Hassan News: ಹಾಸನ: ಹಾಸನ ಜಿಲ್ಲೆ ಆಲೂರು ತಾಲೂಕಿನ ಹೊನವಳ್ಳಿ ಗ್ರಾಮಕ್ಕೆ ಭೇಟಿ ನೀಡಿ, ಆನೆ ದಾಳಿಯಿಂದ ಸಾವನ್ನಪ್ಪಿದ ವೆಂಕಟೇಶ್ ಕುಟುಂಬಸ್ಥರಿಗೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಸಾಂತ್ವನ ಹೇಳಿದ್ದಾರೆ.
ಮೃತ ವೆಂಕಟೇಶ್ ಕಳೆದುಕೊಂಡಿದ್ದು ನನಗೆ ಅತೀವ ನೋವು ಆಗಿದೆ. ರಾಜ್ಯದಲ್ಲಿ ಶಾರ್ಪ್ ಶೂಟರ್ ಅಂತ ಹೆಸರು ವಾಸಿ ಆಗಿದ್ರು. ಆನೆ ಕಾರ್ಯಾಚರಣೆಯಲ್ಲಿ ಕೆಲಸ ವಿಫಲ ಆಗಿದೆ. ನಾನು ಅಧಿಕಾರಿಗಳಿಗೆ ಉತ್ತರ ಕೊಡುವಂತೆ ಶೋಕಾಸ್ ನೋಟಿಸ್ ನೀಡಿದ್ದೇನೆ. ಸರ್ಕಾರದಿಂದ 15 ಲಕ್ಷ ಪರಿಹಾರದ ಜೊತೆಗೆ 10 ಲಕ್ಷ ಹೆಚ್ಚು ಹಣ ಕೊಡಬೇಕು ಅಂತ ಅಂದುಕೊಂಡಿದ್ದೇವೆ ಎಂದು ಹೇಳಿದರು.
ಇನ್ನು ನಮ್ಮ ಸರ್ಕಾರ ವೆಂಕಟೇಶ್ ಮಗನಿಗೆ ಸರ್ಕಾರಿ ಕೆಲಸ ಕೊಡುವುದಾಗಿ ಹೇಳಿದೆ. ಇವತ್ತು ಹಾಸನ ಜಿಲ್ಲೆಯ ಅಧಿಕಾರಿಗಳ ಮೀಟಿಂಗ್ ಕರೆದಿದ್ದೇನೆ. ಆನೆ ಮಾನವನ ಸಂಘರ್ಷ ಇವತ್ತಿನ ವಿಚಾರ ಅಲ್ಲ. ಎಲ್ಲವು ನನ್ನ ಗಮನದಲ್ಲಿ ಇದೆ. ಬಹಳ ಬೇಗ ಈ ಸಂಘರ್ಷಕ್ಕೆ ಅಂತ್ಯ ಹಾಡಬೇಕಿದೆ.
ವೆಂಕಟೇಶ್ ನಮ್ಮ ಇಲಾಖೆಯಲ್ಲಿ ಅದ್ಭುತ ಸೇವೆ ಮಾಡಿದ್ದಾರೆ. ಅವರ ಸೇವೆ ಯಾರೂ ಮರೆಯಲು ಸಾಧ್ಯವಿಲ್ಲ. ಅವರನ್ನು ಕಳೆದುಕೊಂಡ ಅರಣ್ಯ ಇಲಾಖೆ ಅಷ್ಟೇ ಅಲ್ಲ ಇಡಿ ರಾಜ್ಯ ಬಡವಾಗಿದೆ. ಅವರಿಗೆ ಸಿಎಂ ಪ್ರಶಸ್ತಿ ಕೂಡ ಸಿಕ್ಕಿತ್ತು. ಕಾಡಾನೆ ಮಾನವ ಸಂಘರ್ಷ ತಡೆಗೆ ವೆಂಕಟೇಶ ದೇಶದ ಹಲವೆಡೆ ಕೆಲಸ ಮಾಡಿದ್ದಾರೆ. ಸಮಾಜಕ್ಕಾಗಿ ಅವರು ಕೆಲಸ ಮಾಡಿದ್ದಾರೆ. ಅರಣ್ಯ ಸಂರಕ್ಷಣೆ ವನ್ಯಜೀವಿ ಸಂರಕ್ಷಣೆ ಅವರ ಪ್ರವೃತ್ತಿ ಆಗಿತ್ತು.
ಆಗಸ್ಟ್ 31 ರಂದು ಗಾಯಗೊಂಡ ಆನೆಗೆ ಚಿಕಿತ್ಸೆ ಕಾರ್ಯಾಚರಣೆಗೆ ಹೋಗಿ ದುರ್ಘಟನೆ ಆಗಿತ್ತು. ಇದು ಅತ್ಯಂತ ದುಃಖದ ಸಂಗತಿ. ಅರಣ್ಯ ಇಲಾಖೆ ಸಿಎಂ ಹಾಗು ವೈಯಕ್ತಿಕವಾಗಿ ಅವರಿಗೆ ಶ್ರದ್ಧಾಂಜಲಿ ಹೇಳಿದ್ದೇನೆ. ಅವರ ಅಗಲಿಕೆ ಸಹಿಸುವ ಶಕ್ತಿ ಅವರ ಪರಿವಾರಕ್ಕೆ ಸಿಗಲಿ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ..
ವೆಂಕಟೇಶ ಕುಟುಂಬಕ್ಕೆ ಹದಿನೈದು ಲಕ್ಷ ಪರಿಹಾರ ನೀಡಲಾಗಿದೆ. ಇದನ್ನ ಹೊರತು ಪಡಿಸಿ ನಮ್ಮ ಫೌಂಡೇಶನ್ ಹಾಗು ಅರಣ್ಯ ಇಲಾಖೆಯಿಂದ ಹೆಚ್ಚುವರಿಯಾಗಿ ಹತ್ತು ಲಕ್ಷ ಪರಿಹಾರ ಕೊಡಲು ತೀರ್ಮಾನ ಮಾಡಲಾಗಿದೆ. ಇದೊಂದು ವಿಶೇಷ ಪ್ರಕರಣ ಎಂದು ಪರಿಗಣಿಸಿ ಸಿಎಂ ಜೊತೆಗು ಮಾತನಾಡಲಾಗಿದೆ. ಒಂದು ವಾರದಲ್ಲಿ ಈ ಪರಿಹಾರ ಅವರಿಗೆ ತಲುಪಲಿದೆ. ಪರಿಹಾರ ಮುಖ್ಯವಲ್ಲ ಜೀವ ಅಮೂಲ್ಯವಾದದ್ದು. ಅವರ ಸಾಧನೆ ಸೇವೆಗೆ ಶೌರ್ಯ ಪ್ರಶಸ್ತಿ ನೀಡಲು ಶಿಫಾರಸು ಮಾಡುತ್ತೇವೆ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಅವರ ಪರಿವಾರದಲ್ಲಿ ಒಬ್ಬರಿಗೆ ಉದ್ಯೋಗ ಕೊಡೊ ಬಗ್ಗೆ ಕೂಡ ತೀರ್ಮಾನ ಮಾಡಲಾಗಿದೆ. ಈ ಹುದ್ದೆಯನ್ನು ಖಾಯಂ ಮಾಡಲು ಸಚಿವ ಸಂಪುಟಕ್ಕೆ ಪ್ರಸ್ತಾವನೆಯನ್ನು ಸಲ್ಲಿಸುತ್ತೇನೆ. ಹಾಸನ ಜಿಲ್ಲೆಯಲ್ಲಿ ಆನೆ ದಾಳಿಯಿಂದ ಜನ ಸಾವಿಗೀಡಾಗಿದ್ದಾರೆ ಜನರಿಗೆ ತೊಂದರೆ ಆಗಿದೆ. ಇದೆಲ್ಲದಕ್ಕು ಶಾಶ್ವತ ಪರಿಹಾರ ಸಂಬಂದ ಚರ್ಚೆ ಮಾಡಲು ಸಭೆ ಕರೆಯಲಾಗಿದೆ. ಜನ , ಜನಪ್ರತಿನಿಧಿಗಳು ಹಿರಿಯ ಅಧಿಕಾರಿಗಳ ಸಲಹೆ ಪಡೆಯುತ್ತೇವೆ ಎಂದು ಸಚಿವರು ಹೇಳಿದ್ದಾರೆ.
ಈ ಬಗ್ಗೆ ವಿಶೇಷ ಗಮನ ಹರಿಸಿ ಕ್ರಮ ವಹಿಸುತ್ತೇವೆ. ದುರಂತ ತಪ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಹಾಸನ- ಕಾಡಾನೆ ಹಾವಳಿ ತಡೆ ಬಗ್ಗೆ ಇಂದೇ ಹಾಸನದಲ್ಲಿ ಸಭೆ ಮಾಡುತ್ತೇನೆ. ಸಭೆ ಬಳಿಕ ಬೆಂಗಳೂರಿನಲ್ಲಿ ಹೈಲೆವೆಲ್ ಸಭೆ ನಡೆಸುತ್ತೇವೆ. ಇದು ಹಾಸನ ಕೊಡಗು ಚಿಕ್ಕಮಗಳೂರಿನಲ್ಲಿ ಸಮಸ್ಯೆ ಇದೆ. ಬೆಂಗಳೂರು ರಾಮನಗರ, ಚಾಮರಾಜನಗರದಲ್ಲೂ ಸಮಸ್ಯೆ ಇದೆ. ಈ ವರ್ಷ ಇಲ್ಲಿಯವರೆಗೆ ರಾಜ್ಯದಲ್ಲಿ ಆನೆ ತುಳಿದು 22 ಜನ ಮೃತಪಟ್ಟಿದಾರೆ. ಪ್ರಾಣಿ ಸಂಘರ್ಷದಲ್ಲಿ 28 ಜನರು ಸಾವಿಗೀಡಾಗಿದ್ದಾರೆ. ಕಳೆದ ವರ್ಷ 53 ಜನ ಸಾವಿಗೀಡಾಗಿದ್ದರು ಎಂದು ಸಚಿವರು ಹೇಳಿದ್ದಾರೆ.
ಹೀಗಾಗಿ ಜೀವ ಹಾನಿ ತಡೆಯೋ ಬಗ್ಗೆ ಆನೆ ಕಂದಕ, ಸೊಲಾರ್ ಬೇಲಿ, ಆನೆ ಕ್ಯಾಂಪ್ ಮಾಡಲಾಗುತ್ತಿದೆ. ಅನುದಾನ ಕೊರತೆ ಬಗ್ಗೆ ಸಿಎಂ ಜೊತೆ ಮಾತಾಡಿ ಹೆಚ್ಚಿನ ಅನುದಾನ ಕೊಡಲು ಮನವಿ ಮಾಡಿದ್ದೇನೆ. ಈ ಸಮಸ್ಯೆಗೆ ಪರಿಹಾರ ಹುಡುಕಲು ಪ್ರಯತ್ನಮಾಡುತ್ತೇನೆ ಎಂದು ಸಚಿವರು ಹೇಳಿದ್ದಾರೆ.
‘ಅಧರ್ಮ ಅಳಿಸಲು ಶ್ರೀಕೃಷ್ಣನ ಅವತಾರದಂತೆ ನರೇಂದ್ರ ಮೋದಿಯವರು ದೇಶದಲ್ಲಿ ಇದ್ದಾರೆ’
‘ಒಂದು ರಾಷ್ಟ್ರ ಒಂದು ಚುನಾವಣೆ’ ಗೆ ಕಾರ್ಮಿಕ ಸಚಿವ ಸಂತೋಷ್ ಲಾಡ್ ವಿರೋಧ