Gadag News: ಗದಗ: ಗದಗದಲ್ಲಿ ಇಂದು ಮಾತನಾಡಿದ ಸಚಿವ ಹೆಚ್.ಕೆ.ಪಾಟೀಲ್ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಬಡವರಿಗೆ ಕೊಡಲಿಕ್ಕೆ, ಸರ್ಕಾರಕ್ಕೆ ಕೊಡಲಿಕ್ಕೆ ನಿಮ್ಮ ಬಳಿ ಅಕ್ಕಿಯಿಲ್ಲ. ಖಾಸಗಿಯವರಿಗೆ 15ಲಕ್ಷ ಮೆಟ್ರಿಕ್ ಟನ್ ಅಕ್ಕಿ ಮಾರುವುದಕ್ಕಿದೆಯಾ? ಎಂದು ಪ್ರಶ್ನಿಸಿದ್ದಾರೆ.
ಹಣವನ್ನು ಕೊಟ್ಟರೂ ಕೇಂದ್ರ ಬಡವರ ಅಕ್ಕಿಯನ್ನು ಕೊಡಲಿಲ್ಲ. ಹೀಗಾಗಿ ರಾಜ್ಯದ ಜನ್ರು ಬಿಜೆಪಿ ವಿರುದ್ಧ ಆಕ್ರೋಶಗೊಂಡಿದ್ದಾರೆ. ಒಬ್ಬ ಎಂಪಿಯಾದರೂ ರಾಜ್ಯಕ್ಕೆ ಅಕ್ಕಿ ಕೊಡು ಅಂತಾ ಕೇಳಿದ್ದಾರಾ? ಯಾಕೆ ನಮ್ಮ ರಾಜ್ಯಕ್ಕೆ ಅಕ್ಕಿ ಕೊಡಲ್ಲ ಅಂತಾ ಕೇಳಿದ್ದಾರಾ? ಬೊಮ್ಮಾಯಿ, ಕಟೀಲ್, ಯಡಿಯೂರಪ್ಪನವರು ಒಬ್ಬರಾದರೂ ಮಾತನಾಡಿದ್ದಾರಾ? ಮೋದಿಯವರು ಇದಕ್ಕೆ ಉತ್ತರಿಬೇಕು ಅಂತಾ ಸಚಿವ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಪ್ರವಾಸಕ್ಕೆ ಹೋಗಿರೋ ನನ್ನ ಹೆಂಡ್ತಿ ಇನ್ನೂ ಬಂದಿಲ್ಲಾ, ನಾನ್ ಸಾಯ್ಬೇಕು’
ಹುಬ್ಬಳ್ಳಿ ಧಾರವಾಡ ನೂತನ ಕಮಿಷನರ್ ಆಗಿ ಸಂತೋಷ್ ಬಾಬು ಪ್ರಭಾರಿಯಾಗಿ ನೇಮಕ
ಹಾಸನದಲ್ಲಿ ಬೈಕ್ ವ್ಹೀಲಿಂಗ್ ಪುಂಡರ ಹಾವಳಿ: ಇಬ್ಬರು ಯುವತಿಯರಿಗೆ ಗಂಭೀರ ಗಾಯ