಡಲಿಲ್ಲ. ಎಸ್ಸಿ,ಎಸ್ಟಿ ಸಮುದಾಯವನ್ನ ಸಿಎಂ ಬೊಮ್ಮಯಿ ನೇತೃತ್ವದ ಸರ್ಕಾರ ಸೇರಿಸಿದೆ. ಅವರು ಅಧಿಕಾರದಲ್ಲಿದ್ದಾಗ ಯಾಕೆ ಮಾಡಕ್ಕಾಗಿಲ್ಲ. ಸಿದ್ದರಾಮಯ್ಯ ಅವರೇ ಪ್ರಶ್ನೆ ಮಾಡಿಕೊಳ್ಳಬೇಕು ಎಂದಿದ್ದಾರೆ.

‘ಜೋಡೊ ಯಾತ್ರೆ ಓಡೋ ಯಾತ್ರೆಯಾಗಿದೆ, ಮರ್ಯಾದೆ ಹೋಯ್ತೆ ಹೊರತು ಲಾಭ ಇಲ್ಲ’

ಅಲ್ಲದೇ, ಈ ಕೆಲಸವನ್ನು ಧೈರ್ಯದಿಂದ ಮಾಡಿದ್ದು ನಮ್ಮ ಬೊಮ್ಮಾಯಿ. ರಾಜ್ಯದ ಜನತೆ ಅವಕಾಶ ಕೊಟ್ರು ಮಾಡಲಿಲ್ಲ. ಇವತ್ತು ನಮ್ಮ ಸರ್ಕಾರ ಮಾಡಿದ್ದು, ಮುಂದೆಯು ಸಹ ನಮ್ಮ ಸರ್ಕಾರನೇ ಮಾಡುತ್ತೆ ಎಂದಿದ್ದಾರೆ.

‘ಮೀಸಲಾತಿ ಕ್ರೆಡಿಟ್ ಬಿಜೆಪಿ ಪಕ್ಷಕ್ಕೆ ಮಾತ್ರ ಸಲ್ಲುತ್ತೆ’

ಪ್ರತಿಮೆ ವಿಚಾರದ ಬಗ್ಗೆ ಮಾತನಾಡಿದ ಗೋಪಾಲಯ್ಯ,  ಕೆಂಪೇಗೌಡರ ಪ್ರತಿಮೆ ಉದ್ಘಾಟನೆಗೆ ಪ್ರಧಾನಿ ಬರ್ತಿದ್ದಾರೆ. ರಾಜ್ಯಾದ್ಯಂತ ಅಭಿಯಾನಕ್ಕೆ ಚಾಲನೆ ಕೊಡಲಾಗುತ್ತಿದೆ. ಇವತ್ತು ಅಧಿಕಾರಿಗಳು, ಶಾಸಕರ ಜೊತೆ ಸಭೆ ನಡೆಸಲಾಗಿದೆ. ಅ.29 ರಂದು ಆದಿ ಚುಂಚನಗಿರಿ ನಿರ್ಮಲಾನಂದ ಸ್ವಾಮಿ ಕರೆದು ಚಾಲನೆ ಮಾಡಲಾಗತ್ತೆ. ಮೈಶುಗರ್ ಕಾರ್ಖಾನೆಯ ಯಾವುದೇ ಸಮಸ್ಯೆ ಇದ್ರು ಸರಿಪಡಿಸುತ್ತೇವೆ. ಸಿಎಂ ಮೈಶುಗರ್ ಬಗ್ಗೆ ಕಾಳಜಿ ವಹಿಸಿದ್ದಾರೆ. ಮಂಡ್ಯ ಜಿಲ್ಲೆಯ ರಸ್ತೆಗಳ ಸರಿಪಡಿಸುವ ಕೆಲಸ ಆಗುತ್ತೆ. ಸಿಎಂ ಜೊತೆ ಮಾತನಾಡಿದ್ದೇನೆ. ಅದಷ್ಟು ಬೇಗ ಕ್ರಮ ವಹಿಸ್ತೇವೆ ಎಂದಿದ್ದಾರೆ.

- Advertisement -

Latest Posts

Don't Miss