Monday, September 9, 2024

Latest Posts

‘ಹೋಗಿ ಅಂತ ಹೇಳೋಕೆ ಯಾರಿಗೂ ಅಧಿಕಾರವಿಲ್ಲ’- ‘ಹಳ್ಳಿ ಹಕ್ಕಿ’ಗೆ ಕುಟುಕಿದ ದೇವೇಗೌಡ

- Advertisement -

ಮೈಸೂರು: ಮೈತ್ರಿ ಸರ್ಕಾರದ ಕುರಿತಾಗಿ ಹೇಳಿಕೆ ನೀಡಿದ್ದ ಎಚ್.ವಿಶ್ವನಾಥ್ ಹೇಳಿಕೆಗೆ ಸಚಿವ ಜಿ.ಟಿ ದೇವೇಗೌಡ ಪ್ರತಿಕ್ರಿಸಿದ್ದಾರೆ. ಹೋಗಿ ಅಂತ ಹೇಳೋದಕ್ಕೆ ಯಾರಿಗೂ ಅಧಿಕಾರವಿಲ್ಲ ಅಂತ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಸಚಿವ ಜಿ.ಟಿ ದೇವೇಗೌಡ, ನಾಲ್ಕು ವರ್ಷ ಕುಮಾರಸ್ವಾಮಿಯವರೇ ಸಿಎಂ ಅಂತ ಸಿದ್ದರಾಮಯ್ಯ ಹೇಳಿದ್ದಾರೆ. ಸರ್ಕಾರ ಸುಭದ್ರ ಅಂತ ಕುಮಾರಸ್ವಾಮಿ ಕೂಡ ಭರವಸೆಯಿಂದಿದ್ದಾರೆ. ಹೀಗಿರುವಾಗ ಕಾಂಗ್ರೆಸ್ ನವರಿಗೆ ಇಷ್ಟವಿದ್ದರೆ ಇರಿ, ಇಲ್ಲವಾದರೆ ಬೆಂಬಲ ವಾಪಸ್ ಪಡೆದುಕೊಂಡು ಹೋಗಿ ಅಂತ ವಿಶ್ವನಾಥ್ ಹೇಳಿಕೆ ಸರಿಯಲ್ಲ. ಹೀಗೆ ಹೇಳೋದಕ್ಕೆ ಯಾರಿಗೂ ಅಧಿಕಾರ ಇಲ್ಲ. ಪಾಪ, ವಿಶ್ವನಾಥ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾಧ್ಯಮಗಳ ಮುಂದೆ ಏನೇನೋ ಹೇಳಿಕೆ ಕೊಟ್ಟು ಪ್ರಚಾರ ಮಾಡುತ್ತಿದ್ದಾರೆ. ಏನೇ ಸಮಸ್ಯೆಯಿದ್ದರೂ ನಾಲ್ಕು ಗೋಡೆ ಮಧ್ಯೆ ಕೂತು ಬಗೆಹರಿಸಿಕೊಳ್ಳಬೇಕು.ಅನಗತ್ಯವಾಗಿ ವಿವಾದಾತ್ಮಕ ಹೇಳಿಕೆಗಳನ್ನು ನೀಡಬಾರದು ಅಂತ ಸಚಿವ ದೇವೇಗೌಡ ಹೇಳಿದ್ದಾರೆ. ಅಲ್ಲದೆ ಈ ಬಗ್ಗೇ ಚರ್ಚೆ ಮಾಡೋದಕ್ಕೆ ಇಂದು ಜೆಡಿಎಸ್  ವರಿಷ್ಠ ದೇವೇಗೌಡರು ಸಭೆ ಕರೆದಿದ್ದಾರೆ ಅಂತ ಇದೇ ವೇಳೆ ಸಚಿವ ಜಿ.ಟಿ.ಡಿ ಮಾಹಿತಿ ನೀಡಿದ್ರು.

ದೇವೇಗೌಡರ ಆ ಮಾತಿಗೆ ಸಿದ್ದರಾಮಯ್ಯ ಹೇಳಿದ್ದೇನು ಗೊತ್ತಾ..? ಮಿಸ್ ಮಾಡದೇ ಈ ವಿಡಿಯೋ ನೋಡಿ

https://www.youtube.com/watch?v=w4OLypfQ6FA
- Advertisement -

Latest Posts

Don't Miss