Wednesday, April 16, 2025

Latest Posts

‘ಅಂದು ಭ್ರಷ್ಟಾಚಾರ ಮಾಡಿದವರ ಮನಸ್ಥಿತಿ ಹೇಗೆ ಇತ್ತು ಅಂತಾ ಊಹಿಸಬೇಕು’

- Advertisement -

Hubballi News: ಹುಬ್ಬಳ್ಳಿ: ಕಾನೂನು ಮತ್ತು ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ್ ಮಾತನಾಡಿದ್ದು, ಬಿಜೆಪಿ ಅಧಿಕಾರಾವಧಿಯಲ್ಲಿ ಕೋವೀಡ್ ನಲ್ಲಿ ಆದ ಹಗರಣ ತನಿಖೆಗೆ ಹೊಸ ಸಮಿತಿ ರಚನೆ ಮಾಡಲಾಗಿದೆ ಎಂದರು.

ಈ ಬಗ್ಗೆ ಮಾತು ಮುಂದುವರಿಸಿದ ಸಚಿವರು, ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಕುನ್ಹಾ ನೇತೃತ್ವದಲ್ಲಿ ಹೊಸ ಸಮಿತಿ ರಚನೆ ಮಾಡಲಾಗಿದೆ. ನೀತಿ, ಕರಾರು ಯಾವ ವೇಳೆಯಲ್ಲಿ ಆಗಿದೆ ಏನೆಲ್ಲಾ ಆಗಿದೆ ಎಷ್ಟು ಆಗಿದೆ ಎಂಬ ಕುರಿತು ತನಿಖಗೆ ಸೂಚಿಸಲಾಗಿದೆ. ಸತ್ಯಾನ್ವೇಷನೆ ಮಾಡುವ ನಿಟ್ಟಿನಲ್ಲಿ ತನಿಖೆ ಮಾಡಬೇಕು. ಕೋವೀಡ್ ನಂತಹ ಸಂದರ್ಭದಲ್ಲಿ, ಮಾನವೀಯತೆಗೆ ಸವಾಲು ಆಗಿ ಬಂದಿತ್ತು. ಜನರು ಹಾದಿ ಬೀದಿಯಲ್ಲಿ ರಸ್ತೆಯ ಜನರು ಸಾವನ್ನಪ್ಪಿದ್ದರು.

ಅಂತಹ ಸಂದರ್ಭದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ ಅಂದರೆ ಏನು. ಅಂದು ಭ್ರಷ್ಟಾಚಾರ ಮಾಡಿದವರ ಮನಸ್ಥಿತಿ ಹೇಗೆ ಇತ್ತು ಅಂತಾ ಊಹಿಸಬೇಕು. ಅಂತಹ ಸಂದರ್ಭದಲ್ಲಿ ಮಾಡಿದ ಭ್ರಷ್ಟಾಚಾರ ಅತ್ಯಂತ ಕೀಳು ತನದ್ದು. ಅತ್ಯಂತ ಪ್ರಮಾಣಕವಾಗಿ ಸತ್ಯವನ್ನು ಹೊರಗೆ ತರುವ ಕೆಲಸ ಆಗಲಿ. ಯಾರು ಅದಕ್ಕೆ ಕಾರಣ ಅವರ ಎಲ್ಲರಿಗೂ ಶಿಕ್ಷೆ ಆಗಲಿ ಎಂದು ಸಚಿವರು ಕಿಡಿ ಕಾರಿದ್ದಾರೆ.

ಕಾವೇರಿ ವಿವಾದ ಕುರಿತ ನಾವು ಸುಪ್ರೀಂ ಕೋರ್ಟ್ ಗೆ ಏನು ಮನವರಿಕೆ ಮಾಡಬೇಕು ಮಾಡಿದ್ದೇವೆ. ನಮ್ಮ ನಿಲುವು ಏನಿದೆ ತಿಳಿಸಿದ್ದೇವೆ. ಸುಪ್ರೀಂ ಕೋರ್ಟ್ ನವರು ಇನ್ನೊಂದು ಎರಡು ದಿನಗಳಲ್ಲಿ ವಿಚಾರಣೆ ಮಾಡುತ್ತಾರೆ. ನಮ್ಮ ವಾದ ನಮ್ಮ ಬೇಡಿಕೆ ಸಂಕಷ್ಟ ಸೂತ್ರ ಆಗಬೇಕು. ಇದಕ್ಕೆ ಸುಪ್ರೀಂ ಕೋರ್ಟ್‌ನವರು ಮನ್ನಣೆ ಮಾಡಬೇಕು ಎಂದು ಸಚಿವರು ಆಗ್ರಹಿಸಿದ್ದಾರೆ.

ಕಾವೇರಿ ಮ್ಯಾನೇಜ್ಮೆಂಟ್ ಹಾಗೂ ಕಾವೇರಿ ರಿವರ್ ವಾಟರ್ ಅಥಾರಟಿ ಅವರು 10 ಸಾವಿರ ಕ್ಯೂಸೆಕ್ಸ್ ನೀರು ಬಿಡಬೇಕು ಅಂತಾರೆ. ಅದನ್ನ ಕಡಿತ ಮಾಡಿ ಅಂತಾ ಕೇಳಿಕೊಂಡಿದ್ದೇವೆ. ಕಾನೂನಾತ್ಮಕವಾಗಿ ಸಹ ಹೋರಾಟ ನಡೆಸಿದ್ದೇವೆ. ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ನಮ್ಮ ಅಧಿಕಾರಿಗಳು ನೀರು ಬಿಡುಗಡೆ ಮಾಡುವ ಮುನ್ನ ತಕಾರರು ಅರ್ಜಿ ಸಹ ಕೊಟ್ಟಿದ್ದರು ಎಂದು ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.

DK Shivakumar :ಬೇರೆ ಪಕ್ಷದ ಶಾಸಕರ ಭೇಟಿಯಲ್ಲಿ ತಪ್ಪೇನಿದೆ?:

Bhoomi pooja: ಎಲ್ಇಪಿ ಬ್ಯಾಟರಿ ಉತ್ಪಾದನೆ ಘಟಕ ಭೂಮಿಪೂಜೆ ಕಾರ್ಯಕ್ರಮದಲ್ಲಿ ಡಿಸಿಎಂ

Chamarajanagar: ಚಾಮರಾಜನಗರದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ್ ಅವರ ಮಾಧ್ಯಮ ಪ್ರತಿಕ್ರಿಯೆ..!

- Advertisement -

Latest Posts

Don't Miss