ಬೆಂಗಳೂರು ಹಾಗೂ ಸುತ್ತಮುತ್ತಲಿನ ಹಳ್ಳಿ ಹಳ್ಳಿಗಳ ಪ್ರವಾಸವನ್ನು ಮಾಡಿ ಜಾತಿ ಭೇದವನ್ನು ಮರೆತು ಗ್ರಾಮಗಳಲ್ಲಿ ಕರೆ,ಕಟ್ಟೆ ನಿರ್ಮಾಣ ಮಾಡಿ ಅಭಿವೃದ್ದಿಗೆ ಶ್ರಮಿಸಿದ ಪುಣ್ಯ ಪುರುಷ ನಾಡಪ್ರಭು ಕೆಂಪೇಗೌಡ ಎಂದು ಅಬಕಾರಿ ಹಾಗೂ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಗೋಪಾಲಯ್ಯ ಕೆ ಅವರು ತಿಳಿಸಿದರು.
ಅವರು ಇಂದು ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವರಾದ ಡಾ: ಕೆ.ಸಿ ನಾರಾಯಣ ಗೌಡ ಅವರೊಂದಿಗೆ ಮದ್ದೂರು ತಾಲ್ಲೂಕಿನ ಸತ್ಯಾಗ್ರಹ ಸೌಧದಲ್ಲಿ ಪವಿತ್ರ ಮೃತ್ತಿಗೆಯನ್ನು ಸಂಗ್ರಹಿಸಿ ನಾಡ ಪ್ರಭು ಕೆಂಪೇಗೌಡ ಅವರ ಥೀಮ್ ಪಾಕ್೯ ಹಾಗೂ 108 ಅಡಿ ಕಂಚಿನ ಪ್ರತಿಮೆ ಉದ್ಘಾಟನೆಗೆ ಸಮರ್ಪಿಸಿ, 10 ದಿನಗಳಿಂದ 233 ಗ್ರಾಮ ಪಂಚಾಯತಿ ಹಾಗೂ ವಾಡ್೯ ಗಳಿಂದ ಸಂಗ್ರಹಿಸಿರುವ ಪವಿತ್ರ ಮೃತ್ತಿಗೆಗೆ ಪೂಜೆ ಸಲ್ಲಿಸಿ ಬೆಂಗಳೂರಿಗೆ ಬೀಳ್ಕೊಟ್ಟಿ ಮಾತನಾಡಿದರು
ನಾಡಪ್ರಭು ಕೆಂಪೇಗೌಡ ಅವರ ಪ್ರತಿಮೆಯನ್ನು ಅನಾವರಣ ಗೊಳಿಸಲು ಹಾಗೂ ಅಭಿವೃದ್ದಿ ಕಾರ್ಯಗಳಿಗೆ ಚಾಲನೆ ನೀಡಲು ಇದೇ ನವೆಂಬರ್ 11 ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಬೆಂಗಳೂರಿಗೆ ಆಗಮಿಸಲಿದ್ದಾರೆ ಎಂದರು.
ಪ್ರೀತಿಗಾಗಿ ಲಿಂಗ ಬದಲಿಸಿ, ವಿದ್ಯಾರ್ಥಿಯನ್ನೇ ವಿವಾಹವಾದ ಶಿಕ್ಷಕಿ
ಕೆಂಪೇಗೌಡ ಅವರು ಕೇವಲ ಒಂದು ಸಮುದಾಯಕ್ಕೆ ಸೇರಿದವರಲ್ಲ. ನಾಡಿನ ಸಮಸ್ತ ಜನತೆಗಾಗಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಿದ್ದಾರೆ ಹಾಗಾಗಿ ಇಡೀ ರಾಜ್ಯದಲ್ಲಿ ಮೃತ್ತಿಕೆ (ಮಣ್ಣು)ಸಂಗ್ರಹಣೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತೀರ್ಮಾನಿಸಿ ಎಲ್ಲಾ ಜಿಲ್ಲೆಗಳಿಂದ ಮೃತ್ತಿಕೆ ಸಂಗ್ರಹಿಸುವ ಕಾರ್ಯ ಕೈಗೊಂಡರು ಎಂದು ಹೇಳಿದರು.
ಮದ್ದೂರಿನ ಶಿವಪುರ ಸತ್ಯಾಗ್ರಹ ಸೌಧದ ಬಳಿ ಮೃತ್ತಿಕೆ (ಮಣ್ಣು)ಸಂಗ್ರಹಣೆ ಮಾಡುವ ಕಾರ್ಯಕ್ರಮವನ್ನು ಮಾಡುತ್ತಿರುವುದು ನಮ್ಮೆಲ್ಲರಿಗೂ ಹೆಮ್ಮೆಯ ವಿಷಯವಾಗಿದೆ ಎಂದರು.
ಕೆಂಪೇಗೌಡ ಅವರು ಮಾಡಿರುವ ಕೆಲಸವನ್ನು ನಾವೆಲ್ಲರೂ ಮರೆಯಲು ಸಾಧ್ಯವಿಲ್ಲ. ಪುಣ್ಯ ಪುರುಷ ಕೆಂಪೇಗೌಡ ಅವರು ಉತ್ತಮ ಕೆಲಸವನ್ನು ಮಾಡದೇ ಇದ್ದರೆ ಬೆಂಗಳೂರು ಈ ರೀತಿ ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ ಎಂದರು.
ಕೆಂಪೇಗೌಡರ ಜನ್ಮದಿನವನ್ನು ಅದ್ದೂರಿಯಾಗಿ ಆಚರಿಸಲು ಬಿಬಿಎಂಪಿ ನಿರ್ಧಾರ : 31 ಸಾಧಕರಿಗೆ ಪ್ರಶಸ್ತಿ ವಿತರಣೆ
ರಾಜ್ಯದ್ಯಾಂತ ಮೃತ್ತಿಕೆ ಯನ್ನು ಸಂಗ್ರಹಣೆ ಮಾಡುತ್ತಿದ್ದು, ಮಂಡ್ಯ ಜಿಲ್ಲೆಯ 233 ಗ್ರಾಮ ಪಂಚಾಯಿತಿಗಳಲ್ಲಿ ಎಲ್ಲಾ ಕಂದಾಯ ಗ್ರಾಮಗಳಲ್ಲಿ ಒಟ್ಟು 1495 ಗ್ರಾಮಗಳಲ್ಲಿ ಮೃತ್ತಿಕೆಯನ್ನು ಸಂಗ್ರಹಣೆ ಮಾಡಿ ಬೆಂಗಳೂರಿಗೆ ಕಳುಹಿಸುವಂತಹ ಕೆಲಸ ಇಂದು ನಡೆಯುತ್ತಿದೆ ಎಂದು ಹೇಳಿದರು.
ಬೆಂಗಳೂರು ವಿಮಾನ ನಿಲ್ದಾಣದಲ್ಲಿ 108 ಅಡಿ ಕೆಂಪೇಗೌಡರ ಪ್ರತಿಮೆಯನ್ನು ಅನಾವರಣ ಮಾಡಲಾಗುತ್ತಿದೆ. ಏರ್‌ಪೋರ್ಟ್ ನಿಂದ ಬಂದವರು ಪ್ರತಿಮೆ ನೋಡಿದರೆ ಇವರು ಕೆಂಪೇಗೌಡರು ಬೆಂಗಳೂರನ್ನು ಕಟ್ಟಿದಂತವರು. ಹತ್ತಾರು ಮಾರ್ಕೆಟ್, ನೂರಾರು ಕೆರೆಗಳನ್ನು , ನಿರ್ಮಾಣ ಮಾಡಿದ್ದಾರೆ. ಬೆಂಗಳೂರಿಗೆ ಒಂದು ದೊಡ್ಡ ಶಕ್ತಿ ಎಂದರೆ ಅದು ಕೆಂಪೇಗೌಡರ ಕೊಡುಗೆಗಳಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಹಾಗೂ ಕ್ರೀಡಾ ಸಚಿವ ಡಾ ಕೆ.ಸಿ ನಾರಾಯಣಗೌಡ ಅವರು ತಿಳಿಸಿದರು.
ಕದಂಬ ಜಂಗಮ ಮಠದ ರೇಣುಕ ಶಿವಚಾರ್ಯ ಸ್ವಾಮೀಜಿ ಅವರು ಮಾತನಾಡಿ
ಕೆಂಪೇಗೌಡರು ನಾಡಿನ ಅಭಿವೃದ್ಧಿಗಾಗಿ ಕೋಟೆ, ಕೆರೆ, ಎಲ್ಲಾ ವರ್ಗದವರಿಗೆ ಮಾರುಕಟ್ಟೆಯನ್ನು ನಿರ್ಮಾಣ ಮಾಡಿ ಬೆಂಗಳೂರನ್ನು ನಿರ್ಮಾಣ ಮಾಡಿದ್ದಾರೆ. ಕೋಟ್ಯಾಂತರ ಜನರು ಬೆಂಗಳೂರಿನಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ಅಂತಹ ಮಹಾನ್ ವ್ಯಕ್ತಿಗೆ ಮೃತ್ತಿಕೆ ಅರ್ಪಣೆ ಮಾಡಿ ಗೌರವ ಸಲ್ಲಿಸುತ್ತಿರುವುದು ನಮ್ಮೆಲ್ಲರ ಸೌಭಾಗ್ಯ ಎಂದರು.
ಆರೋಗ್ಯ ಸಮಸ್ಯೆಯಿಂದ ಚೇತರಿಸಿಕೊಂಡು, ಅಭಿಮಾನಿಗಳಿಗಾಗಿ ಪೋಟೋ ಹಂಚಿಕೊಂಡ ಸಮಂತಾ
ಮಣ್ಣು ಪವಿತ್ರವಾದ ವಸ್ತು. ನಾವು ಧರಿಸಿರುವ ಬಟ್ಟೆ, ಸೇವಿಸುವ ಆಹಾರ ನೀಡಿರುವುದು ಮಣ್ಣು. ರೈತರ ನಾಡದ ಮಂಡ್ಯದಲ್ಲಿ ಮಣ್ಣನ್ನು ಪೂಜಿಸುತ್ತೇವೆ. ಈ ಪುಣ್ಯದ ಕಾರ್ಯಕ್ರಮದಲ್ಲಿ ಪವಿತ್ರ ಮೃತ್ತಿಕೆಯನ್ನು ಸಮರ್ಪಣೆ ಮಡುತ್ತಿರುವುದು ಸಂತೋಷದ ವಿಷಯ ಎಂದರು.
ಅದಿಚುಂಚನಗಿರಿ ಮಠದ ಶ್ರೀ ಪುರುಷೋತ್ತಮನಂದ ಸ್ವಾಮೀಜಿ ಮಾತನಾಡಿ ಗ್ರಾಮೀಣ ಭಾಗದಿಂದ ಕಷ್ಟ ಎಂದು ಬೆಂಗಳೂರು ಸೇರಿದ ಜನರಿಗೆ ಉದ್ಯೋಗ ಕಲ್ಪಿಸುವ ರೀತಿಯಲ್ಲಿ ನಾಡ ಪ್ರಭು ಕೆಂಪೇಗೌಡ ಅವರು ಬೆಂಗಳೂರು ನಿರ್ಮಾಣ ಮಾಡಿದ್ದಾರೆ ಎಂದರು.
ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಡಾ: ಎಚ್ ಎನ್ ಗೋಪಾಲ ಕೃಷ್ಣ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯತೀಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಾಂತ ಎಲ್ ಹುಲ್ಮನಿ, ಅಪರ ಜಿಲ್ಲಾಧಿಕಾರಿ ಡಾ: ಎಚ್ ಎಲ್ ನಾಗರಾಜು ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸಂಜೀವಪ್ಪ ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.